ಜನವರಿ 15: ಟೆಸ್ಲಾ ಕಂಪನಿ (Tesla Inc) ಬೆಂಗಳೂರಿನಲ್ಲಿ ತನ್ನ ಶೋರೂಂ ತೆರೆಯುತ್ತಿದೆ. ಇದೇ ವೇಳೆ, ಟೆಸ್ಲಾಡ್ ಮಾಡಲ್ ವೈ ಎಟಿಕ್ಲಿಕ್ ಕಾರುಗಳ ಟೆಸ್ಟ್ ಡ್ರೈವ್ ಅವಕಾಶ ಕೊಡಲಾಗಿದೆ. ಹೊಸ ಮತ್ತು ಹಳೆಯ ಕಾರುಗಳ ಮಾರಾಟ ವೇದಿಕೆಯಾದ ಏಕೋ ಡ್ರೈವ್ನಿಂದ (ACKO ಡ್ರೈವ್) ಬೆಂಗಳೂರಿನಲ್ಲಿ ಟೆಸ್ಲಾ ಕಾರುಗಳ ಟೆಸ್ಟ್ ಡ್ರೈವ್ ಅಭಿಯಾನ ನಡೆಯಿತು. ಇವತ್ತಿನಿಂದಲೇ ಇದು ಶುರುವಾಗಿದ್ದು ಜನವರಿ 31ರವರೆಗೂ ಇರುತ್ತದೆ.
ಟೆಸ್ಲಾ ಕಂಪನಿ ಬೆಂಗಳೂರಿನಲ್ಲಿ ಶೋರೂಮ್ ತೆರೆಯುವುದಾಗಿ ಹೇಳಿದೆ. ಇನ್ನೂ ಅದು ಪ್ರಾರಂಭವಾಗಿಲ್ಲ. ಬೆಂಗಳೂರಿನ ಯಾವ ಸ್ಥಳದಲ್ಲಿ ಶೂರೂಮ್ ಇರುತ್ತದೆ ಎಂಬ ಮಾಹಿತಿ ಇಲ್ಲ. ಆದರೆ, ಶೂಮ್ ಆರಂಭಕ್ಕೆ ಮುನ್ನ ಆಕೋ ಡ್ರೈವ್ ಮೂಲಕ ಟೆಸ್ಲಾ ಕಾರುಗಳ ಪ್ರತ್ಯಕ್ಷ ಅನುಭವವನ್ನು ಸಂಭಾವ್ಯ ಗ್ರಾಹಕರು ಒದಗಿಸುವ ಪ್ರಯತ್ನ ನಡೆದಿದೆ.
ಟೆಸ್ಲಾ ಕಂಪನಿ ಭಾರತದಲ್ಲಿ ಮೂರು ಕಡೆ ಶೋರೂಮ್ ಹೊಂದಿದೆ. ದೆಹಲಿ, ಮುಂಬೈ ಮತ್ತು ಗುರುಗ್ರಾಮದಲ್ಲಿ ಶೋರೂಮ್ ಇದೆ. ಬೆಂಗಳೂರಿನಲ್ಲಿ ಆರಂಭವಾದರೆ ಅದರ ನಾಲ್ಕನೇ ಶೋರೂಮ್ ಆಗುತ್ತದೆ. ಅತಿಹೆಚ್ಚು ಕಾರುಗಳನ್ನು ಹೊಂದಿರುವ ಭಾರತೀಯ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಹೀಗಾಗಿ, ಟೆಸ್ಲಾ ಬೆಂಗಳೂರಿನ ಮಾರುಕಟ್ಟೆ ಮೇಲೆ ಕಣ್ಣಿಟ್ಟಿದೆ.
ಇದನ್ನೂ ಓದಿ: ಪಾಕಿಸ್ತಾನ, ಬಾಂಗ್ಲಾ ಸೇರಿ 75 ದೇಶಗಳಿಗೆ ಅಮೆರಿಕದ ವಲಸೆ ವೀಸಾ; ಇಲ್ಲಿದೆ ಪಟ್ಟಿ
ಟೆಸ್ಲಾ ಕಾರುಗಳಿಗೆ ಭರ್ಜರಿ ಡಿಸ್ಕೌಂಟ್?
ಇಲಾನ್ ಮಾಸ್ಕ್ ಮಾಲಕತ್ವದ ಟೆಸ್ಲಾ ಸಂಸ್ಥೆ ಭಾರತದ ಮಾರುಕಟ್ಟೆಯನ್ನು ತಡವಾಗಿ ಪ್ರವೇಶಿಸಿದೆ. 2023 ಮತ್ತು 2024ರಲ್ಲಿ ವಿಶ್ವದಲ್ಲೇ ಅತಿಹೆಚ್ಚು ಮಾರಾಟವಾದ ಮಾಡಲ್ ವೈ ಕಾರನ್ನು ಭಾರತದಲ್ಲಿ 2025ರಲ್ಲ ಬಿಡುಗಡೆ ಮಾಡಿದೆ. ಆದರೆ, ಭಾರತಕ್ಕೆ ಇದನ್ನು ಆಮದು ಮಾಡಲಾಗುವುದಿಲ್ಲ ಶೇ. 110ರಷ್ಟು ದುಬಾರಿ ಸುಂಕಗಳ ಹೊರೆ ಇದೆ. ಹೀಗಾಗಿ, ಮಾಡಲ್ ವೈ ಕಾರು ಭಾರತದಲ್ಲಿ ದುಬಾರಿ ಬೆಲೆ ಹೊಂದಿದೆ.
ಇದೇ ವೇಳೆ, ಟೆಸ್ಲಾ ಕಾರುಗಳಿಗೆ ಭಾರತದಲ್ಲಿ ನೀರಸ ಪ್ರತಿಕ್ರಿಯೆ ಸಿಗುತ್ತಿದೆ. ಮಾಡಲ್ ವೈ ಕಾರುಗಳಿಗೆ ಭಾರತದಲ್ಲಿ ಬುಕಿಂಗ್ ಆಗಿರುವುದು 600ರ ಆಸುಪಾಸು ಮಾತ್ರ. 500 ಕಾರುಗಳನ್ನು ಭಾರತಕ್ಕೆ ಸಾಗಿಸಲಾಗಿದೆ. ಆದರೆ, ಇವು ವಾಸ್ತವವಾಗಿ ಗ್ರಾಹಕರು ಪಡೆದಿರುವುದು ಬಹಳ ಕಡಿಮೆ. 2025ರಲ್ಲಿ ಕೇವಲ 227 ಕಾರುಗಳು ಮಾತ್ರ ರಿಜಿಸ್ಟರ್ ಆಗಿವೆಯಂತೆ. ಈಗ ಮಾರಾಟವಾಗದೇ ಇನ್ವೆಂಟ್ರಿಯಲ್ಲಿ ಉಳಿದಿರುವ ಕಾರುಗಳಿಗೆ ಗ್ರಾಹಕರನ್ನು ಆಕರ್ಷಿಸಲು ಭರ್ಜರಿ ಡಿಸ್ಕೌಂಟ್ ಕೊಡಲಾಗುತ್ತಿದೆ. ಒಂದು ಕಾರಿಗೆ ಎರಡು ಲಕ್ಷ ರೂವರೆಗೆ ಡಿಸ್ಕೌಂಟ್ ಆಫರ್ ಮಾಡಲಾಗುತ್ತಿದೆ ಎಂಬ ಸುದ್ದಿ ಇದೆ.
ಇದನ್ನೂ ಓದಿ: 2025ರಲ್ಲಿ ಚೀನಾಕ್ಕೆ ವ್ಯಾಪಾರ ಸುಗ್ಗಿ; ಭಾರತದ ರಫ್ತಿನಲ್ಲೂ 5.5 ಬಿಲಿಯನ್ ಡಾಲರ್ನಷ್ಟು
ಲಕ್ಷುರಿ ಸೆಗ್ಮೆಂಟ್ನಲ್ಲಿ ಚೀನಾದ ಬಿವೈಡಿ, ಜರ್ಮನಿಯ ಬಿಎಂಡಬ್ಲ್ಯು ಕಂಪನಿಗಳ ಎಲೆಕ್ಟ್ರಾನಿಕ್ ಕಾರುಗಳು ಭಾರತೀಯರನ್ನು ಆಕರ್ಷಿಸುತ್ತಿವೆ. ಟೆಸ್ಲಾದ ಮಾಡಲ್ ವೈ ಕಾರು ಗ್ರಾಹಕರನ್ನು ಆಕರ್ಷಿಸಲು ವಿಫಲವಾಗಿದೆ.
ಅಂದಹಾಗೆ, ಜನರು ಟೆಸ್ಲಾದ ಮಾಡಲ್ ವೈ ಕಾರನ್ನು ಡ್ರೈವ್ ಮಾಡಿ ಅದರ ಅನುಭವ ಪಡೆಯಬಹುದು. ಬೆಂಗಳೂರಿನಲ್ಲಿ ಆಸಕ್ತರು ಟೆಸ್ಲಾ ಇಂಡಿಯಾದ ವೆಬ್ ಸೈಟ್ಗೆ ಹೋಗಿ ಟೆಸ್ಟ್ ಡ್ರೈವ್ಗೆ ಸಮಯ ಬುಕ್ ಮಾಡಬಹುದು. ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಒಂದು ಟೈಮ್ ಸ್ಲಾಟ್ ಪಡೆಯಬಹುದು. ಕೂಡ್ಲು ಗೇಟ್ ಬಳಿ ಟೆಸ್ಟ್ ಡ್ರೈವ್ ಸೌಲಭ್ಯ ಮಾಡಲಾಗಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ