ನಿಮ್ಮ ಪ್ರತಿಭೆ ನನಗೆ ಬೇಕಿಲ್ಲ ಎಂದಿದ್ದರು ಉಪ್ಪಿ: ತೆಲುಗು ಹಿರಿಯ ನಟ

ನಿಮ್ಮ ಪ್ರತಿಭೆ ನನಗೆ ಬೇಕಿಲ್ಲ ಎಂದಿದ್ದರು ಉಪ್ಪಿ: ತೆಲುಗು ಹಿರಿಯ ನಟ


ಉಪೇಂದ್ರ (ಉಪೇಂದ್ರ) ಅವರಿಗೆ ಕನ್ನಡದಲ್ಲಿ ಇರುವಂತೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. 90 ರ ಸದ್ಯದಲ್ಲೇ ತೆಲುಗು ಚಿತ್ರರಂಗದಲ್ಲಿ ಉಪೇಂದ್ರ ಕೆಲಸ ಮಾಡಿದ್ದರು. ಕೆಲ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು ಮಾತ್ರವೇ ಅಲ್ಲದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಸಹ. ಚಿರಂಜೀವಿ ಅವರಿಗೆ ತೆಲುಗು ಚಿತ್ರರಂಗದಲ್ಲಿ ಒಂದು ಕಲ್ಟ್ ಫಾಲೋವಿಂಗ್ ಇದೆ. ಅಲ್ಲಿನ ಚಿತ್ರಕರ್ಮಿಗಳೊಟ್ಟಿಗೆ ಆಪ್ತ ಬಂಧವೂ ಸಹ ಉಪೇಂದ್ರ ಅವರಿಗೆ ಇದೆ. ಇತ್ತೀಚೆಗೆ ಸಹ ಉಪೇಂದ್ರ ಅವರು ತೆಲುಗಿನ ‘ಆಂಧ್ರ ಕಿಂಗ್’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದೀಗ ತೆಲುಗು ಚಿತ್ರರಂಗದ ಹಿರಿಯ ಮತ್ತು ಬಲು ಜನಪ್ರಿಯ ಪೋಷಕ ನಟ ಉಪೇಂದ್ರ ಅವರೊಟ್ಟಿಗಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಉಪೇಂದ್ರ ಅವರು ‘ನಿಮ್ಮ ಪ್ರತಿಭೆ ನನಗೆ ಬೇಕಿಲ್ಲ’ ಎಂದು ನನಗೆ ಹೇಳಿದ್ದರು ಎಂದು ಹಿರಿಯ ಪೋಷಕ ನಟ ಹೇಳಿದ್ದು, ಸನ್ನಿವೇಶವನ್ನು ಸಹ ವಿವರಿಸಿದ್ದಾರೆ.

1995 ರಲ್ಲಿ ಉಪೇಂದ್ರ ನಿರ್ದೇಶಿಸಿ, ಶಿವಣ್ಣ ನಟಿಸಿದ್ದ ‘ಓಂ’ ಸಿನಿಮಾ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆಯ್ತು. ತೆಲುಗು, ತಮಿಳಿನಲ್ಲಿ ಹೆಸರು ಮಾಡಿದ್ದ ಕೆವಿ ಸತ್ಯನಾರಾಯಣ್ ಅವರು ಕನ್ನಡದ ‘ಓಂ’ ಸಿನಿಮಾ ನೋಡಿ ಇಷ್ಟಪಟ್ಟು ಅದನ್ನು ತೆಲುಗಿನಲ್ಲಿ ರಿಮೇಕ್ ಮಾಡಲು ಮುಂದಾದರು. ಸಿನಿಮಾಕ್ಕೆ ರಾಜಶೇಖರ್ ನಾಯಕ, ಉಪೇಂದ್ರ ಅವರಿಂದಲೇ ಸಿನಿಮಾದ ನಿರ್ದೇಶನ ಮಾಡಿದ್ದರು. ಸಿನಿಮಾಕ್ಕೆ ‘ಓಂಕಾರಂ’ ಎಂದು ಹೆಸರಿಡಲಾಗಿದೆ. ಅದು ಉಪೇಂದ್ರ ಕೆಲಸ ಮಾಡಿದ ಮೊದಲ ತೆಲುಗು ಸಿನಿಮಾ.

ತೆಲುಗಿನ ಹಿರಿಯ ಪೋಷಕ ನಟ ಎಲ್ಬಿ ಶ್ರೀರಾಮ್ ಅವರು ಆ ಸಿನಿಮಾಕ್ಕೆ ಸಂಭಾಷಣೆ, ಚಿತ್ರಕತೆ ಬರೆದಿದ್ದರು. ಅದೇ ಎಲ್ಬಿ ಶ್ರೀರಾಮ್ ಅವರು ಇತ್ತೀಚೆಗೆ ಸಂದರ್ಶನ ‘ಓಂಕಾರಂ’ ಸಿನಿಮಾದ ಅನುಭವಗಳನ್ನು ಹೇಳಿದ್ದಾರೆ. ‘ಅದಾಗಲೇ ನಾನು ಭಿನ್ನ ಸಂಭಾಷಣೆಕಾರ, ಚಿತ್ರಕತೆಗಾರ ಎಂಬ ಹೆಸರು ಇತ್ತು. ಸೂಪರ್ ಹಿಟ್ ಸಿನಿಮಾಗಳಾದ ‘ಹಿಟ್ಲರ್’, ‘ಹಲೋ ಬ್ರದರ್’ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದೆ. ಇಲ್ಲ ಕೆವಿ ಸತ್ಯನಾರಾಯಣ್ ಅವರು ನನ್ನನ್ನು ಸಂಭಾಷಣೆಕಾರನನ್ನಾಗಿ ಕರೆಸಿದ್ದರು’

ಇದನ್ನೂ ಓದಿ:ಉಪೇಂದ್ರ ತೆಲುಗು ಸಿನಿಮಾ ‘ಆಂಧ್ರ ಕಿಂಗ್’ ಗಳಿಸಿದ್ದೆಷ್ಟು? ಹಿಟ್ ಅಥವಾ ಫ್ಲಾಪ್?

‘ನನ್ನನ್ನು ಒಮ್ಮೆ ಉಪೇಂದ್ರ ಕರೆದರು. ಕರೆದು ಸಂಭಾಷಣೆ ಎಷ್ಟಿದೆ ಎಂದು ಕೇಳಿದರು. ಅದಕ್ಕೆ ನಾನು, ಇಲ್ಲ, ಭಿನ್ನವಾಗಿ ಬರೆಯೋಣ ಎಂದುಕೊಂಡರೆ ಹೆಚ್ಚು ಸಮಯ ಹಿಡಿಯುತ್ತಿದೆ. ಮೂರು ದಿನಗಳಾದರೂ ಕೇವಲ ನಾಲ್ಕು ಸೀನ್‌ಗೆ ಮಾತ್ರವೇ ಸಂಭಾಷಣೆ ಬರೆದಿದ್ದೇನೆ ಎಂದು ಹೇಳಿದ್ದಾರೆ’ ಎಂದು ನೆನಪು ಮಾಡಿಕೊಂಡಿದ್ದಾರೆ ಶ್ರೀರಾಮ್.

‘ಅದಕ್ಕೆ ಉಪೇಂದ್ರ, ಶ್ರೀರಾಮ್ ಅವರೇ ನೀವು ಚೆನ್ನಾಗಿ ಬರೆಯುತ್ತೀರಿ, ಭಿನ್ನವಾಗಿ ಬರೆಯುತ್ತೀರಿ ಎಂದು ಕೇಳುತ್ತೇನೆ ಆದರೆ ನನಗೆ ಇಲ್ಲಿ ಅದರ ಅವಶ್ಯಕತೆ ಇಲ್ಲ. ನಿಮ್ಮ ಪ್ರತಿಭೆ ನನಗೆ ಬೇಕಿಲ್ಲ. ನಾನು ಈ ಸಿನಿಮಾ ಕನ್ನಡದಲ್ಲಿ ಮಾಡಿದ್ದೇನೆ, ನನ್ನ ಕತೆಗೆ ಸಂಭಾಷಣೆ ಹೇಗಿರಬೇಕು ಎಂಬ ಐಡಿಯಾ ನನಗೆ ಇದೆ. ಆದರೆ ನನಗೆ ತೆಲುಗು ಬಾರದು ಎಂಬ ಕಾರಣಕ್ಕೆ ಮಾತ್ರ ನೀವು ಬಂದಿದ್ದೀರಿ. ಇಲ್ಲಿ ನಿಮ್ಮ ಪ್ರತಿಭೆಯನ್ನು ಬಳಸಬೇಡಿ, ಕನ್ನಡದಲ್ಲಿ ನಾನು ಏನು ಮಾಡಿದ್ದೆನೋ ಅದನ್ನೇ ತೆಲುಗಿನಲ್ಲಿ ಕೊಡಿ ಸಾಕು’ ಎಂದು ಶ್ರೀರಾಮ್ ನೆನಪಿಸಿಕೊಂಡಿದ್ದಾರೆ.

‘ಅದೇ ದಿನ ನಾವು ಕಚೇರಿಯಲ್ಲಿ ಕೂತೆವು, ಉಪೇಂದ್ರ, ‘ಓಂ’ ಸಿನಿಮಾದ ಸಂಭಾಷಣೆಗಳನ್ನು ಇಂಗ್ಲೀಷ್ ನಲ್ಲಿ ಹೇಳಿದರು. ಅದನ್ನು ನಾನು ತೆಲುಗಿನಲ್ಲಿ ಬರೆದೆ. ಅವರು ಸ್ಪಷ್ಟವಾಗಿ ಹೇಳಿದ್ದರು, ಯಾವುದೇ ಕಾರಣಕ್ಕೂ ಸ್ವಂತಕ್ಕೆ ಬಳಸಬಾರದು, ನಿಮ್ಮ ಸ್ವಂತ ಸಂಭಾಷಣೆ ಬಳಸಿದರೆ ತೆಲುಗು ಬಾರದ ನನಗೆ ಅದು ಗೊಂದಲ ಮೂಡಿಸುತ್ತದೆ’ ಎಂದು ಅವರು ಹೇಳಿದರು. ನಾನು ತೆಲುಗಿನಲ್ಲಿ ಬರೆದೆ, ಮೂರೇ ದಿನಕ್ಕೆ ಇಡೀ ಸಿನಿಮಾದ ಸಂಭಾಷಣೆ ಮುಗಿದು ಹೋಯ್ತು’ ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *