ಸ್ಯಾಂಡಲ್​ವುಡ್​ ಚೆಲುವೆ ಪ್ರೇಮಾ ಮದುವೆ? ಹಿಂಟ್ಸ್​ ಕೊಟ್ಟ ನಟಿ ತಾರಾ ಅನುರಾಧ- ಯಾರೀ ಚೆಲುವ?

ಸ್ಯಾಂಡಲ್​ವುಡ್​ ಚೆಲುವೆ ಪ್ರೇಮಾ ಮದುವೆ? ಹಿಂಟ್ಸ್​ ಕೊಟ್ಟ ನಟಿ ತಾರಾ ಅನುರಾಧ- ಯಾರೀ ಚೆಲುವ?

ಸ್ಯಾಂಡಲ್​ವುಡ್​ ಚೆಲುವೆ ಪ್ರೇಮಾ ಮದುವೆ? ಹಿಂಟ್ಸ್​ ಕೊಟ್ಟ ನಟಿ ತಾರಾ ಅನುರಾಧ- ಯಾರೀ ಚೆಲುವ?
ಆಭರಣ ಮಳಿಗೆಯೊಂದರ ಜಾಹೀರಾತಿನಲ್ಲಿ ನಟಿ ತಾರಾ ಆಡಿದ ಮಾತಿನಿಂದ, ನಟಿ ಪ್ರೇಮಾ ಅವರ ಎರಡನೇ ಮದುವೆಯ ಬಗ್ಗೆ ಚರ್ಚೆ ಶುರುವಾಗಿದೆ. ಈ ಹಿಂದೆ ತಮ್ಮ ವಿಚ್ಛೇದನ, ಮದುವೆಯ ಬಗೆಗಿನ ಅಭಿಪ್ರಾಯ ಮತ್ತು ಒಂಟಿ ಜೀವನದ ಬಗ್ಗೆ ಮಾತನಾಡಿದ್ದ ಪ್ರೇಮಾ, ಈಗ ನಿಜವಾಗಿಯೂ ಮರುಮದುವೆ ಆಗುತ್ತಿದ್ದಾರೆಯೇ ಎಂಬ ಕುತೂಹಲ ಮೂಡಿದೆ.
ಸ್ಯಾಂಡಲ್​ವುಡ್​ ನಟಿ ಪ್ರೇಮಾ ಅವರಿಗೆ ಈಗ 49 ವರ್ಷ ವಯಸ್ಸು. ಸದ್ಯ ಅವರು ಸಿಂಗಲ್​ ಆಗಿದ್ದಾರೆ. ಸಿನಿಕರಿಯರ್‌ನ ಉತ್ತುಂಗದಲ್ಲಿ ಇದ್ದಾಗಲೇ ಜೀವನ್ ಅಪ್ಪಚ್ಚು ಎಂಬುವವರ ಜೊತೆ ಪ್ರೇಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, 2016ರಲ್ಲಿ ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಇದಾಗಲೇ ನಟಿ ತಮ್ಮ ಎರಡನೆಯ ಮದುವೆಯ ಬಗ್ಗೆ ಹಿಂದೆಯೂ ಮಾತನಾಡಿದ್ದರು. ಆದರೆ ಅವರು ಈಗ ಮರು ಮದುವೆ ಆಗುತ್ತಿದ್ದಾರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಇದಕ್ಕೆ ಕಾರಣ, ಹಿರಿಯ ನಟಿ ತಾರಾ ಅನುರಾಧ (Tara Anuradha). ಆಭರಣ ಮಳಿಗೆಯೊಂದರ ಜಾಹೀರಾತಿನ ಹಿನ್ನೆಲೆಯಲ್ಲಿ ತಾರಾ ಮತ್ತು ಪ್ರೇಮಾ ಅವರು ಮಳಿಗೆಗೆ ಭೇಟಿ ಕೊಟ್ಟಿದ್ದರು. ಆ ಸಮಯದಲ್ಲಿ, ಆಭರಣಗಳ ಬಗ್ಗೆ ಮಾತನಾಡುವಾಗ ನಟಿ ತಾರಾ, ಇದು ನಿನ್ನ ಮದುವೆಗೆ ಚೆನ್ನಾಗಿ ಕಾಣಿಸುತ್ತದೆ. ಮದುವೆ ದಿನ ಹಾಕಿಕೋ ಎಂದು ಹೇಳಿದ್ದಾರೆ. ಅಲ್ಲಿಗೆ, ಪ್ರೇಮಾ ಅವರು ಇನ್ನೊಂದು ಮದುವೆಯಾಗುತ್ತಿದ್ದಾರೆ ಎನ್ನುವ ಹಿಂಟ್​ ಕೊಟ್ಟರಾ ಎಂದು ಅಭಿಮಾನಿಗಳು ತಿಳಿದುಕೊಂಡಿದ್ದಾರೆ.

ಈ ಹಿಂದೆ ಪ್ರೇಮಾ ಅವರು, ತಮ್ಮ ಮತ್ತೊಂದು ಮದುವೆಯ ಬಗ್ಗೆ ಮಾತನಾಡಿದ್ದರು. ಅದರಲ್ಲಿ ಅವರು, ವೈಯಕ್ತಿಕ ಜೀವನ ಬೇರೆ, ವೃತ್ತಿ ಜೀವನ ಬೇರೆ. ನನಗೆ ಇಷ್ಟ ಇಲ್ಲ ಅಂದರೆ ನಾನು ನೇರವಾಗಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನ್ನ ವೈಯಕ್ತಿಕ ವಿಚಾರದ ಬಗ್ಗೆ ತಂದೆ-ತಾಯಿ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ತೀನಿ. ಅನೇಕರು ಜೀವನದಲ್ಲಿ ಸಮಸ್ಯೆ ಬಂತು ಅಂತ ಆತ್ಮಹತ್ಯೆ ಮಾಡಿಕೊಳ್ತಾರೆ, ಆದರೆ ಅವರಿಗೆಲ್ಲ ಸವಾಲನ್ನು ಎದುರಿಸಬೇಕು ಎಂದು ಹೇಳ್ತೀನಿ. ಮದುವೆಯೇ ಜೀವನ ಅಲ್ಲ, ನಿಮಗೂ ಬೇರೆ ಬದುಕಿದೆ. ವಿಶ್ವ ದೊಡ್ಡದಿದೆ, ಸಮಸ್ಯೆ ಇದ್ದರೆ ಕೆಲಸದ ಕಡೆ ಗಮನ ಕೊಡಿ, ಇಲ್ಲವೇ ನಿಮ್ಮ ಗಮನವನ್ನು ಬೇರೆ ಕಡೆ ನೀಡಿ ಎಂದಿದ್ದರು.

’ನನ್ನ ಮದುವ ನಿರ್ಧಾರ ಸರಿ ಇರಲಿಲ್ಲ ಅನಿಸುತ್ತದೆ ಆತುರದಲ್ಲಿ ನಿರ್ಧಾರಕ್ಕೆ ಬಂದೆ ಎನಿಸುತ್ತದೆ. ಮದುವೆ ಅನ್ನೋದು ಒಂದು ಕಮೀಟ್‌ಮೆಂಟ್. ಜವಾಬ್ದಾರಿ. ನನ್ನದೇ ತಪ್ಪು ಅಂತಲ್ಲ. ಇಬ್ಬರದ್ದು ತಪ್ಪು ಇದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು ಯಾಕೋ ನನಗೆ ಮದುವೆ ಬಳಿಕ ಆ ಸ್ವಾತಂತ್ರ ಇರಲಿಲ್ಲ ಅನಿಸುತ್ತಿತ್ತು. ನಾನು ಎಲ್ಲಾ ಹೆಣ್ಣು ಮಕ್ಕಳಿಗೆ ಹೇಳುವುದು ಅದೇ ಸಮಯ ತೆಗೆದುಕೊಂಡು ಯೋಚಿಸಿ. ಸುಖಾಸುಮ್ಮನೆ ದಿಢೀರ್‌ ನಿರ್ಧಾರಕ್ಕೆ ಬರಬೇಡಿ. ಮದುವೆ ಅನ್ನೋದು ಒಂದು ಜವಾಬ್ದಾರಿ ಆತುರ ಬೇಡ’ ಎಂದಿದ್ದರು ಪ್ರೇಮಾ.

’ಡಿವೋರ್ಸ್‌ ನಿರ್ಧಾರ ಅವತ್ತು ಬಹಳ ಕಷ್ಟವಾಗಿತ್ತು. ತಂದೆ ತಾಯಿ ಹೇಳುವುದು ಕಷ್ಟ ಅನಿಸಿತ್ತು ನಂತರ ಎಲ್ಲರೂ ಬೆಂಬಲವಾಗಿ ನಿಂತರು. ಬಳಿಕ ನಾನು ಹೆಜ್ಜೆ ಮುಂದಿಟ್ಟೆ. ಮದುವೆ ಆಗದೆಯೇ ಒಂಟಿಯಾಗಿಯೂ ಜೀವಿಸಬಹುದು. ಯಾಕಂದರೆ ಕೊನೆಗೆ ಹೋಗುವುದು ಒಬ್ಬರೇ ಅಲ್ಲವೆ? ಇನ್ನೊಬ್ಬರ ಮೇಲೆ ಯಾಕೆ ಅವಲಂಬಿತವಾಗಬೇಕು? ಇನ್ನೊಬ್ಬರ ಮೇಲೆ ಯಾಕೆ ನಿರೀಕ್ಷೆ ಇಟ್ಟುಕೊಳ್ಳಬೇಕು’ ಎಂದು ಪ್ರಶ್ನಿಸಿದ್ದರು ನಟಿ.

ನಟಿಯ ಕುರಿತು ಹೇಳುವುದಾದರೆ, 18ನೇ ವರ್ಷಕ್ಕೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಪ್ರೇಮಾ ಅವರು ಶಿವರಾಜ್‌ಕುಮಾರ್ ಜೊತೆಗೆ ‘ಓಂ’ ಚಿತ್ರದಲ್ಲಿ ನಟಿಸಿ ಅದ್ಭುತವಾದ ನಟನೆಗೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ತುಂಬ ಕಡಿಮೆ ಸಮಯದಲ್ಲಿ ಕನ್ನಡ, ತೆಲುಗು ಚಿತ್ರರಂಗದ ಸ್ಟಾರ್ ನಟರಿಗೆ ಪ್ರೇಮಾ ಅವರು ನಾಯಕಿಯಾಗಿ ಮಿಂಚಿದ್ದಾರೆ.

Source link

Leave a Reply

Your email address will not be published. Required fields are marked *