Viral: ಚಿಕನ್ ಲಿವರ್ ಪೀಸ್ ವಿಚಾರಕ್ಕೆ ವಾರ್ಡನ್ ವಿರುದ್ಧ ದೂರು ನೀಡಿದ ಹಾಸ್ಟೆಲ್ ವಿದ್ಯಾರ್ಥಿಗಳು

Viral: ಚಿಕನ್ ಲಿವರ್ ಪೀಸ್ ವಿಚಾರಕ್ಕೆ ವಾರ್ಡನ್ ವಿರುದ್ಧ ದೂರು ನೀಡಿದ ಹಾಸ್ಟೆಲ್ ವಿದ್ಯಾರ್ಥಿಗಳು


ತೆಲಂಗಾಣ, ಫೆಬ್ರವರಿ 06: ಭಾನುವಾರ ಬಂದರೆ ನಾನ್ ವೆಜ್ ಇರಲೇ ಬೇಕು. ಅದರಲ್ಲೂ ಚಿಕನ್ ಇದ್ದು ಬಿಟ್ಟರೆ ಒಂದು ತುತ್ತು ಹೆಚ್ಚೇ ಸೇರುತ್ತದೆ. ಇನ್ನು ಹಾಸ್ಟೆಲ್‌ನಲ್ಲಿರುವ ಮಕ್ಕಳಿಗೂ ಭಾನುವಾರ ಬಂತೆಂದರೆ ಖುಷಿಯೋ ಖುಷಿ. ನಾನ್ ವೆಜ್ ಇಷ್ಟಪಡುವ ಮಕ್ಕಳು ವಾರಾಂತ್ಯಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಚಿಕನ್ ಲಿವರ್ ವಿಚಾರಕ್ಕಾಗಿ ಈ ಹಾಸ್ಟೆಲ್ ಸುದ್ದಿಯಾಗಿದೆ. ಹೌದು , ಹಾಸ್ಟೆಲ್ ನ ವಿದ್ಯಾರ್ಥಿಗಳು ಚಿಕನ್ ಲಿವರ್ ಪೀಸ್ ಹಾಕಲಿಲ್ಲ ಎಂದು ವಾರ್ಡನ್ ಹಾಗೂ ಅಡುಗೆಯವರ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ವಿಚಿತ್ರವೂ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆ (ತೆಲಂಗಾಣದ ಮಹಬೂಬಾಬಾದ್ ಜಿಲ್ಲೆವಾರಂಗಲ್ ಇನುಗುರ್ತಿಎಸ್‌ಸಿ ಬಾಲಕರ ಹಾಸ್ಟೆಲ್‌ನಲ್ಲಿ (ವಾರಂಗಲ್ ಇಂಗುರ್ತಿ ಹಾಸ್ಟೆಲ್) ನಡೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಏನಿದು ಘಟನೆ?

ಇನುಗುರ್ತಿ ಎಸ್‌ಸಿ ಬಾಲಕರ ಹಾಸ್ಟೆಲ್‌ನಲ್ಲಿ 60 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ದೈನಂದಿನ ಮೆನು ಪ್ರಕಾರ, ಭಾನುವಾರ ನಾನ್ ವೆಜ್ ಊಟವನ್ನು ಹೊಂದಿದೆ. ಹೀಗಾಗಿ ವಿದ್ಯಾರ್ಥಿಗಳು ಈ ಬಗ್ಗೆ ವಾರ್ಡನ್ ಅವರನ್ನು ಕೇಳಿದಾಗ ಎರಡು ಕಿಲೋ ಚಿಕನ್ ಲಿವರ್ ಖರೀದಿಸಿಕೊಂಡು ಬರಲು ಹೇಳಿದ್ದಾರೆ.

ಇದನ್ನೂ ಓದಿ: ಆಹಾರ ಡೆಲಿವರಿ ಏಜೆಂಟ್‌ಗೆ ಸ್ಮಶಾನದಿಂದ ಬಂದ ಕರೆ

ಚಿಕನ್ ಲಿವರ್ ಖರೀದಿಸಿ ತಂದು ಅಡುಗೆಯವರಿಗೆ ನೀಡಿದ್ದು, ಆದರೆ ಊಟಕ್ಕೆ ಒಂದೇ ಒಂದು ಚಿಕನ್ ಲಿವರ್ ಪೀಸ್ ಹಾಕಿಲ್ಲ. ಈ ಹಾಸ್ಟೆಲ್ ವಿದ್ಯಾರ್ಥಿಗಳು ಎಂಪಿಡಿಯೋ ಬಂಡಾರು ಪಾರ್ಥಸಾರಥಿ ಅವರಿಗೆ ದೂರು ನೀಡಿದ್ದು, ಹಾಸ್ಟೆಲ್ ವಾರ್ಡನ್ ಹಾಗೂ ಅಡುಗೆಯವರು ನಮಗೆ ತಂದ ಚಿಕನ್ ಲಿವರ್ ತಿಂದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಊಟದ ಮೆನು ಜಾರಿಗೆ ಬರುವಂತೆ ಮನವಿ ಮಾಡಲಾಗಿದೆ. ಇಲಾಖೆ ಅಧಿಕಾರಿಗಳು ಈ ಬಗ್ಗೆ ವಿಚಾರಣೆಯ ಶಿಕ್ಷಣ ವರದಿಯಲ್ಲಿ ತಿಳಿಸಲಾಗಿದೆ. ವಿದ್ಯಾರ್ಥಿಗಳು ನೀಡಿದ ದೂರಿನ ಬಗ್ಗೆ ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *