ಹೆತ್ತವರಿಗೆ ಹೆಗ್ಗಣ ಮುದ್ದು, ಸಿಡ್ನಿ ಬೀಚ್​ನಲ್ಲಿ ಗುಂಡಿನ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ರೂ ಮಗ ಒಳ್ಳೇವ್ನು ಎಂದ ತಾಯಿ

ಹೆತ್ತವರಿಗೆ ಹೆಗ್ಗಣ ಮುದ್ದು, ಸಿಡ್ನಿ ಬೀಚ್​ನಲ್ಲಿ ಗುಂಡಿನ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ರೂ ಮಗ ಒಳ್ಳೇವ್ನು ಎಂದ ತಾಯಿ


ಸಿಡ್ನಿ, ಡಿಸೆಂಬರ್ 15: ಆಸ್ಟ್ರೇಲಿಯಾದ ಸಿಡ್ನಿ(ಸಿಡ್ನಿ) ಭಾನುವಾರದ ಬೊಂಡಿ ಬೀಚ್‌ನಲ್ಲಿ ಪಾಕಿಸ್ತಾನದ ಮೂಲದ ತಂದೆ, ಮಗ ಸಾರ್ವಜನಿಕರ ಮೇಲೆ ಗುಂಡಿನ ದಾಳಿ. ಘಟನೆಯಲ್ಲಿ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬಳಿಕ ಆರೋಪಿಗಳ ಮೇಲೆ ಪ್ರತಿದಾಳಿ ನಡೆಸಿದ್ದು, ಘಟನೆಯಲ್ಲಿ ಆರೋಪಿ ತಂದೆ ಸಾವನ್ನಪ್ಪಿದ್ದು, ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ. ಆರೋಪಿಗಳನ್ನು ಸಾಜಿದ್ ಅಕ್ರಮ್ ಆತನ ಮಗ ನವೀದ್ ಅಕ್ರಮ್ ಎಂಬುದು ಗೊತ್ತಾಗಿದೆ. ಈ ಕುರಿತು ನವೀದ್ ಅಕ್ರಮ್ ತಾಯಿ ವೆರೆನಾರನ್ನು ಪ್ರಶ್ನಿಸಿದಾಗ, ತನ್ನ ಮಗ ಅಂಥವನಲ್ಲ, ಆತ ಒಳ್ಳೆಯವನು. ನವೀದ್ ವಾರಂತ್ಯದಲ್ಲಿ ಫಿಶಿಂಗ್ ಟೂರ್ ಮಾಡುವುದಾಗಿ ಹೇಳಿ ತಂದೆ ಜತೆ ಹೋಗಿದ್ದಾರೆ ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ಮಗ ತಪ್ಪು ಮಾಡಿದರೂ ಆತನಿಗೆ ಒಳ್ಳೆವನು ಎಂಬ ಬಿರುದು ಕೊಟ್ಟಿದ್ದಾರೆ.

ಭಾನುವಾರ ತನಗೆ ಕರೆ ಮಾಡಿ ಅಮ್ಮಾ ನಾನು ಈಜಲು ಹೋಗಿದ್ದೆ, ಸ್ಕೂಬಾ ಡೈವಿಂಗ್ ಮಾಡಿದೆ, ಈಗ ಊಟಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದ. ಹಾಗೆ ಈಗ ತುಂಬಾ ಸೆಕೆಯ ಇದ್ದರೆ ಮನೆಯಲ್ಲೇ ಇರುತ್ತೇವೆ ಎಂದಿದ್ದ. ದಾಳಿಯ ನಂತರದ ಗಂಟೆಗಳಲ್ಲಿ, ದಾಳಿ ನಡೆದ ಸ್ಥಳದಲ್ಲಿ ನವೀದ್ ಬಂದೂಕನ್ನು ಹಿಡಿದಿರುವ ಚಿತ್ರಗಳು ವೈರಲ್ ಆಗಿವೆ. ಆದಾಗ್ಯೂ, ವೆರೆನಾ ತನ್ನ ಮಗ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಇರಬಹುದೆಂದು ನಂಬುತ್ತಿಲ್ಲ.

ಅವನ ಬಳಿ ಬಂದೂಕು ಇಲ್ಲ. ಅವನು ಹೊರಗೆ ಹೋಗುವುದಿಲ್ಲ. ಅವನು ಅದಕ್ಕೆ ಬೆರೆಯುವುದಿಲ್ಲ. ಅವನು ಕುಡಿಯುವುದಿಲ್ಲ, ಕೆಟ್ಟ ಸ್ಥಳಗಳಿಗೆ ಹೋಗುತ್ತಾನೆ, ಅವನು ಕೆಲಸಕ್ಕೆ ಹೋಗುತ್ತಾನೆ, ಮನೆಗೆ ಬರುತ್ತಾನೆ. ಜಿಮ್ಗೆ ಹೋಗುತ್ತಿದ್ದ ಅಷ್ಟೇ ಎಂದು ತಾಯಿ ಹೇಳಿದ್ದಾರೆ.

ಮತ್ತಷ್ಟು ಓದಿ: ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ಗುಂಡಿನ ದಾಳಿ ನಡೆಸಿದವರು ಪಾಕಿಗಳು

ನವೀದ್ ಕೆಲಸ ಮಾಡುತ್ತಿರುವ ಕಂಪನಿ ದಿವಾಳಿಯಾದಾಗ ತಿಂಗಳ ಹಿಂದೆ ಕೆಲಸ ಕಳೆದುಕೊಂಡಿದ್ದ. ತಂದೆ ಸಾಜಿದ್ ಒಂದು ಹಣ್ಣಿನ ಅಂಗಡಿಯನ್ನು ಹೊಂದಿದ್ದರು. ಇಬ್ಬರೂ ನವೀದ್‌ನ ಸಹೋದರ (20) ಮತ್ತು ಸಹೋದರಿ (22) ಜೊತೆ ಸಿಡ್ನಿಯಲ್ಲಿರುವ ಒಂದು ಮನೆಯಲ್ಲಿ ವಾಸಿಸುವವರು, ಅವರು ಕಳೆದ ವರ್ಷ ಖರೀದಿಸಿದ್ದರು. ಘಟನೆಯಲ್ಲಿ 12 ಮಂದಿ ಇದ್ದಾರೆ.

ನಿಖಾಧಿಕಾರಿಗಳು ಶಂಕಿತನನ್ನು ನ್ಯೂ ಸೌತ್ ವೇಲ್ಸ್‌ನ ಅಲ್-ಮುರಾದ್ ಸಂಸ್ಥೆಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ , ಇದು ಅರೇಬಿಕ್ ಮತ್ತು ಕುರಾನ್ ಅನ್ನು ಕಲಿಸುತ್ತದೆ. ತನಿಖಾಧಿಕಾರಿಗಳು ಅವನ ಶೈಕ್ಷಣಿಕ ಮತ್ತು ಸಾಮಾಜಿಕ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ. ಪ್ರಸ್ತುತ, ಭಯೋತ್ಪಾದಕ ದಾಳಿಗೆ ಅವನ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಕಂಡುಬಂದಿದೆ.

ನವೀದ್ ಅಕ್ರಮ್ ಸಿಡ್ನಿಯ ಸೆಂಟ್ರಲ್ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯ ಮತ್ತು ಇಸ್ಲಾಮಾಬಾದ್‌ನ ಹಮ್ದಾರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. ಅಲ್-ಮುರಾದ್ ಸಂಸ್ಥೆಯಲ್ಲಿಯೂ ವ್ಯಾಸಂಗ ಅವರು ಇತ್ತೀಚೆಗೆ ತನ್ನ ಕೆಲಸವನ್ನು ಕಳೆದುಕೊಂಡಿದ್ದಾರೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 11:38 am, ಸೋಮ, 15 ಡಿಸೆಂಬರ್ 25



Source link

Leave a Reply

Your email address will not be published. Required fields are marked *