ತೆಲಂಗಾಣದ ರಾಜಭವನವನ್ನು ಲೋಕ ಭವನ ಎಂದು ಮರುನಾಮಕರಣ

ತೆಲಂಗಾಣದ ರಾಜಭವನವನ್ನು ಲೋಕ ಭವನ ಎಂದು ಮರುನಾಮಕರಣ


ಹೈದರಾಬಾದ್, ಡಿಸೆಂಬರ್ 2: ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈಗ ತಮ್ಮ ರಾಜ್ಯಪಾಲರ ಅಥವಾ ಲೆಫ್ಟಿನೆಂಟ್ ಗವರ್ನರ್‌ಗಳ ನಿವಾಸಗಳನ್ನು ರಾಜಭವನ ಅಥವಾ ರಾಜ ನಿವಾಸದಿಂದ ಲೋಕಭವನ ಲೋಕ ನಿವಾಸ ಎಂದು ಮರುನಾಮಕರಣ ಮಾಡಿವೆ. ತೆಲಂಗಾಣದ ರಾಜಭವನವನ್ನು ಲೋಕ ಭವನ ಎಂದು ಬದಲಾಯಿಸಲಾಗಿದೆ. ರಾಜ್ ನಿವಾಸವನ್ನು ಲೋಕ ನಿವಾಸ ಎಂದು ಮರುನಾಮಕರಣ ಮಾಡಲಾಗಿದೆ.

ನವೆಂಬರ್ 25 ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ನಿರ್ದೇಶನಗಳ ಪ್ರಕಾರ, 8 ರಾಜ್ಯಗಳಿಗೆ ಈ ಹೆಸರುಗಳನ್ನು ಬದಲಾಯಿಸಲಾಗಿದೆ. ರಾಜಪ್ರಭುತ್ವವನ್ನು ಸೂಚಿಸುವ ‘ರಾಜ್’ ಎಂಬ ಪದವನ್ನು ಕೈಬಿಡಲಾಗಿದೆ. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಉತ್ತರಾಖಂಡ, ತ್ರಿಪುರ, ಗುಜರಾತ್ ಮತ್ತು ಒಡಿಶಾ ಈ ಬದಲಾವಣೆಗಳನ್ನು ಜಾರಿಗೆ ತಂದಿವೆ. ರಾಜಭವನ ಮತ್ತು ರಾಜ್ ನಿವಾಸಗಳ ಮರುನಾಮಕರಣದ ಬಗ್ಗೆ ತೆಲಂಗಾಣ ರಾಜ್ಯಪಾಲರ ಕಚೇರಿ ಇಂದು ಸಂಜೆ ಅಧಿಕೃತ ಘೋಷಣೆ ಮಾಡಿದೆ.

ಇದನ್ನೂ ಓದಿ: ವೇದಮೂರ್ತಿ ದೇವವ್ರತ್ ಮಹೇಶ್: ಅಸಾಮಾನ್ಯ ಸಾಧನೆಗೈದ 19 ವರ್ಷದ ಯುವಕನನ್ನು ಹಾಡಿಹೊಗಳಿದ ಪ್ರಧಾನಿ ಮೋದಿ; ಈತನ ಟ್ಯಾಲೆಂಟ್ ಗೆ ನೀವು ಶಾಕ್ ಆಗ್ತೀರಾ!

ವಿಕಸಿತ ಭಾರತದತ್ತ ನಾವು ವಿಶ್ವಾಸದಿಂದ ಸಾಗುತ್ತಿರುವಾಗ ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳ ಶಕ್ತಿ ಮತ್ತು ಚೈತನ್ಯವನ್ನು ಪುನರುಚ್ಚರಿಸಲು ಈ ಮರುನಾಮಕರಣ ಮಾಡಲಾಗಿದೆ. ವಸಾಹತುಶಾಹಿ ಯುಗಕ್ಕೆ ಸಂಬಂಧಿಸಿದ ನಾಮಕರಣವನ್ನು ತೆಗೆದುಹಾಕಲು ಗೃಹ ಸಚಿವಾಲಯದ ನಿರ್ದೇಶನವನ್ನು ಅನುಸರಿಸಿ ಹೆಸರಿನ ಬದಲಾವಣೆಯನ್ನು ಮಾಡಲಾಗಿದೆ.

ಇದನ್ನೂ ಓದಿ: ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ ಹಿನ್ನೆಲೆ ದೆಹಲಿಯಲ್ಲಿ ಕಟ್ಟೆಚ್ಚರ

ಎಲ್ಲಾ ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಪಾಲರ ಕಾರ್ಯದರ್ಶಿಗಳನ್ನು ಉದ್ದೇಶಿಸಿ ಹೊರಡಿಸಿದ ನಿರ್ದೇಶನದಲ್ಲಿ “ರಾಜ್ ಭವನ ಪದವು ವಸಾಹತುಶಾಹಿಯನ್ನು ನೆನಪಿಸುತ್ತದೆ. ಆದ್ದರಿಂದ 2024 ರ ರಾಜ್ಯಪಾಲರ ಸಮ್ಮೇಳನದಲ್ಲಿ ‘ರಾಜ ಭವನ’ ಎಂಬ ‘ಲೋಕಭವನ’ ಎಂದು ಮರುನಾಮಕರಣ ಮಾಡಲು ಸೂಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *