ಟಿ20 ವಿಶ್ವಕಪ್ ಫೈನಲ್‌ನಲ್ಲಿ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದ ಟೀಂ ಇಂಡಿಯಾ; ರೆಕಾರ್ಡ್ ಪಟ್ಟಿ

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದ ಟೀಂ ಇಂಡಿಯಾ; ರೆಕಾರ್ಡ್ ಪಟ್ಟಿ

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದ ಟೀಂ ಇಂಡಿಯಾ; ರೆಕಾರ್ಡ್ ಪಟ್ಟಿ
ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಭಾರತ ತಂಡವು ಹಲವು ಐತಿಹಾಸಿಕ ದಾಖಲೆಗಳನ್ನು ನಿರ್ಮಿಸಿದೆ. ಆವೃತ್ತಿಯೊಂದರಲ್ಲಿ 100+ ಸಿಕ್ಸರ್‌ ಸಿಡಿಸಿದ ಮೊದಲ ತಂಡ, ಫೈನಲ್‌ನಲ್ಲಿ ಗರಿಷ್ಠ ರನ್‌ ಅಂತರದ ಗೆಲುವು ಹಾಗೂ ತವರಿನಲ್ಲೇ ಟಿ20 ವಿಶ್ವಕಪ್‌ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತ ತಂಡ ಈ ಬಾರಿ ಟೂರ್ನಿಯಲ್ಲಿ 106 ಸಿಕ್ಸರ್‌ ಸಿಡಿಸಿದ್ದು, ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿಕೊಂಡಿತು. ವೆಸ್ಟ್‌ಇಂಡೀಸ್‌ ಈ ಬಾರಿ 76 ಸಿಕ್ಸರ್‌ ಬಾರಿಸಿದ್ದು, ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ತಂಡಗಳ ಪೈಕಿ 2ನ ಸ್ಥಾನದಲ್ಲಿದೆ.ಆವೃತ್ತಿಯೊಂದರಲ್ಲಿ 100+ ಸಿಕ್ಸರ್‌ ಸಿಡಿಸಿದ ಮೊದಲ ತಂಡ ಭಾರತ!

ಭಾರತ ತಂಡ ಈ ಬಾರಿ ಟೂರ್ನಿಯಲ್ಲಿ 106 ಸಿಕ್ಸರ್‌ ಸಿಡಿಸಿದ್ದು, ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿಕೊಂಡಿತು. ವೆಸ್ಟ್‌ಇಂಡೀಸ್‌ ಈ ಬಾರಿ 76 ಸಿಕ್ಸರ್‌ ಬಾರಿಸಿದ್ದು, ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ತಂಡಗಳ ಪೈಕಿ 2ನ ಸ್ಥಾನದಲ್ಲಿದೆ.

ಭಾರತ 96 ರನ್‌ಗಳಿಂದ ಗೆದ್ದಿದ್ದು, ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಯಾವುದೇ ತಂಡದ ಗರಿಷ್ಠ ರನ್‌ ಅಂತರದ ಗೆಲುವು. 2012ರ ಫೈನಲ್‌ನಲ್ಲಿ ಲಂಕಾ ವಿರುದ್ಧ ವಿಂಡೀಸ್‌ 36 ರನ್‌ಗಳಿಂದ ಗೆದ್ದಿದ್ದು ಈವರೆಗಿನ ಅತಿ ದೊಡ್ಡ ಗೆಲುವಾಗಿತ್ತು. ಭಾರತ ತಂಡ ಟಿ20 ವಿಶ್ವಕಪ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿ ನ್ಯೂಜಿಲೆಂಡ್‌ ವಿರುದ್ಧ ಗೆದ್ದಿದೆ. ಈ ಹಿಂದಿನ 3 ಪಂದ್ಯಗಳಲ್ಲೂ ಸೋತಿತ್ತು.

ಭಾರತ ತಂಡ ತವರಿನಲ್ಲೇ ಏಕದಿನ ಹಾಗೂ ಟಿ20 ವಿಶ್ವಕಪ್‌ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ. 2011ರಲ್ಲಿ ಭಾರತದಲ್ಲೇ ನಡೆದಿದ್ದ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಗೆದ್ದು, ತವರಿನಲ್ಲಿ ಈ ಸಾಧನೆ ಮಾಡಿದ ಮೊದಲ ಟೀಂ ಎಂಬ ವಿಶೇಷ ಸಾಧನೆ ಮಾಡಿತ್ತು. ಈ ಬಾರಿ ಟಿ20 ವಿಶ್ವಕಪ್‌ನಲ್ಲೂ ಅದೇ ಸಾಧನೆ ಪುನರಾವರ್ತಿಸಿದೆ. ಈವರೆಗೂ ಯಾವುದೇ ತಂಡ ತವರಿನಲ್ಲಿ ಟಿ20 ವಿಶ್ವಕಪ್‌ ಗೆದ್ದಿರಲಿಲ್ಲ.

ಈವರೆಗೆ ಯಾವ ತಂಡವೂ ಸತತ 2, ಒಟ್ಟಾರೆ 3 ಬಾರಿ ಟಿ20 ವಿಶ್ವಕಪ್‌ ಜಯಿಸಿರಲಿಲ್ಲ. ಭಾರತ ತಂಡ ಈ ಬಾರಿ ಆ ದಾಖಲೆಯನ್ನು ಸೃಷ್ಟಿಸಿದೆ. ತಂಡ ಈ ಹಿಂದೆ 2007, 2024ರಲ್ಲಿ ಚಾಂಪಿಯನ್‌ ಆಗಿತ್ತು. ಈ ಬಾರಿ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಂಡಿದೆ.

₹27.58 ಕೋಟಿ

ಚಾಂಪಿಯನ್‌ ಭಾರತಕ್ಕೆ ₹27.58 ಕೋಟಿ ನಗದು ಬಹುಮಾನ ಲಭಿಸಿತು.

₹14.70 ಕೋಟಿ

ರನ್ನರ್‌-ಅಪ್‌ ನ್ಯೂಜಿಲೆಂಡ್‌ಗೆ ಸಿಕ್ಕ ಬಹುಮಾನ ಮೊತ್ತ ₹14.70 ಕೋಟಿ

ಕಳೆದ 3 ಏಕದಿನ ವಿಶ್ವಕಪ್‌ ಫೈನಲ್‌ಗಳ ಮೊದಲ ಇನ್ನಿಂಗ್ಸ್‌ನಲ್ಲಿ ದಾಖಲಾದ ಮೊತ್ತಕ್ಕಿಂತ ಈ ಬಾರಿಯ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಹೆಚ್ಚು ಮೊತ್ತ ದಾಖಲಿಸಿತು. 2015ರ ವಿಶ್ವಕಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ 183, 2019ರ ಫೈನಲ್‌ನಲ್ಲಿ ನ್ಯೂಜಿಲೆಂಡ್‌ 241 ರನ್‌ ಗಳಿಸಿತ್ತು. ಅಹಮದಾಬಾದ್‌ನಲ್ಲೇ ನಡೆದಿದ್ದ 2023ರ ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 50 ಓವರಲ್ಲಿ 240ಕ್ಕೆ ಆಲೌಟ್‌ ಆಗಿತ್ತು.

ಅಂ.ರಾ. ಟಿ20 ಕ್ರಿಕೆಟ್‌ನಲ್ಲಿ ಸತತ 2 ಪಂದ್ಯಗಳಲ್ಲಿ 250ಕ್ಕೂ ಹೆಚ್ಚು ಮೊತ್ತ ದಾಖಲಿಸಿದ ಮೊದಲ ತಂಡ ಭಾರತ. ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಸನ್‌ರೈಸರ್ಸ್‌ ಹೈದ್ರಾಬಾದ್‌ ಮಾತ್ರ ಈ ಸಾಧನೆ ಮಾಡಿದೆ. 2024ರ ಐಪಿಎಲ್‌ನಲ್ಲಿ ಆರ್‌ಸಿಬಿ, ಡೆಲ್ಲಿ ವಿರುದ್ಧ ಸನ್‌ರೈಸರ್ಸ್‌ ಸತತ 2 ಪಂದ್ಯದಲ್ಲಿ 250ಕ್ಕೂ ಹೆಚ್ಚು ರನ್‌ ಗಳಿಸಿತ್ತು

2023ರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯವನ್ನೂ ಭಾರತ ಅಹಮದಾಬಾದ್‌ನಲ್ಲೇ ಆಡಿತ್ತು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 50 ಓವರಲ್ಲಿ 240 ರನ್‌ ಗಳಿಸಿತ್ತು. 2026ರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ 20 ಓವರಲ್ಲಿ 255 ರನ್‌ ಪೇರಿಸಿತು.

ಇದನ್ನೂ  ಓದಿ: ಭಾರತದ ಪರಾಕ್ರಮಕ್ಕೆ ನ್ಯೂಜಿಲೆಂಡ್‌ ಪತನ! ನಿನ್ನೆ ಮ್ಯಾಚ್‌ನಲ್ಲಿ ಟೀಂ ಇಂಡಿಯಾ ಅಬ್ಬರ ಹೇಗಿತ್ತು?

ಸ್ಯಾಮ್ಸನ್‌ ಗಳಿಸಿದ 89 ರನ್‌, ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ದಾಖಲಾದ ಗರಿಷ್ಠ ವೈಯಕ್ತಿಕ ಮೊತ್ತ. 2016ರಲ್ಲಿ ಇಂಗ್ಲೆಂಡ್‌ ವಿರುದ್ಧ ವಿಂಡೀಸ್‌ನ ಸ್ಯಾಮುಯಲ್ಸ್‌, 2021ರಲ್ಲಿ ಆಸೀಸ್‌ ವಿರುದ್ಧ ಕಿವೀಸ್‌ನ ವಿಲಿಯಮ್ಸನ್‌ ತಲಾ 85 ರನ್‌ ಗಳಿಸಿದ್ದರು.

ಇದನ್ನೂ ಓದಿ: ಟೀಕಾಕಾರರ ಬಾಯಿ ಮುಚ್ಚಿಸಿದ ಗೌತಮ್‌ ಗಂಭೀರ್; ಆಟಗಾರನಾಗಿ, ಕೋಚ್ ಆಗಿ ವಿಶ್ವಕಪ್ ಗೆದ್ದು ಇತಿಹಾಸ!

Source link

Leave a Reply

Your email address will not be published. Required fields are marked *