ಮತ್ತೆ ದಕ್ಷಿಣದ ನಿರ್ದೇಶಕನ ಕೈ ಹಿಡಿದ ಸಲ್ಲು, ಈ ಬಾರಿ ರಾಷ್ಟ್ರಪ್ರಶಸ್ತಿ ವಿಜೇತನ ಜೊತೆ

ಮತ್ತೆ ದಕ್ಷಿಣದ ನಿರ್ದೇಶಕನ ಕೈ ಹಿಡಿದ ಸಲ್ಲು, ಈ ಬಾರಿ ರಾಷ್ಟ್ರಪ್ರಶಸ್ತಿ ವಿಜೇತನ ಜೊತೆ


ಮತ್ತೆ ದಕ್ಷಿಣದ ನಿರ್ದೇಶಕನ ಕೈ ಹಿಡಿದ ಸಲ್ಲು, ಈ ಬಾರಿ ರಾಷ್ಟ್ರಪ್ರಶಸ್ತಿ ವಿಜೇತನ ಜೊತೆ

ಸಲ್ಮಾನ್ ಖಾನ್ (ಸಲ್ಮಾನ್ ಖಾನ್) ಬಾಲಿವುಡ್ ನ ಸೂಪರ್ ಸ್ಟಾರ್. ಆದರೆ ಇತ್ತೀಚೆಗಿನ ಅವರಿಗೆ ದೊಡ್ಡ ಬಾಕ್ಸ್ ಆಫೀಸ್ ಗೆಲುವು ಸಿಕ್ಕೇ ಇಲ್ಲ. ಅತ್ತ ಶಾರುಖ್ ಖಾನ್ ದೊಡ್ಡ ದೊಡ್ಡ ಹಿಟ್ ನೀಡುತ್ತಿದ್ದಾರೆ. ಸಲ್ಲು ಅವರಿಂಗತಲೂ ಕಿರಿಯರಾದ ರಣಬೀರ್ ಕಪೂರ್, ರಣವೀರ್ ಸಿಂಗ್, ವಿಕ್ಕಿ ಕೌಶಲ್ ಅವರು 1000 ಕೋಟಿ ಕಲೆಕ್ಷನ್ ಮಾಡುತ್ತಿದ್ದಾರೆ ಆದರೆ ಸಲ್ಲು ಸಿನಿಮಾಗಳು ಮಾತ್ರ ಫ್ಲಾಪ್ ಆಗುತ್ತಿವೆ. ಇದೀಗ ಸೋಲಿನ ಸುಳಿಯಿಂದ ಹೊರಬರಲು ಸಲ್ಮಾನ್ ಖಾನ್ ಮತ್ತೊಮ್ಮೆ ದಕ್ಷಿಣದ ನಿರ್ದೇಶಕನ ಕೈ ಹಿಡಿದಿದ್ದಾರೆ. ಅದೂ ಕೇವಲ ನಿರ್ದೇಶಕರು ನಿರ್ಮಾಪಕರೂ ದಕ್ಷಿಣದವರೇ ಆಗಿದ್ದಾರೆ.

ಸಲ್ಮಾನ್ ಖಾನ್ ಅವರಿಗಾಗಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ ದಕ್ಷಿಣದ ಖ್ಯಾತ ನಿರ್ಮಾಪಕ ದಿಲ್ ರಾಜು. ತೆಲುಗು ಸಿನಿಮಾ ರಂಗದ ದೊಡ್ಡ ನಿರ್ಮಾಪಕರಲ್ಲಿ ಒಬ್ಬರಾಗಿರುವ ದಿಲ್ ರಾಜು ಇದೀಗ ಮೂರನೇ ಹಿಂದಿ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಈ ಹಿಂದೆ ತೆಲುಗಿನ ರಿಮೇಕ್‌ಗಳಾದ ಹಿಂದಿಯ ‘ಜೆರ್ಸಿ’ ಮತ್ತು ‘ಹಿಟ್’ ಸಿನಿಮಾಗಳನ್ನು ದಿಲ್ ರಾಜು ನಿರ್ಮಿಸಿದ್ದರು. ಇದೀಗ ಮೊದಲ ಬಾರಿಗೆ ಹಿಂದಿಯ ಸೂಪರ್ ಸ್ಟಾರ್ ನಟನೊಟ್ಟಿಗೆ ಕೆಲಸ ಮಾಡಲು ಮುಂದಾಗಿದ್ದಾರೆ.

ಸಲ್ಮಾನ್ ಖಾನ್ ಅವರ ಈ ಸಿನಿಮಾಕ್ಕಾಗಿ ದಿಲ್ ರಾಜು, ತೆಲುಗಿನ ಪ್ರತಿಭಾವಂತ ಜೊತೆಗೆ ಕಮರ್ಷಿಯಲ್ ಸಿನಿಮಾ ನಿರ್ದೇಶಕರೂ ಎನಿಸಿಕೊಂಡಿರುವ ವಂಶಿ ಪೈಡಪಲ್ಲಿ ಅವರ ಜೊತೆಗೆ ಕರೆದೊಯ್ದಿದ್ದಾರೆ. ಈ ಹಿಂದೆ ‘ಮಹರ್ಷಿ’, ಪತಿ ವಿಜಯ್ ನಟನೆಯ ‘ವಾರಿಸು’, ಎನ್ ಟಿಆರ್ ನಟನೆಯ ‘ಬೃಂದಾವನಂ’, ರಾಮ್ ಚರಣ್ ನಟನೆಯ ‘ಯೇವುಡು’ ಸಿನಿಮಾಗಳನ್ನು ನಿರ್ದೇಶಿಸಿರುವ ವಂಶಿ ಪೈಡಪಲ್ಲಿ, ಸ್ಟಾರ್ ನಟರಿಗಾಗಿ ಸಾಮಾಜಿಕ ಸಂದೇಶಗಳು ಅಥವಾ ಕೌಟುಂಬಿಕ ಕಥೆಗಳು ಸಿನಿಮಾ ಮಾಡುವುದರಲ್ಲಿ ನಿಸ್ಸೀಮರು. ವಂಶಿ ನಿರ್ದೇಶನದ ಮಹೇಶ್ ಬಾಬು ನಟನೆಯ ‘ಮಹರ್ಷಿ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿದೆ.

ಇದನ್ನೂ ಓದಿ:ನಾನು ಸ್ಟಾರ್ ಆಗಲು ಸಲ್ಮಾನ್ ಖಾನ್ ತಂದೆ ಕಾರಣ ಎಂದಿದ್ದ ಶಾರುಖ್

ಇದೀಗ ಸಲ್ಮಾನ್ ಖಾನ್ ಅವರಿಗಾಗಿ ಸಾಮಾಜಿಕ ಸಂದೇಶಗಳು ಆಕ್ಷನ್ ಸಿನಿಮಾ ಕಥೆಯನ್ನು ವಂಶಿ ಪೈಡಪಲ್ಲಿ ಹೆಣೆದಿದ್ದು, ಸಿನಿಮಾದ ಚಿತ್ರೀಕರಣ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿದೆ. ಸಲ್ಮಾನ್ ಖಾನ್ ಈ ಹಿಂದೆಯೂ ಸಹ ಹಲವು ದಕ್ಷಿಣದ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದಾರೆ. ಪ್ರಭುದೇವ ನಿರ್ದೇಶನದ ‘ವಾಂಟೆಡ್’, ‘ರಾಧೆ’, ‘ದಬಂಗ್ 3’ ಸಿನಿಮಾಗಳಲ್ಲಿ ಸಲ್ಲು ನಟಿಸಿದ್ದರು. ಮುರುಗದಾಸ್ ನಿರ್ದೇಶನದ ‘ಶಿಖಂಧರ್’ ಸಿನಿಮಾದಲ್ಲಿ ನಟಿಸಿದರು, ಅದು ಧಾರುಣವಾಗಿ ಫ್ಲಾಪ್ ಆಯ್ತು. ಮಲಯಾಳಂ ನಿರ್ದೇಶಕ ಸಿದ್ಧಿಕ್ ಅವರೊಟ್ಟಿಗೆ ‘ಬಾಡಿಗಾರ್ಡ್’ ಸಿನಿಮಾದಲ್ಲಿ ನಟಿಸಿದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗುತ್ತಿದೆ. ಇದೀಗ ಮತ್ತೊಮ್ಮೆ ದಕ್ಷಿಣದ ನಿರ್ದೇಶಕನ ಜೊತೆಗೆ ಕೆಲಸ ಮಾಡಲಿದ್ದಾರೆ.

ಸಲ್ಮಾನ್ ಖಾನ್ ಇದೀಗ ‘ಬ್ಯಾಟಲ್ ಆಫ್ ಗಲ್ವಾನ್’ ಸಿನಿಮಾ ಮುಗಿಸಿದ್ದಾರೆ. ಗಲ್ವಾನ್‌ನಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಗಲಾಟೆಯ ಕಥೆಯ ಸಿನಿಮಾ ಇದಾಗಿದೆ. ಇದಾದ ಬಳಿಕ ರಾಜ್ ಮತ್ತು ಡಿಕೆ ನಿರ್ಮಿಸಿ, ನಿರ್ದೇಶಿಸುತ್ತಿರುವ ಕಾಮಿಡಿ-ಆಕ್ಷನ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದೇ ಸಿನಿಮಾದ ಜೊತೆಗೆ ವೈಂಶಿ ಪೈಡಪಲ್ಲಿಯ ಸಿನಿಮಾ ಸಹ ಚಿತ್ರಗೊಳ್ಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *