Headlines

ಕರೂರು ಘಟನೆಯಿಂದ ‘ಜನ ನಾಯಗನ್’ ರಿಲೀಸ್ ಮುಂದಕ್ಕೆ? ಇಲ್ಲಿದೆ ಹೊಸ ಅಪ್​ಡೇಟ್

ಕರೂರು ಘಟನೆಯಿಂದ ‘ಜನ ನಾಯಗನ್’ ರಿಲೀಸ್ ಮುಂದಕ್ಕೆ? ಇಲ್ಲಿದೆ ಹೊಸ ಅಪ್​ಡೇಟ್


ದಳಪತಿ ವಿಜಯ್ (ದಳಪತಿ ವಿಜಯ್) ಅವರು ಕರೂರಿನಲ್ಲಿ ನಡೆಸಿದ ಚುನಾವಣಾ ರ್ಯಾಲಿಯಲ್ಲಿ 41 ಜನರು ನಿಧನರಾದರು, 100ಕ್ಕೂ ಅಧಿಕ ಜನರು ಈ ಘಟನೆ ವಿಜಯ್‌ಗೆ ಸಾಕಷ್ಟು ಹಿನ್ನಡೆ ಉಂಟು ಮಾಡಿತು ಎಂದರೂ ತಪ್ಪಾಗಲಿಕ್ಕಿಲ್ಲ. ಅವರ ಕೊನೆಯ ಸಿನಿಮಾ ‘ಜನ ನಾಯಕನ್’ ಶೂಟ್‌ನಲ್ಲಿ ಬ್ಯೂಸಿ ಇದ್ದಾರೆ. ಈ ಚಿತ್ರ ಜನವರಿ 9ರಂದು ತೆರೆಗೆ ಬರಬೇಕಿದೆ. ಕರೂರು ಸಿನಿಮಾ ಮುಂದಕ್ಕೆ ಹೋಗಲಿದೆ ಎಂದು ಹೇಳಲಾಗಿದೆ. ಇದಕ್ಕೆ ತಂಡದವರು ಸ್ಪಷ್ಟನೆ ಕೊಟ್ಟಿದ್ದಾರೆ.

‘ಜನ ನಾಯಕನ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರವನ್ನು ಎಚ್. ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಅಜಿತ್ ಕುಮಾರ್ ಜೊತೆ ಸತತ ಹ್ಯಾಟ್ರಿಕ್ ಸಿನಿಮಾ ನೀಡಿದ ಅವರು, ಈಗ ವಿಜಯ್ ಜೊತೆ ಕೈ ಜೋಡಿಸಿರೋದು ವಿಶೇಷ. ಈ ಸಿನಿಮಾ ಅಂದುಕೊಂಡ ನಂತರ ತೆರೆಗೆ ಬರಲಿದೆ.

ರಿಲೀಸ್ ಆಗಿರೋ ಹೊಸ ಪೋಸ್ಟರ್ ನಲ್ಲಿ ಜನರ ಮಧ್ಯೆ ವಿಜಯ್ ಅವರು ನಿಂತಿದ್ದಾರೆ. ಅವರನ್ನು ಜನರು ಮುಟ್ಟುತ್ತಿದ್ದಾರೆ. ಸಿನಿಮಾ ಮೇಲೆ ಜನವರಿ 9ರಂದು ಬರಲಿದೆ ಎಂದು ಬರೆಯಲಾಗಿದೆ. ಈ ಸಿನಿಮಾ ಬಳಿಕ ವಿಜಯ್ ಅವರು ರಾಜಕೀಯಕ್ಕೆ ಕಾಲಿಡಲಿದ್ದಾರೆ. ಹೀಗಾಗಿಯೇ ಸಿನಿಮಾನ ರಾಜಕೀಯ ಕಥಾ ಹಂದರದಂತೆ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಈ ಸಿನಿಮಾ ಥಿಯೇಟರ್ ಅಲ್ಲಿ ರಿಲೀಸ್ ಆದ ಬಳಿಕ ಅಮೇಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ.

ಸಿನಿಮಾ ರಂಗದಲ್ಲಿ ಯಶಸ್ಸು ಕಂಡ ಬಳಿಕ ವಿಜಯ್ ಅವರು ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 2026 ರ ತಮಿಳುನಾಡಿನ ವಿಧಾನಸಭಾ ಸುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅವರ ಪಕ್ಷದವರು ಸ್ಪರ್ಧೆ ಮಾಡೋದು ಖಚಿತ. ಈಗ ಕರೂರು ರ್ಯಾಲಿಯಲ್ಲಿ ನಡೆದ ದುರಂತ ವಿಜಯ್‌ಗೆ ಸಾಕಷ್ಟು ಹಿನ್ನಡೆ ತಂದಿದೆ.

ಇದನ್ನೂ ಓದಿ: ‘ರ್ಯಾಲಿಗೆ ಬಂದವರೆಲ್ಲ ನಿಮಗೆ ವೋಟ್ ಮಾಡಲ್ಲ’; ದಳಪತಿ ವಿಜಯ್‌ಗೆ ಕಮಲ್ ಹಾಸನ್ ಕಿವಿಮಾತು

ವಿಜಯ್ ಅವರ ಈ ಕೊನೆಯ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಕನ್ನಡದಲ್ಲಿ ಯಶಸ್ವಿಯಾಗಿ ಕೆಲ ಸಿನಿಮಾಗಳನ್ನು ನಿರ್ಮಿಸಿರುವ ಕೆವಿಎನ್ ‘ಜನ ನಾಯಕನ್’ ಸಿನಿಮಾ ಮೂಲಕ ತಮಿಳಿಗೆ ಕಾಲಿಟ್ಟಿದೆ. ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಮಲಯಾಳಂ ಚೆಲುವೆ ಮಮಿತಾ ಬೈಜು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *