ಮಾಡೆಲ್ ಆದಿತಿ ಜೊತೆ ಇಶಾನ್ ಕಿಶನ್ ಮದುವೆ, ಇಶಾನ್ ಕಿಶನ್ ಬಹುಕಾಲದ ಗರ್ಲ್ಫ್ರೆಂಡ್ ಮದುವೆಯಾಗುತ್ತಾರೆ. ಕಿಶನ್ ಪ್ರೀತಿಯನ್ನು ನಾವು ಒಪ್ಪಿಕೊಂಡಿದ್ದೇವೆ ಎಂದಿದ್ದಾರೆ. ಯಾರು ಈ ಸುಂದರಿ?

ಟಿ20 ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಇಶಾನ್ ಕಿಶನ್ ಇತಿಹಾಸ ರಚಿಸಿದ್ದರು. ಇದರ ಬೆನ್ನಲ್ಲೇ ಇಶಾನ್ ಕಿಶನ್ ಮದುವೆ ಮಾತುಕತೆಗಳು ಕೇಳಿಬರುತ್ತಿದೆ. ಇಶಾನ್ ಕಿಶನ್ ಗರ್ಲ್ಫ್ರೆಂಡ್, ಮದುವೆ ಮಾತುಗಳ ಬೆನ್ನಲ್ಲೇ ಕ್ರಿಕೆಟಿನ ಅಜ್ಜ ಅನುರಾಗ್ ಪಾಂಡೆ ಖಚಿತಪಡಿಸಿದ್ದಾರೆ. ಇಶಾನ್ ಕಿಶನ್ ಗರ್ಲ್ಫ್ರೆಂಡ್ ಇರುವುದು ನಿಜ. ಆಕೆಯ ಜೊತೆಗೆ ಮದುವೆಯಾಗುತ್ತಾರೆ ಎಂದಿದ್ದಾರೆ.

ಇಶಾನ್ ಕಿಶನ್ ಮದುವೆಯಾಗುತ್ತಿರುವ ಹುಡಿಗಿ ಆದಿತಿ ಹುಂಡಿಯಾ. ಇಶಾನ್ ಕಿಶನ್ ಕಳೆದ ಕೆಲ ವರ್ಷಗಳಿಂದ ಅದಿತಿ ಹುಂಡಿಯಾ ಜೊತೆ ಪ್ರೀತಿಯಲ್ಲಿದ್ದಾರೆ. ಈ ಕುರಿತು ಇಶಾನ್ ಕಿಶನ್ ತನ್ನ ಅಜ್ಜನ ಬಳಿ ಹೇಳಿಕೊಂಡಿದ್ದರು. ಇಶಾನ್ ಕಿಶನ್ ಪ್ರೀತಿ ವಿಚಾರ ಎರಡೂ ಮನೆಯವರಿಗೂ ಗೊತ್ತಿದೆ. ಇವರಿಬ್ಬರ ಪ್ರೀತಿಯನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಅನುರಾಗ್ ಪಾಂಡೆ ಹೇಳಿದ್ದಾರೆ.

ಅದಿತಿ ಹುಂಡಿಯಾ ಜೈಪುರದ ಮಾಡೆಲ್. ಹಲವು ಬ್ಯೂಟಿ ವೇದಿಕೆಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 2018ರಲ್ಲಿ ಮಿಸ್ ದಿವಾ ಪ್ರಶಸ್ತಿ ಗೆದ್ದಿರುವ ಅದಿತಿ ಹುಂಡಿಯಾ, ಬಳಿಕ ಫೆಮಿನಾ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿ ಗಮನ ಸೆಳೆದಿದ್ದರು. 2019ರ ಐಪಿಎಲ್ ಟೂರ್ನಿಯಲ್ಲಿ ತಂಡವನ್ನು ಚಿಯರ್ ಮಾಡಿ ಕ್ಯಾಮೆರಾ ಕಣ್ಣಿಗೆ ಬಿದ್ದು ವೈರಲ್ ಆಗಿದ್ದರು. ಜೈಪುರದ ಖ್ಯಾತ ಉದ್ಯಮಿ ಪುತ್ರಿಯಾಗಿರುವ ಆದಿತಿ, ಇಶಾನ್ ಜೊತೆ ರಿಲೇಶನ್ಶಿಪ್ನಲ್ಲಿದ್ದಾರೆ.

ಇಶಾನ್ ಕಿಶನ್ ಪ್ರೀತಿಸುತ್ತಿರುವ ವಿಚಾರ ಹೇಳಿದ್ದಾರೆ. ಮಾಡೆಲ್ ಅದಿತಿ ಜೊತೆ ಪ್ರೀತಿಯಲ್ಲಿದ್ದಾರೆ. ಇಶಾನ್ ಕಿಶನ್ ನಿರ್ಧಾರವೇ ನಮ್ಮದು. ಮಕ್ಕಳು ಖುಷಿಯಾಗಿರುವುದು ಮುಖ್ಯ. ಅವರ ಪ್ರೀತಿಯನ್ನು ನಾವು ಒಪ್ಪಿದ್ದೇವೆ. ಆಕೆಯನ್ನು ಮನೆಗೆ ಸ್ವಾಗತಿಸವು ನಾವು ಸಿದ್ಧರಿದ್ದೇವೆ ಎಂದು ಅನುರಾಗ್ ಪಾಂಡೆ ಹೇಳಿದ್ದಾರೆ.

ಇಶಾನ್ ಕಿಶನ್ ಹಾಗೂ ಅದಿತಿ ಪ್ರೀತಿ ಕುರಿತು ಅಜ್ಜ ಅನುರಾಗ್ ಪಾಂಡೆ ಖಚಿತಪಡಿಸಿದ್ದಾರೆ. ಆದರೆ ಕ್ರಿಕೆಟಿಗ ಇಶಾನ್ ಕಿಶನ್, ಮಾಡೆಲ್ ಆದಿತಿ ಈ ಕುರಿತು ಯಾವುದೇ ವಿಚಾರ ಅಧಿಕೃತಗೊಳಿಸಿಲ್ಲ. ಅನುರಾಗ್ ಪಾಂಡೆ ಹೇಳಿಕೆ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಶೀಘ್ರದಲ್ಲೇ ಈ ಜೋಡಿ ಮದುವೆಯಾಗಲಿದೆ ಎನ್ನುತ್ತಿದೆ.

ಇಶಾನ್-ಅದಿತಿಯಿಂದ ಅಧಿಕೃತ ಘೋಷಣೆ ಇಲ್ಲ

Source link
ಮಾಡೆಲ್ ಆದಿತಿ ಜೊತೆ ಇಶಾನ್ ಕಿಶನ್ ಮದುವೆ, ಪ್ರೀತಿ ಖಚಿತಪಡಿಸಿದ ಕ್ರಿಕೆಟಿಗನ ಅಜ್ಜ