17 ವರ್ಷಗಳ ಬಳಿಕ ಒಂದೇ ಗ್ರೂಪ್ ಮತ್ತು ಟೀಮ್ ಇಂಡಿಯಾದ ಕಹಿ ನೆನಪು!

17 ವರ್ಷಗಳ ಬಳಿಕ ಒಂದೇ ಗ್ರೂಪ್ ಮತ್ತು ಟೀಮ್ ಇಂಡಿಯಾದ ಕಹಿ ನೆನಪು!


ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ಔಟ್‌ನ ಸೂಪರ್-8 ಸುತ್ತಿನಲ್ಲಿ ಭಾರತ, ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಒಂದೇ ಗುಂಪಿನಲ್ಲಿ ಕಾಣಿಸಿಕೊಂಡಿವೆ. ಈ ಹಿಂದೆ 209ರ ಟಿ20 ನಲ್ಲಿ ಈ ಮೂರು ತಂಡಗಳು ಸೇಮ್ ಗ್ರೂಪ್‌ನಲ್ಲಿ ಸ್ಥಾನ ಪಡೆದಿದ್ದವು. ಇದೀಗ ಹದಿನೇಳು ವರ್ಷಗಳ ಬಳಿಕ ಮತ್ತೊಮ್ಮೆ ಬಲಿಷ್ಠ ಮೂರು ತಂಡಗಳು ಒಂದೇ ಗುಂಪಿನಲ್ಲಿ ಕಾಣಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಕಹಿ ನೆನಪು:

2007ರ ಟಿ20 ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಮ್ ಇಂಡಿಯಾ 2009 ರಲ್ಲಿ ದ್ವಿತೀಯ ಸುತ್ತಿನಲ್ಲೇ ಹೊರಬಿದ್ದಿತ್ತು. ಇದಕ್ಕೆ ಕಾರಣವಾಗಿದ್ದು ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್.

  • ದ್ವಿತೀಯ ಸುತ್ತಿನಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ 7 ದಾಖಲೆಗಳ ಸೋಲನುಭವಿಸಿತ್ತು.
  • ಇಂಗ್ಲೆಂಡ್ ವಿರುದ್ಧದ ಭಾರತ ತಂಡವು 3 ರನ್ಗಳಿಂದ ಸೋಲೊಪ್ಪಿಕೊಂಡಿದ್ದರು.
  • ಭಾರತ ತಂಡವನ್ನು 12 ರನ್‌ಗಳಿಂದ ಸೋಲಿಸುವಲ್ಲಿ ಸೌತ್ ಆಫ್ರಿಕಾ ತಂಡ ಯಶಸ್ವಿಯಾಗಿತ್ತು.

ಈ ನಾಲ್ಕು ತಂಡಗಳಲ್ಲಿ 2009 ರಲ್ಲಿ ಸೆಮಿಫೈನಲ್‌ಗೇರಿದ್ದು ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್. ಅಂದರೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು ದ್ವಿತೀಯ ಸುತ್ತಿನಲ್ಲೇ ಹೊರಬಿದ್ದಿದ್ದವು.

ಇದೀಗ ಬರೋಬ್ಬರಿ 17 ವರ್ಷಗಳ ಬಳಿಕ ಗ್ರೂಪ್ -1 ರಲ್ಲಿ ಭಾರತ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕಾಣಿಸಿಕೊಂಡಿವೆ. ಇಲ್ಲಿ ನಾಲ್ಕನೇ ತಂಡವಾಗಿ ಇಂಗ್ಲೆಂಡ್ ಬದಲಿಗೆ ಝಿಂಬಾಬ್ವೆ ತಂಡವಿದೆ.

ಅಂದರೆ 17 ವರ್ಷಗಳ ಹಿಂದೆ ಟೀಮ್ ಇಂಡಿಯಾ ಯಾವ ಎರಡು ತಂಡಗಳ ವಿರುದ್ಧ ಸೋತು ಇದೀಗ ಹೊರಬಿದ್ದಿದೆ ಅದೇ ತಂಡಗಳು ಎದುರಾಳಿಗಳಾಗಿ ಸಿಕ್ಕಿದ್ದಾರೆ. ಅದರಲ್ಲೂ ಭಾರತ ತಂಡದ ವಿರುದ್ಧ ಸೆಣಸಲಿರುವ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ ಮೊದಲ ಸುತ್ತಿನಲ್ಲಿ ಯಾವುದೇ ಪಂದ್ಯವನ್ನು ಸೋತಿರಲಿಲ್ಲ ಎಂಬುದು ಉಲ್ಲೇಖಾರ್ಹ.

ಇತ್ತ ಟೀಮ್ ಇಂಡಿಯಾ ತವರಿನಲ್ಲಿ ಮೂರು ಪಂದ್ಯಗಳನ್ನಾಡಿದರೂ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ಸಾಧಿಸಲು ಸುಲಭವಲ್ಲ.

ಭಾರತದ ಪಂದ್ಯಗಳು (ಸೂಪರ್-8)

  • ಭಾರತ vs ಸೌತ್ ಆಫ್ರಿಕಾ: ಫೆಬ್ರವರಿ 22 (ಸಂಜೆ 7:00 IST), ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.
  • ಭಾರತ vs ಝಿಂಬಾಬ್ವೆ: ಫೆಬ್ರವರಿ 26 (ಸಂಜೆ 7:00 IST), ಎಂ.ಎ. ಚಿದಂಬರಂ ಸ್ಟೇಡಿಯಂ, ಚೆನ್ನೈ.
  • ಭಾರತ vs ವೆಸ್ಟ್ ಇಂಡೀಸ್: ಮಾರ್ಚ್ 1 (ಸಂಜೆ 7:00 IST), ಈಡನ್ ಗಾರ್ಡನ್ಸ್, ಕೋಲ್ಕತ್ತಾ.



Source link

Leave a Reply

Your email address will not be published. Required fields are marked *