
ನಟ ದಳಪತಿ ವಿಜಯ್ ಅವರ ರಾಜಕೀಯ ಜೀವನ ವೈಯಕ್ತಿಕ ಜೀವನದ ವಿಚಾರವೇ ಹೆಚ್ಚು ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಆಗಿರುವುದು ತ್ರಿಷಾ (ತ್ರಿಶಾ ಕೃಷ್ಣನ್) ಜೊತೆಗಿನ ಒಡನಾಟ. ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧವಿದೆ ಎಂದು ಕೂಡ ಸಂಗೀತಾ ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ತ್ರಿಷಾ ಮತ್ತು ವಿಜಯ್ (ತಲಪತಿ ವಿಜಯ್) ಅವರು ಖುಲ್ಲಂ ಖುಲ್ಲಾ ಜೊತೆಯಾಗಿ ತಿರುಗಾಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಅದನ್ನು ಕಂಡು ಅಭಿಮಾನಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸಿನಿಮಾ ಕಲಾವಿದರು ರಾಜಕೀಯದಲ್ಲಿ ಯಶಸ್ಸು ಕಂಡ ಸಾಕಷ್ಟು ಉದಾಹರಣೆ ತಮಿಳುನಾಡಿನಲ್ಲಿದೆ. ದಳಪತಿ ವಿಜಯ್ ಅವರು ಟಿವಿಕೆ ಪಕ್ಷ ಸ್ಥಾಪಿಸಿಕೊಂಡು ರಾಜಕೀಯಕ್ಕೆ ಇಳಿದಿದ್ದಾರೆ. ಮುಂಬರುವ ದಿನಗಳಲ್ಲಿ ಅವರು ನಡೆಯಲಿದೆ. ಅದಕ್ಕಾಗಿ ಅವರು ಎಲ್ಲ ರೀತಿಯಿಂದಲೂ ತಯಾರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ತ್ರಿಷಾ ಜೊತೆ ಕಾಣಿಸಿಕೊಂಡಿದ್ದು ಅಭಿಮಾನಿಗಳ ಕೋಪಕ್ಕೆ ಕಾರಣ.
ದಳಪತಿ ವಿಜಯ್ ಅವರ ಹೆಸರು ತ್ರಿಷಾ ಜೊತೆ ತಳಕು ಹಾಕಿಕೊಂಡಾಗ ಅಭಿಮಾನಿಗಳು ರಕ್ಷಣೆಗೆ ಬರುತ್ತಿದ್ದಾರೆ. ವಿಜಯ್ ಮತ್ತು ತ್ರಿಷಾ ಕೇವಲ ಸ್ನೇಹಿತರು ಎಂದು ಫ್ಯಾನ್ಸ್ ವಾದ ಮಾಡುತ್ತಿದ್ದರು. ಗಾಸಿಪ್‌ನಿಂದ ವಿಜಯ್ ಅವರ ರಾಜಕೀಯ ಭವಿಷ್ಯಕ್ಕೆ ತೊಂದರೆ ಆಗದಿರಲಿ ಎಂದು ಅಭಿಮಾನಿಗಳು ಇಷ್ಟ ಪಡುತ್ತಾರೆ. ಆದರೆ ವಿಜಯ್ ಅವರು ಅದನ್ನೆಲ್ಲ ಈಗ ಗಾಳಿಗೆ ತೂರಿದ್ದಾರೆ.
ಇನ್ನೂ ಕೆಲವು ಅಭಿಮಾನಿಗಳು ವಿಜಯ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ವಿಜಯ್ ಮತ್ತು ತ್ರಿಷಾ ನಡುವೆ ಸಂಬಂಧ ಇರುವುದೇ ಹೌದಾದರೆ ಅದು ಇಂದಿಲ್ಲ ನಾಳೆ ಬಹಿರಂಗ ಆಗಲೇಬೇಕು. ಅದನ್ನು ರಾಜಕೀಯ ವಿರೋಧಿಗಳು ಉಪಯೋಗಿಸಿಕೊಳ್ಳುವುದಕ್ಕೂ ವಿಜಯ್ ಅವರು ಈಗ ತೋರಿಸಿದ್ದಾರೆ ಎಂಬುದು ಕಟ್ಟಾ ಅಭಿಮಾನಿಗಳು.
ಇದನ್ನೂ ಓದಿ: ವಿಚ್ಛೇದನಕ್ಕೆ ಅರ್ಜಿ: ದಳಪತಿ ವಿಜಯ್ ಪತ್ನಿಗೆ 250 ಕೋಟಿ ರೂ. ಜೀವನಾಂಶ?
ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಈ ಸಂದರ್ಭದಲ್ಲೇ ವಿಜಯ್ ಅವರು ತ್ರಿಷಾ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈ ರೀತಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅವರಿಬ್ಬರು ತಮ್ಮ ಸಂಬಂಧವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂಬುದು ನೆಟ್ಟಿಗರ ವಾದ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.