Headlines

ಸಾಯುವುದಕ್ಕೂ ಎರಡು ದಿನ ಮೊದಲು ಕಿರುತೆರೆ ನಟಿ ಸುಭಾಷಿಣಿ ಎಷ್ಟು ಖುಷಿಯಿಂದ ಇದ್ರು ನೋಡಿ

ಸಾಯುವುದಕ್ಕೂ ಎರಡು ದಿನ ಮೊದಲು ಕಿರುತೆರೆ ನಟಿ ಸುಭಾಷಿಣಿ ಎಷ್ಟು ಖುಷಿಯಿಂದ ಇದ್ರು ನೋಡಿ


ಸಾಯುವುದಕ್ಕೂ ಎರಡು ದಿನ ಮೊದಲು ಕಿರುತೆರೆ ನಟಿ ಸುಭಾಷಿಣಿ ಎಷ್ಟು ಖುಷಿಯಿಂದ ಇದ್ರು ನೋಡಿ

ತಮಿಳು ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಮಣಿಯಂ (ಸುಭಾಷಿಣಿ) ಅವರು ಏಪ್ರಿಲ್ 6 ರಂದು ಚೆನ್ನೈನಲ್ಲಿ ನಿಧನರಾದರು. ಅವರದ್ದು ಆತ್ಮಹತ್ಯೆ ಎಂದು ಹೇಳಲಾಗದು. ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಸೆಲೆಬ್ರಿಟಿಗಳ ನಿಜ ಜೀವನಕ್ಕೂ, ಅವರು ತೋರಿಸಿಕೊಳ್ಳುವುದಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ ಎಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಅವರು ಪೋಸ್ಟ್ ಮಾಡಿದ ವಿಡಿಯೋ ಉತ್ತಮ ಸಾಕ್ಷಿ.

ಸುಭಾಷಿಣಿ ಮೂಲತಃ ಶ್ರೀಲಂಕಾದವರು. ಅವರು ಬಣ್ಣದ ಲೋಕದ ಆಫರ್ ಹುಡುಕಿ ಚೆನ್ನೈಗೆ ಬಂದರು. ಅವರು ಚಿಲ್ಲರೆಯಲ್ಲಿ ನಟನೆಯನ್ನು ಗಿಟ್ಟಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದರು. ಆದರೆ, ಯಾವುದೂ ಅವರಿಗೆ ಅಷ್ಟಾಗಿ ಜನಪ್ರಿಯತೆ ತಂದುಕೊಡಲಿಲ್ಲ. ಕೊನೆಗೆ ಅವರು ‘ಕಯಲ್’ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯರಾದರು. ಅವರ ಬಣ್ಣದ ಬದುಕಿಗೆ ಈ ಧಾರಾವಾಹಿ ಸಾಕಷ್ಟು ಮೈಲೇಜ್ ನೀಡಿತು.

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ಸುಬಾಶಿನಿ ಬಾಲಸುಬ್ರಮಣಿಯಂ (@subashini_balasubramaniyam) ಹಂಚಿಕೊಂಡ ಪೋಸ್ಟ್

ಈಗ ಸುಭಾಷಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವುದಕ್ಕೂ ಮೊದಲು ಪತಿಯ ಜೊತೆ ಸುಭಾಷಿಣಿ ಕಾಲ್ ನಲ್ಲಿ ವಿಡಿಯೋ ಮಾತನಾಡಿದ್ದರು. ಈ ವೇಳೆ ಇಬ್ಬರ ಮಧ್ಯೆ ಜಗಳ ನಡೆಯಿತೇ ಎಂಬ ಪ್ರಶ್ನೆ ಮೂಡಿದೆ. ಈ ಜಗಳ ನೊಂದು ಅವರು ಇಂತಹ ಕೆಟ್ಟ ನಿರ್ಧಾರ ಮಾಡಿದರೇ ಎಂಬ ಪ್ರಶ್ನೆ ಮೂಡಿದೆ. ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಶವವಾಗಿ ಪತ್ತೆಯಾದ ಕಿರುತೆರೆ ನಟಿ ಸುಭಾಷಿಣಿ; ಗಂಡನಿಗೆ ಕೊನೆಯ ವಿಡಿಯೋ ಕಾಲ್

ಅಚ್ಚರಿಯ ಸಂಗತಿ ಎಂದರೆ ಸುಭಾಷಿಣಿ ಅವರು ಎರಡು ದಿನಗಳ ಹಿಂದೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಅವರು ಕಾಡೆಲ್ಲ ಸುತ್ತಾಡುತ್ತಿದ್ದಾರೆ. ತುಂಬಾನೇ ಖುಷಿಯಿಂದ ಇಬ್ಬರು. ಆದಾಗ್ಯೂ ಇಷ್ಟು ಕಠಿಣ ನಿರ್ಧಾರ ತೆಗೆದುಕೊಳ್ಳುವ ಅಗತ್ಯ ಏಕೆ ಬಂತು ಎಂಬುದು ಅನೇಕರ ಪ್ರಶ್ನೆ. ಅವರ ಆತ್ಮಕ್ಕೆ ಎಲ್ಲರೂ ಶಾಂತಿ ಕೋರುತ್ತಿದ್ದಾರೆ. ಸಾವಿಗೆ ಅಸಲಿ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 





Source link

Leave a Reply

Your email address will not be published. Required fields are marked *