ದೇಶದ ಪ್ರಮುಖ ವಾಣಿಜ್ಯ ವಾಹನ ತಯಾರಕ ಟಾಟಾ ಮೋಟಾರ್ಸ್ಗೆ ವಿವಿಧ ರಾಜ್ಯ ಸಾರಿಗೆ ಸಂಸ್ಥೆಗಳಿಂದ 5,000ಕ್ಕೂ ಹೆಚ್ಚು ಬಸ್ಸುಗಳ ಬೃಹತ್ ಆರ್ಡರ್ ಲಭಿಸಿದೆ. ಈ ಒಪ್ಪಂದದಲ್ಲಿ ಟಾಟಾ ಮ್ಯಾಗ್ನಾ, ಸಿಟಿ ರೈಡ್, ಸ್ಟಾರ್ಬಸ್ ಮಾದರಿಗಳು ಸೇರಿವೆ. ಈ ಸುದ್ದಿ ನಡುವೆಯೂ ಕಂಪನಿಯ ಷೇರುಗಳು ಕುಸಿತ ಕಂಡಿವೆ.

ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್ಗೆ 5,000ಕ್ಕೂ ಹೆಚ್ಚು ಬಸ್ಗಳು ಮತ್ತು ಬಸ್ ಚಾಸಿಗಳಿಗಾಗಿ ಬೃಹತ್ ಆರ್ಡರ್ ಸಿಕ್ಕಿದೆ. ದೇಶದ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಕಂಪನಿಗೆ ಈ ಆರ್ಡರ್ ಬಂದಿದೆ. ಈ ಬಗ್ಗೆ ಟಾಟಾ ಮೋಟಾರ್ಸ್ ಶುಕ್ರವಾರ ಷೇರುಪೇಟೆಗೆ ಮಾಹಿತಿ ನೀಡಿದೆ. ವರದಿಗಳ ಪ್ರಕಾರ, ಇ-ಬಿಡ್ಡಿಂಗ್ ಮೂಲಕ ಟಾಟಾ ಮೋಟಾರ್ಸ್ ಈ ಆರ್ಡರ್ ಗಿಟ್ಟಿಸಿಕೊಂಡಿದೆ.

ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಗುಜರಾತ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬಿಹಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ರಾಜಸ್ಥಾನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಹರಿಯಾಣ ರೋಡ್ವೇಸ್ ಮತ್ತು ಚಂಡೀಗಢ ಸಾರಿಗೆ ಇಲಾಖೆಯಿಂದ ಟಾಟಾ ಮೋಟಾರ್ಸ್ಗೆ ಈ ದೊಡ್ಡ ಆರ್ಡರ್ ಬಂದಿದೆ.

ಟಾಟಾ ಮ್ಯಾಗ್ನಾ, ಟಾಟಾ ಸಿಟಿ ರೈಡ್, ಟಾಟಾ ಸ್ಟಾರ್ಬಸ್ ಮತ್ತು ಟಾಟಾ ಸ್ಟಾಲ್ಬಸ್ ಮಾಡೆಲ್ಗಳಿಗೆ ಅತಿ ಹೆಚ್ಚು ಬೇಡಿಕೆ ವ್ಯಕ್ತವಾಗಿದೆ. ಈ ಆರ್ಡರ್ನಲ್ಲಿ ಟಾಟಾ ಎಲ್ಪಿಒ 1618, ಟಾಟಾ ಎಲ್ಪಿಒ 1622 ಮತ್ತು ಟಾಟಾ ಎಲ್ಪಿಒ 1822 ಚಾಸಿಗಳೂ ಸೇರಿವೆ. ಟಾಟಾ ಮೋಟಾರ್ಸ್ನ ಕಮರ್ಷಿಯಲ್ ಪ್ಯಾಸೆಂಜರ್ ಪೋರ್ಟ್ಫೋಲಿಯೋದಲ್ಲಿ 9 ಸೀಟರ್ಗಳಿಂದ ಹಿಡಿದು 55 ಸೀಟರ್ಗಳವರೆಗಿನ ಬಸ್ಗಳಿವೆ.

ಶುಕ್ರವಾರ ಬಿಎಸ್ಇಯಲ್ಲಿ ಕಂಪನಿಯ ಷೇರುಗಳು ಕುಸಿತದೊಂದಿಗೆ ವಹಿವಾಟು ಆರಂಭಿಸಿದವು. ದಿನದ ವಹಿವಾಟಿನ ವೇಳೆ ಟಾಟಾ ಮೋಟಾರ್ಸ್ ಲಿಮಿಟೆಡ್ನ ಷೇರುಗಳು 418 ರೂ.ಗೆ ಇಳಿದಿದ್ದವು. ಮಧ್ಯಾಹ್ನ 2:30ರ ಸುಮಾರಿಗೆ ಕಂಪನಿಯ ಷೇರುಗಳು ಸುಮಾರು 426 ರೂ.ನಲ್ಲಿ ವಹಿವಾಟು ನಡೆಸುತ್ತಿದ್ದವು. ಇದು ಶೇ. 3ಕ್ಕಿಂತ ಹೆಚ್ಚು ಕುಸಿತವಾಗಿದೆ.

ಕಳೆದ ಒಂದು ತಿಂಗಳಲ್ಲಿ ಟಾಟಾ ಮೋಟಾರ್ಸ್ ಷೇರು ಬೆಲೆ ಶೇ. 11ರಷ್ಟು ಕುಸಿದಿದೆ. ಈ ಕುಸಿತದ ನಡುವೆಯೂ, ಈ ಟಾಟಾ ಗ್ರೂಪ್ ಕಂಪನಿಯು ಮೂರು ತಿಂಗಳ ಅವಧಿಯಲ್ಲಿ ಹೂಡಿಕೆದಾರರಿಗೆ ಶೇ. 14ರಷ್ಟು ಆದಾಯವನ್ನು ನೀಡಿದೆ. ಬಿಎಸ್ಇಯಲ್ಲಿ ಟಾಟಾ ಮೋಟಾರ್ಸ್ನ 52 ವಾರಗಳ ಗರಿಷ್ಠ ಬೆಲೆ 508.95 ರೂ. ಮತ್ತು 52 ವಾರಗಳ ಕನಿಷ್ಠ ಬೆಲೆ 306 ರೂ. ಆಗಿದೆ.

ಕೆಲವು ತಿಂಗಳ ಹಿಂದೆ, ಟಾಟಾ ಮೋಟಾರ್ಸ್ ಕಂಪನಿಯನ್ನು ಎರಡು ಭಾಗಗಳಾಗಿ ವಿಂಗಡಿಸಿತ್ತು. ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಮೋಟಾರ್ಸ್ ಕಮರ್ಷಿಯಲ್ ಎಂದು ವಿಭಾಗಿಸಲಾಗಿದ್ದು, ಎರಡೂ ವಿಭಾಗಗಳಲ್ಲಿ ವ್ಯವಹಾರವನ್ನು ಬೆಳೆಸುವತ್ತ ಗಮನಹರಿಸಲು ಈ ನಿರ್ಧಾರ ಕೈಗೊಳ್ಳಲಾಗಿತ್ತು.

Source link
ರಾಜ್ಯ ಸರ್ಕಾರಗಳಿಂದ ಟಾಟಾ ಮೋಟಾರ್ಸ್ಗೆ ಬಂಪರ್ ಆರ್ಡರ್: 5,000+ ಹೊಸ ಬಸ್ಗಳಿಗೆ ಬುಕಿಂಗ್!