Headlines

Shivarajkumar: ಗುಮ್ಮಡಿ ನರಸಯ್ಯ ಬಯೋಪಿಕ್‌ನಲ್ಲಿ ಶಿವಣ್ಣ: ಮೊದಲು ವಿರೋಧಿಸಿದ್ದ ನಾಯಕನೇ ಈಗ ಏನ್ ಹೇಳಿದ್ರು? | Telugu Biopic Shivarajkumar Gummadi Narsaiah Movie Controversy Gvd

Shivarajkumar: ಗುಮ್ಮಡಿ ನರಸಯ್ಯ ಬಯೋಪಿಕ್‌ನಲ್ಲಿ ಶಿವಣ್ಣ: ಮೊದಲು ವಿರೋಧಿಸಿದ್ದ ನಾಯಕನೇ ಈಗ ಏನ್ ಹೇಳಿದ್ರು? | Telugu Biopic Shivarajkumar Gummadi Narsaiah Movie Controversy Gvd


15

ಗುಮ್ಮಡಿ ನರಸಯ್ಯ

Image Credit : Social Media

ಗುಮ್ಮಡಿ ನರಸಯ್ಯ

ಆಂಧ್ರದ ಕಮ್ಯೂನಿಸ್ಟ್‌ ಲೀಡರ್‌, ಶಾಸಕರಾಗಿದ್ದ ಗುಮ್ಮಡಿ ನರಸಯ್ಯ ಅವರ ಜೀವನ ಆಧರಿಸಿದ ‘ಗುಮ್ಮಡಿ ನರಸಯ್ಯ’ ಎಂಬ ತೆಲುಗು ಚಿತ್ರದ ನಾಯಕನಾಗಿ ಶಿವರಾಜ್‌ಕುಮಾರ್‌ ನಟಿಸುತ್ತಿದ್ದಾರೆ. ಈ ಸಿನಿಮಾ ಕುರಿತು ಇದೇ ಮೊದಲ ಬಾರಿಗೆ ಗುಮ್ಮಡಿ ನರಸಯ್ಯ ಮಾತನಾಡಿದ್ದಾರೆ. ಮೊದಲು ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾಗಿ ತಿ‍ಳಿಸಿದ್ದಾರೆ.

25

ನನ್ನ ಬಗ್ಗೆ ಮಾಹಿತಿಗಳನ್ನು ಕೇಳಿದರು

Image Credit : Social Media

ನನ್ನ ಬಗ್ಗೆ ಮಾಹಿತಿಗಳನ್ನು ಕೇಳಿದರು

ಮೂರು ವರ್ಷಗಳ ಹಿಂದೆ ಕೆಲವರು ನನ್ನ ಬಗ್ಗೆ ಮಾಹಿತಿಗಳನ್ನು ಕೇಳಿದರು. ಪತ್ರಕರ್ತರು ಇರಬಹುದು ಎಂದುಕೊಂಡು ನನ್ನ ಬಗ್ಗೆ ಎಲ್ಲವನ್ನು ಹೇಳಿದೆ. ಕೆಲವು ತಿಂಗಳುಗಳ ನಂತರ ಮತ್ತೆ ಅವರೇ ಬಂದು ಸಿನಿಮಾ ಮಾಡುತ್ತೇವೆ ಎಂದರು.

35

ವಾಸ್ತವಕ್ಕೆ ತುಂಬಾ ದೂರ ಇತ್ತು

Image Credit : Social Media

ವಾಸ್ತವಕ್ಕೆ ತುಂಬಾ ದೂರ ಇತ್ತು

ಆಗ ನಾನು ಬೇಡ ಎಂದೆ. ಯಾಕೆಂದರೆ ಈ ಹಿಂದೆ ನಿರ್ದೇಶಕ ಹಾಗೂ ನಟ ಆರ್. ನಾರಾಯಣಮೂರ್ತಿ ಅವರ ‘ಎರ್ರಸೈನ್ಯಂ’ ಸಿನಿಮಾ ನಾನು ನೋಡಿದ್ದೆ. ಅದು ಕೂಡ ಕಮ್ಯೂನಿಸ್ಟ್‌ ಹೋರಾಟಗಳ ಹಿನ್ನೆಲೆಯ ಚಿತ್ರವೇ. ಆದರೆ, ಆ ಸಿನಿಮಾ ವಾಸ್ತವಕ್ಕೆ ತುಂಬಾ ದೂರ ಇತ್ತು. ತಪ್ಪಾಗಿ ಸಿನಿಮಾ ಮಾಡಿದ್ದರು.

45

ಚಿತ್ರಕ್ಕೆ ಮೊದಲು ವಿರೋಧ ಮಾಡಿದ್ದೆ

Image Credit : Social Media

ಚಿತ್ರಕ್ಕೆ ಮೊದಲು ವಿರೋಧ ಮಾಡಿದ್ದೆ

ಅದಕ್ಕೆ ಈ ಚಿತ್ರಕ್ಕೆ ವಿರೋಧ ಮಾಡಿದ್ದೆ. ಆ ನಂತರ ಚಿತ್ರತಂಡದವರು ಬಂದು ನಾನು ಹೇಳಿದ ಮಾಹಿತಿಗಳನ್ನೇ ಸಿನಿಮಾ ಮಾಡುತ್ತೇವೆ ಎಂದರು. ಹೀಗಾಗಿ ಒಪ್ಪಿಕೊಂಡೆ. ಈ ಚಿತ್ರದಲ್ಲಿ ನನ್ನ ಪಾತ್ರವನ್ನು ಕನ್ನಡದ ನಟ ಶಿವರಾಜ್‌ಕುಮಾರ್‌ ಮಾಡುತ್ತಿದ್ದಾರೆ ಎಂದು ಚಿತ್ರದ ಪೋಸ್ಟರ್‌ ಬಿಡುಗಡೆ ಆದ ಮೇಲೆ ಗೊತ್ತಾಯಿತು.

55

ಪರಮೇಶ್ವರ ಹಿವ್ರಳೆ ನಿರ್ದೇಶನದಲ್ಲಿ ಗುಮ್ಮಡಿ ನರಸಯ್ಯ

Image Credit : Social Media

ಪರಮೇಶ್ವರ ಹಿವ್ರಳೆ ನಿರ್ದೇಶನದಲ್ಲಿ ಗುಮ್ಮಡಿ ನರಸಯ್ಯ

ಹೇಗೆ ಮಾಡುತ್ತಾರೋ ಗೊತ್ತಿಲ್ಲ. ನೋಡಬೇಕಿದೆ ಎಂದು ಗುಮ್ಮಡಿ ನರಸಯ್ಯ ಮಾಧ್ಯಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತೆಲುಗಿನ ಪರಮೇಶ್ವರ ಹಿವ್ರಳೆ ಎಂಬುವವರ ನಿರ್ದೇಶನದಲ್ಲಿ ‘ಗುಮ್ಮಡಿ ನರಸಯ್ಯ’ ಚಿತ್ರ ಮೂಡಿ ಬರಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *