Unique Relationship: ಥಾಯ್ಲೆಂಡ್‌ನ 24 ವರ್ಷದ ಫಾಹ್ ಎಂಬ ಯುವತಿ, ಸುವಾ ಮತ್ತು ಸಿಂಗ್ ಎಂಬ ಅವಳಿ ಸೋದರರೊಂದಿಗೆ ಏಕಕಾಲದಲ್ಲಿ ಡೇಟಿಂಗ್ ಮಾಡುತ್ತಿದ್ದಾರೆ. ತಮ್ಮ ಈ ವಿಶಿಷ್ಟ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾದರೂ, ಅವರು ತಮ್ಮ ಪ್ರಣಯ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಡೇಟಿಂಗ್ ಹಾಗೂ ಲಿವ್ ಇನ್ ರಿಲೇಷನ್‌ಷಿಪ್‌ಗಳು ಇತ್ತಿಚಿನ ದಿನಗಳಲ್ಲಿ ಸಾಮಾನ್ಯ. ಸೋಶಿಯಲ್ ಮೀಡಿಯಾದಲ್ಲಿ ಈಶಾನ್ಯ ಥಾಯ್ಲೆಂಡ್‌ನ ಹುಡುಗಿಯ ಸ್ಟೋರಿ ವೈರಲ್ ಆಗುತ್ತಿದೆ. ಅದಕ್ಕೆ ಕಾರಣ ಈ ಯುವತಿ ಏಕಕಾಲದಲ್ಲಿ ಅವಳಿ ಸೋದರರ ಜೊತೆ ಡೇಟಿಂಗ್ ಮಾಡುತ್ತಿದ್ದಾಳೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಥೈಲ್ಯಾಂಡ್‌ನ ನಖೋನ್ ಫಾನೋಮ್ ಪ್ರದೇಶದ 24 ವರ್ಷದ ಫಾಹ್, ರಿಲೇಷನ್‌ಷಿಪ್‌ನ ನಿರೀಕ್ಷೆಯಲ್ಲಿದ್ದಾಗ ಸಹೋದರರಾದ ಸುವಾ ಮತ್ತು ಸಿಂಗ್ ಅವರನ್ನು ಭೇಟಿಯಾಗಿದ್ದರು.

ಕಿರಿಯ ಸಹೋದರ ಸುವಾ ಪ್ರಕಾರ, ಅವನು ಮೊದಲು ಫಾಹ್‌ಗೆ ಸಂದೇಶ ಕಳುಹಿಸಿ ನಂತರ ತನ್ನ ಅಣ್ಣ ಸಿಂಗ್‌ಗೆ ಹೇಳಿದ್ದ. ನಂತರ ಮೂವರು ಒಳ್ಳೆಯ ಸ್ನೇಹಿತರಾದರು ಮತ್ತು ಅವರ ರಿಲೇಷನ್‌ಷಿಪ್ ಅಲ್ಲಿಂದಲೇ ಪ್ರಾರಂಭವಾಗಿದೆ.

ವರದಿಯ ಪ್ರಕಾರ, ಅವಳಿ ಸಹೋದರರು ಫಾಹ್ ಗಿಂತ ಒಂದು ವರ್ಷ ಕಿರಿಯರು ಮತ್ತು ಕೃಷಿ ಯಂತ್ರೋಪಕರಣ ಸೇವೆಗಳಲ್ಲಿ ಕೆಲಸ ಮಾಡುತ್ತಾರೆ. ಫಾಹ್ ತನ್ನ ಅಧ್ಯಯನವನ್ನು ಪೂರ್ಣ ಮಾಡುತ್ತಿದ್ದ ಹಂತದಲ್ಲಿ ಮೂವರು ಡೇಟಿಂಗ್ ಪ್ರಾರಂಭಿಸಿದರು.

24 ವರ್ಷದ ಫಾಹ್ ಪ್ರಕಾರ, ಒಂದೇ ಬೆಡ್‌ಅನ್ನು ತಾವು ಮೂವರು ಹಂಚಿಕೊಂಡಿದ್ದೇವೆ ಎಂದಿದ್ದಾರೆ. ಹಾಸಿಗೆಯ ಮಧ್ಯದಲ್ಲಿ ನಾನು ಮಲಗುತ್ತೇನೆ ಎಂದಿದ್ದಾರೆ. ಇನ್ನು ದೈಹಿಕ ಸಂಬಂಧ ಯಾವುದೇ ರಿಲೇಷನ್‌ಷಿಪ್‌ನ ಸ್ವಾಭಾವಿಕ ಭಾಗ ಎಂದು ಅವರು ನಂಬಿದ್ದಾರೆ.

ವರದಿಗಳ ಪ್ರಕಾರ, ಫಾಹ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಾರೆ, ಗ್ರಾಹಕರಿಗೆ ಸೇವೆ ಸಲ್ಲಿಸುವುದರಿಂದ ಹಿಡಿದು ಅಡುಗೆಮನೆಯಲ್ಲಿ ಸಹಾಯ ಮಾಡುವವರೆಗೆ ಎಲ್ಲವನ್ನೂ ನಿರ್ವಹಿಸುತ್ತಾರೆ. ಅವರ ಮಾಸಿಕ ಆದಾಯ 10,000 ಬಹ್ತ್ (ಸುಮಾರು $320).

ಫಾಹ್ ಪ್ರಕಾರ, ಹಾಗೇನಾದರೂ ಗರ್ಭಿಣಿಯಾದರೆ, ತಂದೆ ಯಾರು ಅನ್ನೋದನ್ನು ಗುರುತಿಸಲು ಡಿಎನ್ಎ ಪರೀಕ್ಷೆಯನ್ನು ಮಾಡಿಸಿಕೊಳ್ಳುವ ಪ್ಲ್ಯಾನ್ ಮಾಡಿದ್ದಾರೆ. ಜನನ ಪ್ರಮಾಣಪತ್ರದಲ್ಲಿ ಸರಿಯಾದ ಹೆಸರು ಇರಬೇಕು ಅನ್ನೋ ಕಾರಣಕ್ಕೆ ಇದನ್ನು ಮಾಡುತ್ತೇನೆ ಎಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿನ ನೆಗೆಟಿವ್ ಕಾಮೆಂಟ್ಸ್ ಕುರಿತು ಮಾತನಾಡಿದ ಫಾಹ್, ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಬದುಕುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳುತ್ತಾರೆ. ಅವರ ವಿಶಿಷ್ಟ ರಿಲೇಷನ್‌ಷಿಪ್ ಹೆಚ್ಚಿನವರ ಗಮನ ಸೆಳೆದಿದೆ ಎಂದೂ ತಿಳಿಸಿದ್ದಾರೆ.

ಫಾಹ್ ಆಗಾಗ್ಗೆ ಇಬ್ಬರು ಸಹೋದರರ ನಡುವೆ ಕುಳಿತಿರುವ ಅಥವಾ ಮಲಗಿರುವ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲೊ ಹಂಚಿಕೊಳ್ಳುತ್ತಾರೆ. ಈ ಚಿತ್ರಗಳ ಮೂಲಕ, ಅವರು ತಮ್ಮ ಪ್ರಣಯ ಕ್ಷಣಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುತ್ತಾರೆ.

Source link
ಅವಳಿ ಸೋದರರ ಜೊತೆ ಹುಡುಗಿಯ ಡೇಟಿಂಗ್, ಯಾರ ಮಗುವಿಗೆ ಪ್ರಗ್ನೆಂಟ್ ಅನ್ನೋದನ್ನ ತಿಳಿಯಲು ಡಿಎನ್‌ಎ ಟೆಸ್ಟ್!