Headlines

2023ರ ಕಹಿ ನೆನಪು, ಟಿ20 ಫೈನಲ್‌ಗೆ ಟೀಂ ಇಂಡಿಯಾ ಹೊಟೆಲ್ ಬದಲು, ಈ ಬಾರಿ ಕೈಹಿಡಿಯುತ್ತಾ ನಂಬಿಕೆ?

2023ರ ಕಹಿ ನೆನಪು, ಟಿ20 ಫೈನಲ್‌ಗೆ ಟೀಂ ಇಂಡಿಯಾ ಹೊಟೆಲ್ ಬದಲು, ಈ ಬಾರಿ ಕೈಹಿಡಿಯುತ್ತಾ ನಂಬಿಕೆ?

2023ರ ಕಹಿ ನೆನಪು, ಟಿ20 ಫೈನಲ್‌ಗೆ ಟೀಂ ಇಂಡಿಯಾ ಹೊಟೆಲ್ ಬದಲು, ಈ ಬಾರಿ ಕೈಹಿಡಿಯುತ್ತಾ ನಂಬಿಕೆ?

2023ರ ಕಹಿ ನೆನಪು, ಟಿ20 ಫೈನಲ್‌ಗೆ ಟೀಂ ಇಂಡಿಯಾ ಹೊಟೆಲ್ ಬದಲು, ಈ ಬಾರಿ ಕೈಹಿಡಿಯುತ್ತಾ ನಂಬಿಕೆ? ಚಂದ್ರಗ್ರಹಣಕ್ಕೆ ಅಭ್ಯಾಸ ಮುಂದೂಡಿಕೆಯಿಂದ ಹಿಡಿದು ಈ ಬಾರಿಯ ಟೀಂ ಇಂಡಿಯಾ ಶುಭಶಕುನಕ್ಕಾಗಿ ಭಾರಿ ಕಸರತ್ತು ನಡೆಸಿದೆ.

ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕಾತರ ಹೆಚ್ಚಾಗಿದೆ. ಮಾರ್ಚ್ 8 ರಂದು ಭಾರತ ಹಾಗೂ ನ್ಯೂಜಿಲೆಂಡ್ ತಂಡ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ರೋಚಕ ಹೋರಾಟ ನಡೆಯಲಿದೆ. ಈ ಭಾರಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ಜೊತೆಗೆ ನಂಬಿಕೆ ಮೇಲೂ ವಿಶ್ವಾಸವಿಟ್ಟಿದೆ. ಹೀಗಾಗಿ ಹಲವು ಬದಲಾವಣೆಗಳನ್ನು ಮಾಡಿಕೊಂಡು ಯಶಸ್ವಿಯಾಗಿದೆ. ಇದೀಗ ಹೊಟೆಲನ್ನೇ ಬದಲಿಸಿದೆ.

ಕ್ರಿಕೆಟಿಗರು ಸೇರಿದಂತೆ ಕ್ರೀಡಾಪಟುಗಳಲ್ಲಿ ಕೆಲ ಮೂಡನಂಬಿಕೆ ಇರುವುದು ಸುಳ್ಳಲ್ಲ. ಪ್ಯಾಡ್ ಕಟ್ಟುವಾಗ ಎಡಗಾಲಿಗೆ ಮೊದಲು, ಬ್ಯಾಟಿಂಗ್ ಇಳಿಯುವ ಮೊದಲು ಪೆವಿಲಿಯನ್ ಬದಲು ಡಗೌಟ್‌ನಲ್ಲಿ ಕುಳಿತುಕೊಳ್ಳುವುದು, ಹೆಲ್ಮೆಟ್ ಧರಿಸಿ ಕೂರುವುದು ಸೇರಿದಂತೆ ಹಲವಿದೆ. ಇದೀಗ ಟೀಂ ಇಂಡಿಯಾ 2023ರ ಕಹಿ ಸೋಲಿನಿಂದ ಟಿ20 ಫೈನಲ್ ಪಂದ್ಯಕ್ಕೂ ಮುನ್ನ ಹೊಟೆಲ್‌ನ್ನು ಬದಲಿಸಿದೆ.

ನರೇಂದ್ರ ಮೋದಿ ಕ್ರೀಡಾಂಗಣ ಅಹಮ್ಮದಾಬಾದ್‌ನಲ್ಲಿ ಭಾರತಕ್ಕೆ ಕಹಿ ನೆನಪುಗಳೇ ಹೆಚ್ಚು. 2023ರ ವಿಶ್ವಕಪ್ ಫೈನಲ್ ಪಂದ್ಯದಲ್ಲೂ ಭಾರತ ಮುಗ್ಗರಿಸಿತ್ತು. ಇನ್ನು ಮೊನ್ನೆ ಮೊನ್ನೆ ಸೂಪರ್ 8 ಹಂತದಲ್ಲಿ ಸೌತ್ ಆಫ್ರಿಕಾ ವಿರುದ್ದ ಮುಗ್ಗರಿಸಿತ್ತು. ಇದಕ್ಕಾಗಿ ಈ ಬಾರಿ ಟಿ20 ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಎಂದಿನ ಹೊಟೆಲ್ ಬಿಟ್ಟು ಬೇರೆ ಹೊಟೆಲ್‌ನಲ್ಲಿ ತಂಗಿದೆ.

ಮಾರ್ಚ್ 3ರಂದು ಗ್ರಹಣದ ಸಂದರ್ಭದಲ್ಲಿ ಟೀಂ ಇಂಡಿಯಾ ಅಭ್ಯಾಸ ಮುಂದೂಡಿತ್ತು. ಗ್ರಹಣದ 45 ನಿಮಿಷ ಕಾಲ ಟೀಂ ಇಂಡಿಯಾ ಅಭ್ಯಾಸ ಮಾಡಿಲ್ಲ. ನಕರಾತ್ಮಕ ಯಾವುದೇ ವಿಚಾರಗಳು ಟೀಂ ಇಂಡಿಯಾ ಸೋಕದಿರಲಿ ಅನ್ನೋ ಕಾರಣಕ್ಕೆ ಗ್ರಹಣದ ವೇಳೆ ಅಭ್ಯಾಸ ಮುಂದೂಡಲಾಗಿತ್ತು. ಬಳಿಕ ಇಂಗ್ಲೆಂಡ್ ವಿರುದ್ದ ಅಬ್ಬರಿಸಿ ಫೈನಲ್ ಪ್ರವೇಶಿಸಿತ್ತು.

ಅಹಮ್ಮದಾಬಾದ್‌ನಲ್ಲಿ ಮೂರು ಪಿಚ್‌ಗಳಿವೆ. ಸೌತ್ ಆಫ್ರಿಕಾ ವಿರುದ್ದ ಸೂಪರ್ 8 ಹಂತದ ಪಂದ್ಯದಲ್ಲಿ ಬ್ಲಾಕ್ ಪಿಚ್‌ನಲ್ಲಿ ಆಡಿತ್ತು. ಭಾರತ ಸೋಲು ಕಂಡಿತ್ತು. ಇತ್ತ ಮುಂಬೈನಲ್ಲಿ ರೆಡ್ ಪಿಚ್‌ನಲ್ಲಿ ಭಾರತ ಅಬ್ಬರಿಸಿ ಗೆಲುವು ದಾಖಲಿಸಿತ್ತು. ಹೀಗಾಗಿ ಅಹಮ್ಮದಾಬಾದ್‌ನಲ್ಲಿ ಭಾರತ ರೆಡ್ ಪಿಚ್‌ಗೆ ಓಲವು ತೋರಿದೆ ಎನ್ನಲಾಗುತ್ತಿದೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸತತ 2ನೇ ಬಾರಿಗೆ ಫೈನಲ್ ತಲುಪಿದೆ. ಕಠಿಣ ಸೆಮಿಫೈನಲ್ ಹೋರಾಟದಲ್ಲೂ ಅಬ್ಬರಿ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿದೆ. ಇದೀಗ ಹಲವು ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಸತತ 2ನೇ ಬಾರಿ ಹಾಗೂ 3ನೇ ಟಿ20 ಟ್ರೋಫಿ ಕೈವಶ ಮಾಡಲು ಟೀಂ ಇಂಡಿಯಾ ರೆಡಿಯಾಗಿದೆ.

Source link

Leave a Reply

Your email address will not be published. Required fields are marked *