ಟಿ20 ಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಕಾಡುತ್ತಿದೆ ಸಂಡೇ ಅಪಶಕುನ, ಫ್ಯಾನ್ಸ್ ಆತಂಕ, ಭಾರತ ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯಕ್ಕೂ ಮುನ್ನವೇ ಅಭಿಮಾನಿಗಳಿಗೆ ಆತಂಕ ಶುರುವಾಗಿದ್ದು ಯಾಕೆ?

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಫೈನಲ್ ಪಂದ್ಯಕ್ಕೆ ಅಭಿಮಾನಿಗಳು ಕಾತರಗೊಂಡಿದ್ದಾರೆ. ಇಡೀ ಟೂರ್ನಿಯಲ್ಲಿ ಸೌತ್ ಆಫ್ರಿಕಾ ವಿರುದ್ದ ಮುಗ್ಗರಿಸಿದರೂ ಟೀಂ ಇಂಡಿಯಾ ಪ್ರದರ್ಶನ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ. ನ್ಯೂಜಿಲೆಂಡ್ ವಿರುದ್ಧವೂ ಭಾರತ ಗೆದ್ದು ಟ್ರೋಫಿ ಕೈವಶ ಮಾಡಲಿದೆ ಅನ್ನೋ ವಿಶ್ವಾಸ ಹೆಚ್ಚಾಗುತ್ತಿದೆ. ಆದರೆ ಫೈನಲ್ ಹತ್ತಿರಬರುತ್ತಿದ್ದಂತೆ ಅಭಿಮಾನಿಗಳಗೆ ಹೊಸ ಆತಂಕ ಎದುರಾಗಿದೆ.

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಫೈನಲ್ ಪಂದ್ಯ ಮಾರ್ಚ್ 8ರಂದು ಭಾನುವಾರ ನಡೆಯಲಿದೆ. ಆದರೆ ಭಾನುವಾರದ ಆತಂಕ ಹೆಚ್ಚಾಗುತ್ತಿದೆ. ಕಾರಣ ಇದುವರೆಗೆ ಟೀಂ ಇಂಡಿಯಾ ಭಾನುವಾರ ಐಸಿಸಿ ವಿಶ್ವಕಪ್ ಟ್ರೋಫಿ ಗೆದ್ದಿಲ್ಲ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಭಾನುವಾರ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು.

ಟಿ20 ಹಾಗೂ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಲವು ಬಾರಿ ಫೈನಲ್ ಪ್ರವೇಶಿಸಿದೆ. ಈ ಪೈಕಿ 2023ರ ಫೈನಲ್ ಭಾನುವಾರ ನಡೆದಿದ್ದು ಸೋಲು ಕಂಡಿದೆ. ಇನ್ನುಳಿದ ಫೈನಲ್ ಬೇರೆ ವಾರದಲ್ಲಿ ನಡೆದಿದ್ದು, ಗೆಲುವು ಸಾಧಿಸಿದೆ.

1983ರ ಏಕದಿನ ವಿಶ್ವಕಪ್, ಶನಿವಾರ

2007ರ ಟಿ20 ವಿಶ್ವಕಪ್, ಸೋಮವಾರ

2011ರ ಏಕದಿನ ವಿಶ್ವಕಪ್, ಶನಿವಾರ

2024ರ ಟಿ20 ವಿಶ್ವಕಪ್, ಶನಿವಾರ

2023ರ ಏಕದಿನ ವಿಶ್ವಕಪ ಫೈನಲ್ ಪಂದ್ಯ ಕೂಡ ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿತ್ತು. ಆಸ್ಟ್ರೇಲಿಯಾ ಗೆದ್ದು ಬೀಗಿತ್ತು. ಇದೀಗ ಭಾರತ ನ್ಯೂಜಿಲೆಂಡ್ ಟಿ20 ಫೈನಲ್ ಪಂದ್ಯ ಇದೇ ಅಹಮ್ಮದಾಬಾದ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ಈಬಾರಿ ಈ ಸಂಪ್ರದಾಯಕ ಬ್ರೇಕ್ ಮಾಡಲಿದೆ ಎಂದು ಹಲವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್ ತಂಡ ಭಾರತಕ್ಕೆ ಪ್ರಬಲ ಎದುರಾಳಿ ಅನ್ನೋದರಲ್ಲಿ ಎರಡು ಮಾತಿಲ್ಲ. ಆದರೆ ಭಾರತ ಬಲಿಷ್ಠ ತಂಡ. ಯುವ ಪಡೆಯನ್ನೇ ಹೊಂದಿರುವ ಟೀಂ ಇಂಡಿಯಾ ಈಗಾಗಲೇ ಉತ್ತಮ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದೆ. ಹೀಗಾಗಿ ಸೋಲುವ ಮಾತೇ ಇಲ್ಲ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಲಿಷ್ಠ ತಂಡ ಭಾರತ

Source link
ಟಿ20 ಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಕಾಡುತ್ತಿದೆ ಸಂಡೇ ಅಪಶಕುನ, ಫ್ಯಾನ್ಸ್ ಆತಂಕ