Headlines

ವಿವಾದಗಳ ಬೆನ್ನಲ್ಲೇ ಸೆನ್ಸಾರ್ ಪಾಸ್ ಆದ ‘ಬಾಸ್’: ಶೀಘ್ರವೇ ರಿಲೀಸ್ ಆಗಲಿದೆ ಸಿನಿಮಾ

ವಿವಾದಗಳ ಬೆನ್ನಲ್ಲೇ ಸೆನ್ಸಾರ್ ಪಾಸ್ ಆದ ‘ಬಾಸ್’: ಶೀಘ್ರವೇ ರಿಲೀಸ್ ಆಗಲಿದೆ ಸಿನಿಮಾ


ವಿವಾದಗಳ ಬೆನ್ನಲ್ಲೇ ಸೆನ್ಸಾರ್ ಪಾಸ್ ಆದ 'ಬಾಸ್': ಶೀಘ್ರವೇ ರಿಲೀಸ್ ಆಗಲಿದೆ ಸಿನಿಮಾ

ಟೀಸರ್ ಬಿಡುಗಡೆಯಾದ ಕ್ಷಣದಿಂದಲೇ ‘ಬಾಸ್’ (ಬಾಸ್) ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಈ ಸಿನಿಮಾದ ಸುತ್ತ ಹಲವು ವಿವಾದಗಳು ಸೃಷ್ಟಿ ಆಗಿವೆ. ಈ ಸಿನಿಮಾದ ಕಥೆಗೂ, ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ಸಾಮ್ಯತೆ ಎಂಬುದು ಕೆಲವರ ಅಭಿಪ್ರಾಯ. ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಬಾರದು ಎಂದು ದರ್ಶನ್ (ದರ್ಶನ್) ಪರ ವಕೀಲರು ತಕರಾರು ತೆಗೆದಿದ್ದರು. ಆದರೆ ‘ಬಾಸ್’ ಸಿನಿಮಾ ಅಂತಿಮವಾಗಿ ಸೆನ್ಸಾರ್ ಅಗ್ನಿಪರೀಕ್ಷೆಯಲ್ಲಿ ಗೆದ್ದು ಹೊರಬಂದಿದೆ. ವಿ. ಲವ ನಿರ್ದೇಶನದ ಈ ಚಿತ್ರದಲ್ಲಿ ತನುಷ್ ಶಿವಣ್ಣ (ತನುಷ್ ಶಿವಣ್ಣ) ಅಭಿನಯಿಸಿದ್ದಾರೆ.

ನಟ ದರ್ಶನ್ ಅವರ ಜೀವನದ ಘಟನೆಗಳಿಗೆ ಸಾಮ್ಯತೆ ಇದೆ ಎಂಬ ಆರೋಪಗಳ ನಡುವೆಯೂ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿ ಹಸಿರು ನಿಶಾನೆ ತೋರಿಸಿದೆ. ‘ಬಾಸ್’ ಸಿನಿಮಾದ ಟೀಸರ್ ಹೊರಬಿದ್ದಾಗ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಈ ಚಿತ್ರವು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಅವರ ನಿಜ ಜೀವನದ ಕಥೆಯನ್ನೇ ಆಯ್ಕೆ ಮಾಡಿಕೊಳ್ಳಬಹುದು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ದರ್ಶನ್ ಅಭಿಮಾನಿಗಳು ಹಾಗೂ ಅವರ ಆಪ್ತ ವಲಯದಿಂದ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ವಿವಾದ ಕೇವಲ ಮಾತಿಗೆ ಸೀಮಿತವಾಗದೆ ಕಾನೂನು ಕಟ್ಟೆ ಏರಿತ್ತು. ದರ್ಶನ್ ಪರ ವಕೀಲರು ಚಿತ್ರತಂಡಕ್ಕೆ ಹಾಗೂ ಸೆನ್ಸಾರ್ ಮಂಡಳಿಗೆ ಈ ಮೊದಲೇ ನೋಟಿಸ್ ನೀಡಿದ್ದರು. ಅಷ್ಟೇ ಅಲ್ಲದೆ, ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ ಅವರು ಖುದ್ದಾಗಿ ಸೆನ್ಸಾರ್ ಮಂಡಳಿಗೆ ಭೇಟಿ ನೀಡಿ, ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡುವಂತೆ ಮನವಿ ಮಾಡಿದರು ಎಂಬ ವರದಿಗಳು ಹರಿದಾಡಿದ್ದವು.

ಬಾಸ್ ಸಿನಿಮಾ ಟೀಸರ್:

ಈ ಎಲ್ಲಾ ಸವಾಲುಗಳ ನಡುವೆಯೂ ಸೈಲೆಂಟಾಗಿ ಸೆನ್ಸಾರ್ ಪ್ರಕ್ರಿಯೆ ಮುಗಿಸಿರುವ ‘ಬಾಸ್’ ಚಿತ್ರಕ್ಕೆ ಮಂಡಳಿಯು ‘ಯು/ಎ’ ಪ್ರಮಾಣಪತ್ರವನ್ನು ನೀಡಿದೆ. ಆದರೆ, ವಿವಾದಾತ್ಮಕ ಎನ್ನಬಹುದಾದ ಕೆಲವು ದೃಶ್ಯಗಳಿಗೆ ಹಾಗೂ ಸಂಭಾಷಣೆಗಳಿಗೆ ಮಂಡಳಿಯು ಕತ್ತರಿ ಹಾಕಿದೆ. ಈ ಮೂಲಕ ಬದಲಾವಣೆಯೊಂದಿಗೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಕ್ಕಂತಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ

ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆಗಿರುವ ‘ಬಾಸ್’ ಚಿತ್ರತಂಡ ಈಗ ಪ್ರಚಾರ ಕಾರ್ಯದಲ್ಲಿ ಬ್ಯೂಸಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಬರುವ ಏಪ್ರಿಲ್ ತಿಂಗಳಿನಲ್ಲಿ ಸಿನಿಮಾವನ್ನು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡಲಾಗುವುದು. ತನುಶ್ ಶಿವಣ್ಣ ಅವರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಷ್ಟರಮಟ್ಟಿಗೆ ಸದ್ದು ಮಾಡಲಿದೆ ಎಂದು ಕಾದು ನೋಡಬೇಕಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *