ಗ್ಲಾಮರ್ ಕ್ವೀನ್ ತಮನ್ನಾ ಈಗ ಅಪ್ಪಟ ಗೃಹಿಣಿ: 11 ವರ್ಷದ ಬಳಿಕ ರವಿತೇಜ ಜೊತೆ

ಗ್ಲಾಮರ್ ಕ್ವೀನ್ ತಮನ್ನಾ ಈಗ ಅಪ್ಪಟ ಗೃಹಿಣಿ: 11 ವರ್ಷದ ಬಳಿಕ ರವಿತೇಜ ಜೊತೆ


ಗ್ಲಾಮರ್ ಕ್ವೀನ್ ತಮನ್ನಾ ಈಗ ಅಪ್ಪಟ ಗೃಹಿಣಿ: 11 ವರ್ಷದ ಬಳಿಕ ರವಿತೇಜ ಜೊತೆ

ತಮನ್ನಾ ಭಾಟಿಯಾ (ತಮನ್ನಾ ಭಾಟಿಯಾ), ಪ್ರಸ್ತುತ ಭಾರತೀಯ ಚಿತ್ರರಂಗದ ನಂಬರ್ 1 ‘ಐಟಂ ಗರ್ಲ್’. ತಮನ್ನಾ ಭಾಟಿಯಾ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದರೆಂದರೆ ಆ ಸಿನಿಮಾ ಸೂಪರ್ ಹಿಟ್, ಆ ಹಾಡು ಕೂಡ ಸೂಪರ್ ಹಿಟ್ ಆಗಿಯೇ ತೀರುತ್ತದೆ ಎಂಬುದು ನಿರ್ಮಾಪಕ, ನಿರ್ದೇಶಕರ ನಂಬಿಕೆ. ಇದೇ ಕಾರಣಕ್ಕೆ ತಮನ್ನಾಗೆ ಈಗ ಸಿನಿಮಾದಿಂದಲೂ ಐಟಂ ಹಾಡುಗಳ ಆಫರ್ ಹೆಚ್ಚು ಬರುತ್ತಿದೆ. ಅದು ಮಾತ್ರವೇ ಅಲ್ಲ, ತಮನ್ನಾ ಭಾಟಿಯಾ ಈಗ ಐಟಂ ಹಾಡಿಗೆ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಸಹ ಹೌದು.

ಗ್ಲಾಮರ್ ಕ್ವೀನ್ ಎಂದೆಂದಿಗೂ ಖ್ಯಾತವಾಗಿರುವ ತಮನ್ನಾ ಭಾಟಿಯಾಗೆ ಇದೀಗ ಅವರ ಟ್ರೆಂಡ್‌ಗೆ ವಿರುದ್ಧವಾದ ಪಾತ್ರ ಸಿಕ್ಕಿದೆ. ತಮನ್ನಾ ಭಾಟಿಯಾ ಅಪ್ಪಟ ಗೃಹಿಣಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಅದೂ ಪೌರಾಣಿಕ ಮಾದರಿಯ ಕತೆ ಹೊಂದಿರುವ ಸಿನಿಮಾದಲ್ಲಿ. ನಟಿ ತಮನ್ನಾ ಭಾಟಿಯಾ ವೀಕ್ಷಿಸಿದರು ಮಹಾನ್ ದೈವ ಭಕ್ತೆ. ಕುಟುಂಬದೊಂದಿಗೆ ದೇವಾಲಯಗಳಿಗೆ ಭೇಟಿ ಮಾಡುತ್ತಲೇ ಇರುತ್ತಾರೆ. ಇದೀಗ ಅವರಿಗೆ ದೇವರ ಮಹಿಮೆಯ ಕತೆಯುಳ್ಳ ಸಿನಿಮಾದಲ್ಲಿ ನಾಯಕಿ ಪಾತ್ರ ಸಿಕ್ಕಿದೆ.

ಇದನ್ನೂ ಓದಿ:ಮತ್ತೊಮ್ಮೆ ರವಿತೇಜ ಜೊತೆಗೆ ನಟಿಸಲಿದ್ದಾರೆ ಶ್ರೀಲೀಲಾ: ಇದು ಮೂರನೇ ಸಿನಿಮಾ

ರವಿತೇಜ ನಟಿಸುತ್ತಿರುವ ‘ಇರುಮುಡಿ’ ಸಿನಿಮಾದಲ್ಲಿ ತಮನ್ನಾ ಭಾಟಿಯಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ‘ಇರುಮುಡಿ’ ಸಿನಿಮಾದ ಹೆಸರೇ ಸೂಚಿಸುತ್ತಿರುವಂತೆ ಈ ಸಿನಿಮಾ ಅಯ್ಯಪ್ಪ ಸ್ವಾಮಿಯ ಮಹಿಮೆಯ ಕುರಿತಾದ ಕಥೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ರವಿತೇಜ ನಾಯಕ, ನಾಯಕಿಯ ಪಾತ್ರದಲ್ಲಿ ತಮನ್ನಾ ಭಾಟಿಯಾ ನಟಿಸಿದ್ದು, ಅವರದ್ದು ತುಸು ಗ್ಲಾಮರ್ ಗೆ ಅವಕಾಶ ಇಲ್ಲದ ಅಪ್ಪಟ ಗೃಹಿಣಿಯ ಪಾತ್ರವಂತೆ. ಜೊತೆಗೆ ಈ ಪಾತ್ರ ಸವಾಲಿನದ್ದು ಆಗಿರುತ್ತದೆ.

2015 ರಲ್ಲಿ ಬಿಡುಗಡೆ ಆಗಿದ್ದ ರವಿತೇಜ ನಟನೆಯ ‘ಬೆಂಗಾಲ್ ಟೈಗರ್’ ಸಿನಿಮಾದಲ್ಲಿ ರವಿತೇಜ ಮತ್ತು ತಮನ್ನಾ ಭಾಟಿಯಾ ಒಟ್ಟಿಗೆ ನಟಿಸಿದ್ದರು. ಇದೀಗ 11 ವರ್ಷಗಳ ಬಳಿಕ ಈ ಜೋಡಿ ಒಟ್ಟಿಗೆ ನಟಿಸುತ್ತಿದೆ. ಇದೀಗ ಚಿತ್ರೀಕರಣಗೊಳ್ಳುತ್ತಿರುವ ‘ಇರುಮುಡಿ’ ಸಿನಿಮಾವನ್ನು ಶಿವ ನಿರ್ವಾಣ ನಿರ್ದೇಶನ ಮಾಡುತ್ತಿದ್ದಾರೆ. ಮಾಸ್ ಮಲಾಸ ಆಕ್ಷನ್ ಕಾಮಿಡಿ ಸಿನಿಮಾಗಳಲ್ಲಿ ನಟಿಸುತ್ತಿದ್ದ ರವಿತೇಜ ಅವರಿಗೂ ಸಹ ಈ ಸಿನಿಮಾ ಭಿನ್ನವಾದ ಸಿನಿಮಾ ಆಗಿರುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *