Headlines

ಹುಣಸೆಹಣ್ಣನ್ನು ಚಪ್ಪರಿಸಿ ತಿನ್ನುವವರಿಗೆ ಈ ಆರೋಗ್ಯ ಸಮಸ್ಯೆಗಳು ಎಂದಿಗೂ ಬರುವುದಿಲ್ಲ

ಹುಣಸೆಹಣ್ಣನ್ನು ಚಪ್ಪರಿಸಿ ತಿನ್ನುವವರಿಗೆ ಈ ಆರೋಗ್ಯ ಸಮಸ್ಯೆಗಳು ಎಂದಿಗೂ ಬರುವುದಿಲ್ಲ


ಹುಣಸೆಹಣ್ಣು (ಹುಣಿಸೆಹಣ್ಣು) ಎಂಬ ಹೆಸರು ಕೇಳಿದಾಕ್ಷಣ ಯಾರಿಗಾದರೂ ಬಾಯಲ್ಲಿ ನೀರು ಬರುವುದು ಸಹಜ. ಹುಳಿ ಮತ್ತು ಸಿಹಿ ಮಿಶ್ರಣವಾದ ಹುಣಸೆಹಣ್ಣು ತಿನ್ನುವುದಕ್ಕೆ ರುಚಿಕರವಾಗಿದೆ, ಆರೋಗ್ಯ ಪ್ರಯೋಜನಗಳಿಂದಲೂ ಸಮೃದ್ಧವಾಗಿದೆ. ಸಾಮಾನ್ಯವಾಗಿ ಹುಣಸೆಹಣ್ಣನ್ನು ಅದರ ಸುವಾಸನೆ ಮತ್ತು ಅದರಲ್ಲಿರುವ ರುಚಿಗೆ ಅನೇಕ ಭಕ್ಷ್ಯಗಳಲ್ಲಿ ನೀಡಲಾಗುತ್ತದೆ. ಇಲ್ಲದೇ ಕೆಲವು ಆಹಾರಗಳು ಅಪೂರ್ಣ ಎನಿಸಿಕೊಳ್ಳುತ್ತವೆ. ಹಾಗಾದರೆ ಹುಣಸೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು, ಯಾಕಾಗಿ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಹುಣಸೆಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು, ಟೊಕೆಮಿಕಲ್‌ಗಳು, ವಿಟಮಿನ್ ಎ, ಸಿ, ಐ, ಕೆ, ಬಿ6, ಮೆಗ್ನೀಸಿಯಮ್, ರಂಜಕ, ಕ್ಯಾಲ್ಸಿಯಂ, ಪ್ರೋಟಿನ್ ಮತ್ತು ಇತರ ಪೋಷಕಾಂಶಗಳಿವೆ. ಈ ದೇಹವನ್ನು ವಿವಿಧ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹುಣಸೆಹಣ್ಣು ತಿನ್ನುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ತೂಕವನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.

ರೋಗವನ್ನು ನಿಯಂತ್ರಿಸಲು ಸಹಕಾರಿ

ಹುಣಸೆಹಣ್ಣು ಸಿ ಯಿಂದ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಲವಾದ ರೋಗನಿರೋಧಕ ಶಕ್ತಿ ದೇಹವನ್ನು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ಇದರ ಸೇವನೆ ಮಿತವಾಗಿರಲಿ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ಅಸ್ವಸ್ಥತೆಗೆ ಹುಣಸೆಹಣ್ಣು ಒಳ್ಳೆಯದು. ಇದು ಮುಟ್ಟಿನ ಸೆಳೆತವನ್ನು ನಿವಾರಿಸಲು, ದೇಹದಲ್ಲಿನ ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಎಚ್ಡಿಎಲ್ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಕಾರಿಯಾಗಿದೆ, ಇದು ಹೃದಯ ಬಡಿತವನ್ನು ನಿಯಂತ್ರಿಸಲು ಮತ್ತು ದೇಹದ ದ್ರವಗಳನ್ನು ಸಮತೋಲನಗೊಳಿಸಲು ಉಪಯುಕ್ತವಾಗಿದೆ.

ಇದನ್ನೂ ಓದಿ: ಚರ್ಮರೋಗ ಇದ್ಯಾ? ಚಳಿಗಾಲದಲ್ಲಿ ಸ್ನಾನ ಮಾಡುವಾಗ ಈ ತಪ್ಪು ಮಾಡಿದ್ರೆ ಸಮಸ್ಯೆ ಉಲ್ಬಣವಾಗುವುದು ಗ್ಯಾರೆಂಟಿ

ಚರ್ಮದ ಮೇಲಿನ ಸುಕ್ಕುಗಳಿಂದ ಮುಕ್ತಗೊಳಿಸಲಾಗಿದೆ:

ಹುಣಸೆ ನೀರು ಮೊಡವೆಗಳಿಗೆ ರಾಮಬಾಣವಾಗಿದೆ. ಇದು ಚರ್ಮದ ಮೇಲಿನ ಸುಕ್ಕುಗಳು ಮತ್ತು ಕಲೆಗಳನ್ನು ತೆಗೆದುಹಾಕುತ್ತದೆ. ಸಣ್ಣ ಗಾಯಗಳು ಮತ್ತು ಸುಟ್ಟ ಗಾಯಗಳಿಂದ ಉಂಟಾಗುವ ಗುರುತುಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಜೊತೆಗೆ ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಸಹಾಯ ಮಾಡುತ್ತದೆ. ಇದನ್ನು ಮಿತವಾಗಿ ಸೇವಿಸುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 5:46 pm, ಗುರುವಾರ, 1 ಜನವರಿ 26



Source link

Leave a Reply

Your email address will not be published. Required fields are marked *