ಹೈದರಾಬಾದ್, ನವೆಂಬರ್ 04: ತೆಲಂಗಾಣ ಬಸ್ ಅಪಘಾತ(ತೆಲಂಗಾಣ ಬಸ್ ಅಪಘಾತ)ದಲ್ಲಿ ಮೂವರು ಹೆಣ್ಣುಮಕ್ಕಳನ್ನು ಕಳೆದುಕೊಂಡೆ ಪೋಷಕರಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ. ಮೂವರು ಹೆಣ್ಣುಮಕ್ಕಳು ಮಸಣ ಸೇರಿದ್ದಾರೆ. ಪೋಷಕರು ಆಕ್ರಂದ ಮುಗಿಲುಮುಟ್ಟಿದೆ. ಹೈದರಾಬಾದ್-ಬಿಜಾಪುರ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ದುರಂತದಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ಅದರಲ್ಲಿ ಯಲ್ಲಯ್ಯ ಗೌಡ ಎಂಬುವವರ ಮೂವರು ಹೆಣ್ಣುಮಕ್ಕಳು ಕೂಡ ಆಗಿದ್ದಾರೆ. ತನುಷಾ, ಸಾಯಿ ಪ್ರಿಯಾ ಮತ್ತು ನಂದಿನಿ ಎಲ್ಲಾ ಕಾಲೇಜು ವಿದ್ಯಾರ್ಥಿಗಳು.
ಇತ್ತೀಚೆಗೆ ಕುಟುಂಬವು ತಮ್ಮ ಹಿರಿಯ ಮಗಳು ಅನುಷಾಳ ಮದುವೆಯನ್ನು ಆಚರಿಸಿತ್ತು. ವಾರಾಂತ್ಯದಲ್ಲಿ, ಹೈದರಾಬಾದ್ನಲ್ಲಿ ಓದುತ್ತಿದ್ದ ಹುಡುಗಿಯರು ತಂದೂರಿನಲ್ಲಿ ಮತ್ತೊಂದು ಮದುವೆಗೆಂದು ಬಂದಿದ್ದರು.
ನಾನು ಬರಬೇಡಿ ಎಂದು ಹೇಳಿದ್ದೆ ಆದರೆ ಅವರ ತಾಯಿಯ ಒತ್ತಾಯಕ್ಕೆ ಅವರು ಬಂದಿದ್ದರು. ಭಾನುವಾರ ಹೋಗಬೇಡಿ ಸೋಮವಾರ ಬೆಳಗಿನ ಜಾವ ಬೇಗ ಹೊರಟುಬಿಡಿ ಎಂದು ಎಷ್ಟು ಕೇಳಿದರು ಉಳಿಯಲು ಮಕ್ಕಳು ಸಿದ್ಧರಿರಲಿಲ್ಲ.
ಮತ್ತಷ್ಟು ಓದಿ: ತೆಲಂಗಾಣ ರಸ್ತೆ ಅಪಘಾತ: ತೆಲಂಗಾಣ: ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 20 ಮಂದಿ ಸಾವು
ರೈಲು ಸಿಕ್ಕಿಲ್ಲವೆಂದು ಬಸ್ಸಿಗೆ ಬಿಡಲು ಯಾವಾಗ ಎಲ್ಯಾರೋ ಬಸ್ ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದರು ಆದರೆ ಅದನ್ನೂ ನಾನು ಕಿವಿಗೆ ಹಾಕಿಕೊಂಡಿರಲಿಲ್ಲ. ಜಲ್ಲಿ ತುಂಬಿದ ಟ್ರಕ್ ಹಾಗೂ ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿ 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಟ್ರಕ್ ಬಸ್ ಮೇಲೆ ಮಗುಚಿ ಬಿದ್ದಿತ್ತು.
ಇದರಲ್ಲಿ 33 ವರ್ಷ ಸಾಲಿಹಾ ಬೇಗಂ ಕುಟುಂಬ ಕತೆ ಕೂಡ ಇದೆ. ಸಾಲಿಹಾ ತನ್ನ ಮೂರು ತಿಂಗಳ ಮಗುವಿನೊಂದಿಗೆ ತನ್ನ ಅಜ್ಜಿಯನ್ನು ಭೇಟಿಯಾಗಲು ಹೈದರಾಬಾದ್ಗೆ ಪ್ರಯಾಣಿಸುತ್ತಿದ್ದರು. ಜಲ್ಲಿ ರಾಶಿಯೊಳಗೆ ಇಬ್ಬರ ದೇಹವೂ ಇದೆ. ತಾಯಿ ಗೆ ಅಪ್ಪಿಕೊಂಡೇ ಹೆಚ್ಚಿನ.
ಮತ್ತೊಬ್ಬರು ಎನ್ ಹನುಮಂತು, ಅವರು ಹೈದರಾಬಾದ್ಗೆ ಹೋಗುವ ರೈಲು ತಪ್ಪಿ ಬಸ್ ಹತ್ತಿದ್ದರು. ಅವರು 10 ವರ್ಷ ಮಗನನ್ನು ಅಗಲಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 8:05 am, ಮಂಗಳವಾರ, 4 ನವೆಂಬರ್ 25