ಚಾಮರಾಜನಗರ, ಫೆಬ್ರವರಿ 18: ಕನ್ನಡ ಬಾವುಟ ಹಾಕಿದ್ದ ವಾಹನವನ್ನು ತಡೆದು ತಮಿಳು ಯುವಕರು ಗಲಾಟೆ ನಡೆಸಿದ ಘಟನೆ ಕನ್ನಡಿಗರಲ್ಲಿ ಆಕ್ರೋಶ ಹುಟ್ಟಿಸಿದೆ. ಚಾಮರಾಜನಗರ ಜಿಲ್ಲೆಯಿಂದ ಶಬರಿಮಲೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಚಾಮರಾಜನಗರದ ಹರದನಹಳ್ಳಿಯ ಮಣಿ ನಾಯ್ಕ ಹಾಗೂ ಸ್ನೇಹಿತರು ಟಿಟಿ ವಾಹನದಲ್ಲಿ ಕನ್ನಡ ಧ್ವಜ ಅಳವಡಿಸಿಕೊಂಡು ಯಾತ್ರೆಗೆ ತೆರಳುತ್ತಿದ್ದಾಗ, ತಮಿಳುನಾಡಿನ ತೂತುಕುಡಿ ಸಮೀಪ ವಾಹನವನ್ನು ಅಡ್ಡಹಾಕಿ ಕೆಲ ತಮಿಳು ಯುವಕರು ಗಲಾಟೆ ಎಂದು ಆರೋಪಿಸಿದ್ದಾರೆ. ವಾಹನದಲ್ಲಿದ್ದ ಕನ್ನಡ ಧ್ವಜವನ್ನು ತೆಗೆದುಹಾಕುವಂತೆ ಒತ್ತಾಯಿಸಿ, ‘ತಮಿಳುನಾಡಿನಲ್ಲಿ ಕನ್ನಡ ಧ್ವಜ ಹಾಕಲು ಅವಕಾಶವಿಲ್ಲ’ ಎಂದು ಎಚ್ಚರಿಕೆ ನೀಡಿದರೆಂದು ಆರೋಪಿಸಲಾಗಿದೆ.
ಘಟನೆ ವೇಳೆ ಸ್ಥಳದಲ್ಲಿದ್ದರೂ, ಯುವಕರು ರದ್ದಾದ ಆರೋಪ ಕೇಳಿಬಂದಿದ್ದು, ಕನ್ನಡಿಗರ ಮೇಲೆ ತೀವ್ರ ವಿರೋಧ ವ್ಯಕ್ತವಾಗಿದೆ. ಯಾತ್ರೆಗೆ ತೆರಳಿದ್ದ ಅಯ್ಯಪ್ಪ ಮಾಲಾಧಾರಿಗಳು ಈ ರೀತಿಯ ಘಟನೆಗಳನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ