
ಇನ್ನು ತರುಣ್ ಅವರು ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡುತ್ತಿದ್ದರೆ, ಸೋನಲ್ ಅವರು, ಎಕ್ಕ ಸಕ್ಕ ಎಂಬ ತುಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಬಳಿಕ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಅಭಿಸಾರಿಕೆ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಕೊಟ್ಟರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಬಳಿಕ ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆನಂತರ ಶುಗರ್ ಫ್ಯಾಕ್ಟರಿ, ಬನಾರಸ್, ಗರಡಿ, ಮದುವೆ ದಿಬ್ಬಣ, ಡೆಮೊ ಪೀಸ್, ಶಂಭೋ ಶಿವ ಶಂಕರ್ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಉಪೇಂದ್ರ ನಟನೆಯ ಬುದ್ಧಿವಂತ 2, ರೋಲೆಕ್ಸ್ ಹಾಗೂ ಮಾರ್ಗರೆಟ್ ಲವ್ ಆಫ್ ರಾಮಾಚಾರಿ ಚಿತ್ರದಲ್ಲಿ ಸೋನಲ್ ಅಭಿನಯಿಸಿದ್ದಾರೆ.