Viral: ಟಾರ್ಗೆಟ್ ಮಾತ್ರ ಹೆಚ್ಚಾಗ್ತವೆ, ಸಂಬಳವಲ್ಲ; ರಿಸೈನ್ ಲೆಟರ್‌ನಲ್ಲಿ ಉದ್ಯೋಗಿ ಹೇಳಿದ್ದಿಷ್ಟೇ

Viral: ಟಾರ್ಗೆಟ್ ಮಾತ್ರ ಹೆಚ್ಚಾಗ್ತವೆ, ಸಂಬಳವಲ್ಲ; ರಿಸೈನ್ ಲೆಟರ್‌ನಲ್ಲಿ ಉದ್ಯೋಗಿ ಹೇಳಿದ್ದಿಷ್ಟೇ


ಟಾಂಜಾನಿಯಾ, ಅಕ್ಟೋಬರ್ 19: ಕೆಲವರು ತಮ್ಮ ಕೆಲಸ (ಉದ್ಯೋಗ) ಸ್ಥಳದಲ್ಲಿ ಅನುಭವಿಸುವ ಕಷ್ಟ ಹೇಳಲಾಗದು. ಈ ಒತ್ತಡಭರಿತ ಕೆಲಸದಿಂದಾಗಿ ಈ ಉದ್ಯೋಗ ಬೇಡ ಎನ್ನುವ ನಿರ್ಧಾರಕ್ಕೆ ಬರುವವರೇ ಹೆಚ್ಚು. ಕೆಲವು ಸ್ಥಳಗಳಲ್ಲಿ ಬಾಸ್ ಕಿರಿಕಿರಿ ಹೆಚ್ಚೇ ಇರುತ್ತದೆ. ಈ ರಾಜೀನಾಮೆ ಸಲ್ಲಿಸಲಾಗಿದೆ. ಈ ಉದ್ಯೋಗಿಯದ್ದು ಇದೆ ಗೋಳು. ಟಾಂಜಾನಿಯಾದಲ್ಲಿರುವ ಜೇ ಡೆಕೋರ್ ಕಂಪನಿ (ಜೇ ಅಲಂಕಾರ) ಉದ್ಯೋಗಿಯೂ ಬಾಸ್ ಕಿರಿಕಿರಿ ತಾಳಲಾರದೆ ಜಾಬ್ ರಿಸೈನ್ ಮಾಡಿದ್ದಾನೆ. ಇದೀಗ ಉದ್ಯೋಗಿ ನೀಡಿದ ರಾಜೀನಾಮೆ ಪತ್ರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಉದ್ಯೋಗಿಯ ರಾಜೀನಾಮೆ ಪತ್ರದಲ್ಲಿ ಏನಿದೆ?

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ಪೋಸ್ಟ್ ನಲ್ಲಿ ಎಸಿ ಮಿಂಜಾ ಎಂಬ ಉದ್ಯೋಗಿ ತನ್ನ ಬಾಸ್ ಮತ್ತು ಕಂಪನಿಯ ರೂಲ್ಸ್ ನಿಂದ ಬೇಸೆತ್ತು ರಾಜೀನಾಮೆ ನೀಡಿದ್ದಾನೆ. ಈ ರಾಜೀನಾಮೆ ಪತ್ರದಲ್ಲಿ ಉದ್ಯೋಗಿಯೂ ಈ ಕಂಪನಿಯಲ್ಲಿ ಟಾರ್ಗೆಟ್ ಮಾತ್ರ ಹೆಚ್ಚಾಗಬಹುದು, ಸಂಬಳವಲ್ಲ. ನಾನು ರಾಜೀನಾಮೆ ನೀಡುತ್ತಿದ್ದೇನೆ. ಇಲ್ಲಿ ನಾನು ಕೆಲಸ ಮಾಡುತ್ತೇನೆ. ಆದರೆ, ನಾನು ಮ್ಯಾಜಿಕ್ ಬ್ಯಾಕ್ ಎಂದು ಪತ್ರದಲ್ಲಿ ತಿಳಿಸಿದ್ದಾನೆ.

ಇದನ್ನೂ ಓದಿ

ಪೋಸ್ಟ್ ವೈರಲ್ ಇಲ್ಲಿದೆ ನೋಡಿ

ಇದನ್ನೂ ಓದಿ:ವೈರಲ್: ಹೈಲಿ ಕ್ವಾಲಿಫೈಡ್ ಎಂದು ಸಂದರ್ಶನದಲ್ಲಿ ಯುವತಿಯನ್ನು ರಿಜೆಕ್ಟ್ ಮಾಡಿದ ಕಂಪನಿ, ಮುಂದೇನಾಯ್ತು ಗೊತ್ತಾ?

ಈ ಪೋಸ್ಟ್ ವೈರಲ್ ಆಗುತ್ತಿದೆ ಈ ವ್ಯಕ್ತಿಯ ಧೈರ್ಯವನ್ನು ಮೆಚ್ಚಿದೆ. ಒಬ್ಬ ಬಳಕೆದಾರರು ಇದ್ದದ್ದನ್ನು ಇದ್ದ ಹಾಗೆ ಹೇಳಲು ಗುಂಡಿಗೆ ಬೇಕು. ಮತ್ತೊಬ್ಬರು ಈ ವ್ಯಕ್ತಿ ಅತೀ ಬುದ್ಧಿವಂತ ಎಂದು ಹೇಳಿದ್ದಾರೆ. ರಾಜೀನಾಮೆ ಪತ್ರದಲ್ಲಿ ಬರೆದಿರುವ ಸಾಲುಗಳು ಸಣ್ಣದಾಗಿದ್ದರೂ ಕ್ಲಿಯರ್ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಈ ರಾಜೀನಾಮೆ ಪತ್ರ ನೋಡಿ ನಗುವ ಇಮೋಜಿ ಕಳುಹಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *