
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದಳಪತಿ ವಿಜಯ್ ಅವರು ಟಿವಿ ಪಕ್ಷದ ಮೂಲಕ ಸ್ಪರ್ಧೆಗೆ ಇಳಿದಿದ್ದಾರೆ. ಅವರು ಈಗ ಅಫಿಡವಿಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಿಸಲಾಗಿದೆ. ವಿಜಯ್ ಅವರು 603 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅಫಿಡವಿಟ್ ಅಲ್ಲಿ ಸಾಲ ಕೊಟ್ಟ ವಿವರ ಕೂಡ ಇದೆ. ಇದೆ ವಿಷಯವನ್ನು ಇಟ್ಟುಕೊಂಡು ಟೀಕೆ ಮಾಡುತ್ತಿದ್ದಾರೆ. ಆದರೆ, ಇದರ ಅಸಲಿಯತ್ತು ಬೇರೆಯದೇ ಇದೆ.
ವಿಜಯ್ ಅವರು 603 ಕೋಟಿ ರೂಪಾಯಿ ಆಸ್ತಿಯಲ್ಲಿ 404.58 ಕೋಟಿ ರೂಪಾಯಿ ಮೊತ್ತದ ಚರಾಸ್ತಿ ಹಾಗೂ 198.62 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಬೆಲೆ. ಅವರು ಕೊಡೈಕೆನಾಲ್ ಅಲ್ಲಿ ಎಸ್ಟೇಟ್ ಪ್ರದರ್ಶನ. ಚೆನ್ನೈನ ವಿವಿಧ ಕಡೆಗಳಲ್ಲಿ ವಾಣಿಜ್ಯ ಮಳಿಗೆ ಇದೆ. ಈ ಮಧ್ಯೆ ಅವರು ತಮ್ಮವರಿಗೆ ಕೊಟ್ಟ ಸಾಲದ ವಿಷಯ ಉಲ್ಲೇಖ ಆಗಿದೆ.
TVK ವಂಚನೆ ವಿಜಯ್ ಅವರ ಅಫಿಡವಿಟ್ನಿಂದ ಸತ್ಯಗಳು:
1. ವಿಜಯ್ KW ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಅಲ್ಲ
2. ಚಲನಚಿತ್ರಕ್ಕಾಗಿ 200 ಕೋಟಿಗಳ ಸಂಬಳವು ನಕಲಿಯಾಗಿದೆ
3. ವಿಜಯ್ ಅವರ ರಿಯಲ್ ಎಸ್ಟೇಟ್ ವ್ಯವಹಾರ ನಿರ್ದೇಶಕರು ಅವರ ಚಾಲಕ ರಾಜೇಂದ್ರನ್ (ಬೇನಾಮಿ)
4. ವಿಜಯ್ ತನ್ನ ತಂದೆ, ತಾಯಿ, ಹೆಂಡತಿ, ಮಗ ಮತ್ತು ಮಗಳಿಗೆ ಸಾಲವನ್ನು ನೀಡಿದ್ದಾರೆ #ಕಂದುವಟ್ಟಿ_ವಿಜಯ್ pic.twitter.com/gRVZAi4MRp– ಕಿಂಗ್ಸ್ಲಿ (@ಸಿನಿಕಿಂಗ್ಸ್ಲೇ) ಮಾರ್ಚ್ 30, 2026
ಸಂಗೀತಾ ಅವರಿಗೆ 12 ಕೋಟಿ ರೂಪಾಯಿ, ತಂದೆಗೆ 3 ಕೋಟಿ ರೂಪಾಯಿ ಸಾಲ, ಮಗನಿಗೆ ಹಾಗೂ ತಾಯಿಗೆ ತಲಾ 87 ಲಕ್ಷ ರೂಪಾಯಿ, ಮಗಳಿಗೆ 4 ಲಕ್ಷ ರೂಪಾಯಿ ಕೊಟ್ಟ ಸಾಲದ ಬಗ್ಗೆ ಉಲ್ಲೇಖವಾಗಿದೆ. ಇದನ್ನು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಮಗ ಮತ್ತು ಅಪ್ಪನಿಗೂ ವಿಜಯ್ ಸಾಲ ಕೊಟ್ಟಿದ್ದಾರೆ ಎಂದರೆ ಇದರ ಅರ್ಥ ಏನು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ದಳಪತಿ ವಿಜಯ್ 603 ಕೋಟಿ ರೂಪಾಯಿ ಆಸ್ತಿ ವಿವರ ಬಹಿರಂಗ: ಪತ್ನಿ ಬಳಿ ಎಷ್ಟಿದೆ?
ಆದರೆ, ಇದೊಂದು ಸಾಮಾನ್ಯ ಪ್ರಕ್ರಿಯೆ. ಅಫಿಡವಿಟ್ ಪರಿಶೀಲನೆಯ ಸಮಯದಲ್ಲಿ ಮಗ, ಪತ್ನಿ ಅಥವಾ ಯಾರೇ ಇರಬಹುದು, ಅವರಿಗೆ ಕೊಟ್ಟ ಹಣ ಉಲ್ಲೇಖ ಆಗದಿದ್ದರೆ ಅದನ್ನು ಗೌಪ್ಯವಾಗಿ ಇಟ್ಟಿದ್ದರು. ಹಾಗಾಗಬಾರದು ಎಂಬ ಕಾರಣಕ್ಕೆ ವಿಜಯ್ ಅದನ್ನು ಉಲ್ಲೇಖಿಸಿದ್ದಾರೆ ಎಂದು ಕೆಲವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
)