
ಚೆನ್ನೈ, ಏಪ್ರಿಲ್ 12: ತಮಿಳುನಾಡಿನ ಅಂಬರೂರಿನ ಕುಡಪ್ಪನಮೂಡಿನಲ್ಲಿರುವ ಕುಳುವಲ್ವತ್ತಂ ಶ್ರೀ ಭಗತಿ ದೇವಸ್ಥಾನ(ದೇವಾಲಯ) ಶನಿವಾರ ಬೆಳಗ್ಗೆ ಒಂದು ವಿಚಿತ್ರ ದೃಶ್ಯ ಕಂಡುಬಂದಿದೆ. ದೇವಸ್ಥಾನದ ಕಚೇರಿಗೆ ಕನ್ನ ಹಾಕಿ ಹಣ ಕದ್ದ ಕಳ್ಳನೊಬ್ಬ, ಅಲ್ಲಿಂದ ಪರಾರಿಯಾಗುವ ಬದಲು ಸುಸ್ತಾಗಿ ಅಲ್ಲೇ ರಾತ್ರಿ ನಿದ್ರೆಗೆ ಜಾರಿದೆ. ದಿನದಂತೆ ಶನಿವಾರ ಬೆಳಗ್ಗೆ 5.30ಕ್ಕೆ ದೇವಸ್ಥಾನ ಸಮಿತಿ ಸದಸ್ಯರು ಕಚೇರಿಗೆ ಬಂದಾಗ, ಬಾಗಿಲು ಮುರಿದಿರುವುದನ್ನು ಕಂಡು ಆತಂಕಕ್ಕೊಳಗಾದರು. ಯಾವುದೋ ದೊಡ್ಡ ಕಳ್ಳತನವಾಗಿದೆ ಎಂದು ಒಳಗೆ ಹೋಗಿ ನೋಡಿದವರಿಗೆ ಆಶ್ಚರ್ಯ ಕಾದಿತ್ತು. ಕಚೇರಿಯ ಹಣದ ಪೆಟ್ಟಿಗೆಯಿಂದ ನಗದು ಮಾಯವಾಗಿತ್ತು, ಆದರೆ ಕಳ್ಳ ಮಾತ್ರ ಪಕ್ಕದಲ್ಲೇ ಅತ್ಯಂತ ಆರಾಮವಾಗಿ ಘೋರ ಹೊಡೆದು ಮಲಗಿದ್ದ.
ಪೊಲೀಸರು ತನಿಖೆಯ ಪ್ರಕಾರ, ಬಂಧಿತ ಆರೋಪಿಯನ್ನು ತಮಿಳುನಾಡು ಮೂಲದ ಸೆಂಥಿಲ್ (40) ಎಂದು ಗುರುತಿಸಲಾಗಿದೆ. ಈತ ಕಳ್ಳನಾಗಿದ್ದರೆ, ಹಲವಾರು ಕಳ್ಳತನ ಪ್ರಕರಣಗಳಲ್ಲಿ ಕಂಡುಬಂದಿದ್ದಾನೆ ಎಂದು ಸೂಚಿಸಲಾಗಿದೆ.
ಘಟನೆ ನಡೆದಿದ್ದು ಹೇಗೆ?
ಶುಕ್ರವಾರ ತಡರಾತ್ರಿ ದೇವಸ್ಥಾನದ ಕಚೇರಿಯ ಬಾಗಿಲು ಒಡೆದು ಒಳನುಗ್ಗಿದ ಸೆಂಥಿಲ್, ಅಲ್ಲಿದ್ದ 8,500 ರೂಪಾಯಿ ನಗದನ್ನು ಕದ್ದಿದ್ದಾನೆ. ಕಳ್ಳತನದ ನಂತರ ಅಲ್ಲಿಂದ ಓಡಿಹೋಗುವ ಬದಲು, ಹಗಲಿಡೀ ಅಲೆದಾಡಿ ಸುಸ್ತಾಗಿದ್ದ ಸೆಂಥಿಲ್‌ಗೆ ಆ ತಂಪಾದ ಕಚೇರಿಯೊಳಗೆ ಕಣ್ಣು ಮುಚ್ಚಿದ ತಕ್ಷಣ ನಿದ್ರೆ ಹತ್ತಿದೆ.
ಮತ್ತಷ್ಟು ಓದಿ: ಈ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್, ಪಿಜ್ಜಾ ಕೊಡ್ತಾರೆ!
ಬೆಳಗ್ಗೆ ದೇವಸ್ಥಾನದ ಸಿಬ್ಬಂದಿ ಬರುವವರೆಗೂ ಈತ ತಾನು ಕದ್ದ ಹಣದ ಮೇಲೆ ಕೈಯಿಟ್ಟುಕೊಂಡು ನಿದ್ರೆಯಲ್ಲೇ ಇದ್ದ. ದೇವಸ್ಥಾನದ ಸಿಬ್ಬಂದಿ ತಕ್ಷಣ ವೆಲ್ಲರಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ನನ್ನನ್ನು ನಿದ್ರೆಯಲ್ಲಿದ್ದ ಸೆಂಥಿಲ್ ಎಬ್ಬಿಸಿ ಕೈಕೋಳ ತೊಡಿಸಿದ್ದಾರೆ. ಕದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
“ಮಾಡಿದ್ದುಣ್ಣೋ ಮಹಾರಾಯ” ಎಂಬಂತೆ, ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಸೆಂಥಿಲ್ ತಾನು ಎಸ್ಕೇಪ್ ಆಗುವ ಪ್ಲಾನ್ ಮರೆತು ನಿದ್ರೆಗೆ ಜಾರಿದ್ದು ಈಗ ಅಂಬೂರಿನಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಪೊಲೀಸರ ಪಾಲಿಗೆ ಇದು ಅತ್ಯಂತ ಸುಲಭವಾದ ಇನ್ವೆಸ್ಟಿಗೇಷನ್ ಎನಿಸಿಕೊಂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ