2026 ರ ಟಿ20 ಎರಡನೇ ಸುತ್ತಿಗೆ ಎಂಟ್ರಿಕೊಟ್ಟಿದೆ. ಅಂದರೆ ಗುಂಪು ಮುಕ್ತಾಯಗೊಂಡಿದ್ದು, ಇಂದಿನಿಂದ ಸೂಪರ್ 8 ಸುತ್ತು ಶುರುವಾಗಿದೆ. ಗುಂಪಿನಲ್ಲಿ ಒಟ್ಟಾರೆ 20 ತಂಡಗಳು ಭಾಗವಹಿಸಿದ್ದವು. ಅದರಲ್ಲಿ 8 ತಂಡಗಳು ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟಿವೆ. ಈ 8 ತಂಡಗಳನ್ನು ತಲಾ 4 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಎರಡನೇ ಗುಂಪಿನ ಮೊದಲ ಸೂಪರ್ 8 ಪಂದ್ಯ ಇಂದು ನಡೆಯಬೇಕಿತ್ತು. ಈ ಆಹಾರ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಬೇಕಿತ್ತು.ಆ ಪ್ರಕಾರ, ಉಭಯ ತಂಡಗಳ ನಡುವೆ ಟಾಸ್ ಕೂಡ ನಡೆಯಿತು. ಆದರೆ ಟಾಸ್ ಬಳಿಕ ಎಂಟ್ರಿಕೊಟ್ಟ ವರುಣರಾಯ ಇದರ ಪರಿಣಾಮವಾಗಿ ಪಂದ್ಯವು ಒಂದೇ ಒಂದು ಕ್ರಿಯೆಯನ್ನು ಕಾಣದೆ ರದ್ದಾಯಿತು.