ರಾಜಕೀಯಕ್ಕೆ ಧುಮುಕಿದ ಮೇಲೆ ದಳಪತಿ ವಿಜಯ್ (ತಲಪತಿ ವಿಜಯ್) ಅವರಿಗೆ ಒಂದರ ಹಿಂದೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ರಾಜಕೀಯದಲ್ಲಿ ಅವೆಲ್ಲ ಸಹಜವೂ ಹೌದು. ನಂತರ ಕರೂರು ಕಾಲ್ತುಳಿತ, ಈಗ ಅವರ ಕೊನೆಯ ಸಿನಿಮಾ ‘ಜನ ನಾಯಕನ್’ಗೆ ಸಿಬಿಎಫ್‌ಸಿ ಪ್ರಮಾಣ ಪತ್ರ ನೀಡಲು ಹಿಂದೇಟು, ಇದರ ಜೊತೆಗೆ ವಿಚಾರಣೆಗಳು ಒಂದರ ಹಿಂದೊಂದು ವಿಜಯ್ ಅವರನ್ನು ಕಾಡುತ್ತಿವೆ. ಇತ್ತೀಚೆಗಷ್ಟೇ ವಿಜಯ್ ಅವರಿಗೆ ಕೇಂದ್ರ ಚುನಾವಣಾ ಆಯೋಗವು ‘ವಿಶಲ್’ ಎಂಬ ಚುನಾವಣಾ ಚಿಹ್ನೆಯನ್ನು ನೀಡಿದೆ. ಚುನಾವಣಾ ಚಿಹ್ನೆಯ ಪ್ರಚಾರಕ್ಕಾಗಿ ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ವಿಜಯ್, ಅವರು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಪರೋಕ್ಷವಾಗಿ ಮಾತನಾಡದೆ, ಅಭಿಮಾನಿಗಳಿಗೆ ಭರವಸೆಯನ್ನು ಸಹ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್, ‘ಕಳೆದ 30 ವರ್ಷಗಳಲ್ಲಿ ಈ ರಾಜಕೀಯ ಪಕ್ಷಗಳು ಜನರನ್ನು ನಿರ್ಲಕ್ಷ್ಯ ಮಾಡಿವೆ. ನನ್ನ ವೃತ್ತಿ ಜೀವನದ ಪೀಕ್‌ನಲ್ಲಿದ್ದಾಗಲೇ ಜನರಿಗೆ ಈ ಸ್ಥಾನವಿದೆ. ಅದನ್ನು ನಾನು ಸದುಪಯೋಗ ಪಡಿಸಿಕೊಳ್ಳುತ್ತೇನೆ’ ಎಂದ ವಿಜಯ್, ತಮ್ಮ ಮೇಲೆ ಬೀಳುತ್ತಿರುವ ರಾಜಕೀಯ ಒತ್ತಡಗಳ ಬಗ್ಗೆ ಮಾತನಾಡಿ, ‘ನಾನು ಯಾರಿಗೂ ಬಗ್ಗುವುದಿಲ್ಲ, ಯಾವ ಒತ್ತಡಕ್ಕೂ ಮಣಿಯುವುದಿಲ್ಲ’ ಜೊತೆಗೆ, ತಮ್ಮ ಅಭಿಮಾನಿಗಳನ್ನುದ್ದೇಶಿಸಿ, ‘ನನ್ನ ಮುಖ ನೋಡಿ, ಈ ಮುಖ ದಣಿದಂತೆ, ಒತ್ತಡದಲ್ಲಿ ಇರುವಂತೆ ನಿಮಗೆ ಕಾಣಿಸುತ್ತದೆ’ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ಕಾಲ್ತುಳಿತ ದುರಂತದ ಬಳಿಕವೂ ಮತ್ತೆ ದಾಖಲೆ ಪ್ರಮಾಣದಲ್ಲಿ ಜನ ಸೇರಿಸಲು ಸಜ್ಜಾದ ದಳಪತಿ ವಿಜಯ್
ಆ ಮೂಲಕ ತಾವು ಯಾವುದೇ ಒತ್ತಡಗಳಿಗೆ ಬರುವುದಿಲ್ಲ ಮತ್ತು ಈಗ ಸತತವಾಗಿ ರಾಜಕೀಯ ಒತ್ತಡಗಳಿಂದ ತಾವು ಅಧೀರರಾಗಿಲ್ಲ ಎಂದು ಅಭಿಮಾನಿಗಳಿಗೆ. ರಾಜಕೀಯ ಒತ್ತಡಗಳಿಂದ ವಿಜಯ್ ಅಧೀರರಾಗಿದ್ದಾರೆ, ಅವರು ರಾಜಕೀಯದಿಂದ ಹೆಜ್ಜೆ ಹಿಂದಿಡುವ ಅಥವಾ ಬೇರೊಂದು ಪಕ್ಷದೊಂದಿಗೆ ಸಂಧಾನ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡುತ್ತಿತ್ತು. ಅದೇ ಕಾರಣಕ್ಕೆ ವಿಜಯ್ ಅವರು ಮೇಲ್ಕಂಡಂತೆ ಮಾತುಗಳನ್ನಾಡಿದ್ದಾರೆ.
‘ಜನ ನಾಯಕನ್’ ಸಿನಿಮಾಕ್ಕೆ ಸಿಬಿಎಫ್ ಸಿ ಪ್ರಮಾಣ ಪತ್ರ ನಿರಾಕರಿಸಿದೆ. ನಿರ್ಮಾಪಕರು ನ್ಯಾಯಾಲಯದಲ್ಲಿ ಹೋರಾಟದಲ್ಲಿ ಜಾರಿಯಲ್ಲಿದ್ದಾರೆ. ಆದರೆ ನ್ಯಾಯಾಲಯದಲ್ಲಿಯೂ ಸಹ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಜನವರಿ 27 ರಂದು ಸಿನಿಮಾದ ಸಿಬಿಎಫ್ ಸಿ ಪ್ರಮಾಣ ಪತ್ರದ ಪ್ರಕಾರ ತೀರ್ಪು ಪ್ರಕಟಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಅಂದು ‘ಜನ ನಾಯಕನ್’ ಭವಿಷ್ಯ ಏನಾಗಲಿದೆಯೋ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ