Headlines

ಬೆಂಗಳೂರಲ್ಲಿ ಒಂದೇ ದಿನ 13,000 ಎಲೆಕ್ಟ್ರಿಕ್ ವಾಹನ ನೋಂದಣಿ, ಎಲ್ಲರೂ ಇವಿ ಖರೀದಿಗೆ ಇದೆ ಕಾರಣ

ಬೆಂಗಳೂರಲ್ಲಿ ಒಂದೇ ದಿನ 13,000 ಎಲೆಕ್ಟ್ರಿಕ್ ವಾಹನ ನೋಂದಣಿ, ಎಲ್ಲರೂ ಇವಿ ಖರೀದಿಗೆ ಇದೆ ಕಾರಣ

ಬೆಂಗಳೂರಲ್ಲಿ ಒಂದೇ ದಿನ 13,000 ಎಲೆಕ್ಟ್ರಿಕ್ ವಾಹನ ನೋಂದಣಿ, ಎಲ್ಲರೂ ಇವಿ ಖರೀದಿಗೆ ಇದೆ ಕಾರಣ

ಬೆಂಗಳೂರಲ್ಲಿ ಒಂದೇ ದಿನ 13,000 ಎಲೆಕ್ಟ್ರಿಕ್ ವಾಹನ ನೋಂದಣಿ, ಎಲ್ಲರೂ ಇವಿ ಖರೀದಿಗೆ ಇದೆ ಕಾರಣ, ಇದು ಅತ್ಯಧಿಕ ದಾಖಲೆಯಾಗಿದೆ. ಅಷ್ಟಕ್ಕೂ ಬೆಂಗಳೂರಲ್ಲಿ ಇವಿ ಖರೀದಿ ಹೆಚ್ಚಾಗಲು ಕಾರಣವೇನು?

ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ತುಸು ಹೆಚ್ಚಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಭಾರಿ ಬದಲಾವಣೆ ಕಾಣುತ್ತಿದೆ. ವಿಶೇಷ ಅಂದರೆ ಒಂದೇ ದಿನ ಬೆಂಗಳೂರಿನಲ್ಲಿ ಬರೋಬ್ಬರಿ 13 ಸಾವಿರ ಎಲೆಕ್ಟ್ರಿಕ್ ವಾಹನಗಳು ರಿಜಿಸ್ಟ್ರೇಶನ್ ಆಗಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ. ಅಷ್ಟಕ್ಕೂ ಜನರು ದಿಢೀರ್ ಇವಿ ವಾಹನ ಮೊರೆ ಹೋಗಲು ಎರಡು ಕಾರಣಗಳಿವೆ.

ಮಾರ್ಚ್ 31ರಂದು ಬೆಂಗಳೂರಿನಲ್ಲಿ 13 ಸಾವಿರ ಇವಿ ವಾಹನಗಳು ನೋಂದಣಿಯಾಗಿದೆ. 11 ವಿವಿಧ ಆರ್‌ಟಿಒ ಕಚೇರಿಗಳಲ್ಲಿ ಈ ವಾಹನಗಳು ರಿಜಿಸ್ಟ್ರೇಶನ್ ಆಗಿದೆ. ಈ ಪೈಕಿ ಹೆಚ್ಚಿನ ವಾಹನಗಳು ದ್ವಿಚಕ್ರವಾಹನಗಳಾಗಿದೆ. ಇನ್ನು ಕೈಗೆಟುಕುವ ದರದ ಕಾರು ಸೇರಿದಂತೆ ಇತರ ಇವಿ ವಾಹನಗಳು ಸೇರಿದೆ.

ಬೆಂಗಳೂರಲ್ಲಿ ಪ್ರತಿ ದಿನ ನೋಂದಣಿಯಾಗುತ್ತಿರುವ ಇವಿ ವಾಹನಗಳ ಸಂಖ್ಯೆಯಲ್ಲಿ ಶೇಕಡಾ 400ರಷ್ಟು ಏರಿಕೆಯಾಗಿದೆ. 2026ರಲ್ಲಿ ಬೆಂಗಳೂರಲ್ಲಿ ಪ್ರತಿ ದಿನ ಸರಾಸರಿ 267 ಎಲೆಕ್ಟ್ರಿಕ್ ವಾಹನಗಳು ರಿಜಿಸ್ಟ್ರೇಶನ್ ಆಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 400ರಷ್ಟು ಏರಿಕೆಯಾಗಿದೆ.

ತೆರಿಗೆ ಸೌಲಭ್ಯದ ಕಾರಣ ಮಾರ್ಚ್ 31ರಂದು ಹಲವರ ಇವಿ ವಾಹನ ರಿಡಿಸ್ಟ್ರೇಶನ್ ಆಗಿದೆ. ಎಪ್ರಿಲ್ 1, 2026ರಿಂದ ಎಲೆಕ್ಟ್ರಿಕ್ ವಾಹನಗಳಿಗೆ ಹೊಸ ತೆರೆಗೆ ನೀತಿ ಅನ್ವಯವಾಗಲಿದೆ. ಹೀಗಾಗಿ ಮಾರ್ಚ್ 31ಕ್ಕೆ ಹಳೇ ತೆರಿಗೆ ನಿಯಮದಡಿ ವಾಹನ ಖರೀದಿಸಿ ಲಾಭ ಮಾಡಿಕೊಳ್ಳಲು ಜನರು ಮುಗಿಬಿದಿದ್ದರು.

ಯುದ್ಧದಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಪ್ರಮುಖ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದ ಬೆಲೆ ಏರಿಕೆ, ಕೊರತೆ ಸಮಸ್ಯೆಗಳು ಎದುರಾಗಿದೆ. ಇದರ ಬೆನ್ನಲ್ಲೇ ಹಲವರು ಎಲೆಕ್ಟ್ರಿಕ್ ವಾಹನಗಳತ್ತ ವಾಲಿದ್ದಾರೆ. ಸುಲಭ ಹಾಗೂ ಕಡಿಮೆ ನಿರ್ವಹಣೆ ವೆಚ್ಚದತ್ತ ಜನ ಆಕರ್ಷಿತರಾಗುತ್ತಿದ್ದಾರೆ.

ಕರ್ನಾಟಕದಲ್ಲಿ ಇವಿ ನೋಂದಣಿಯಲ್ಲಿ ದಾಖಲೆ ನಿರ್ಮಾಣವಾಗಿದೆ. 2026ರ ಜನವರಿ ತಿಂಗಳಿನಿಂದ ಮಾರ್ಚ್ ಅಂತ್ಯದವರೆಗೆ ಕರ್ನಾಟಕದಲ್ಲಿ 54,379 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿದೆ. ಕಳೆದ ವರ್ಷ ಇದೇ ಮೂರು ತಿಂಗಳಲ್ಲಿ ಕರ್ನಾಟಕದಲ್ಲಿ 35,000 ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿತ್ತು.

50 ಸಾವಿರ ಇವಿ ನೋಂದಣಿ

Source link

Leave a Reply

Your email address will not be published. Required fields are marked *