Headlines

Gilli Nataನ ಒಂದೇ ಒಂದು ಫೋನ್​ ಕಾಲ್​, ಭವಿಷ್ಯವೇ ಬದಲಾಗತ್ತೆ: ನಿರ್ದೇಶಕ ತರುಣ್​ ಸುಧೀರ್​ ಬಿಗ್​ ಸರ್​ಪ್ರೈಸ್​

Gilli Nataನ ಒಂದೇ ಒಂದು ಫೋನ್​ ಕಾಲ್​, ಭವಿಷ್ಯವೇ ಬದಲಾಗತ್ತೆ: ನಿರ್ದೇಶಕ ತರುಣ್​ ಸುಧೀರ್​ ಬಿಗ್​ ಸರ್​ಪ್ರೈಸ್​

Gilli Nataನ ಒಂದೇ ಒಂದು ಫೋನ್​ ಕಾಲ್​, ಭವಿಷ್ಯವೇ ಬದಲಾಗತ್ತೆ: ನಿರ್ದೇಶಕ ತರುಣ್​ ಸುಧೀರ್​ ಬಿಗ್​ ಸರ್​ಪ್ರೈಸ್​
ಬಿಗ್​ಬಾಸ್​ ಗೆದ್ದ ಬಳಿಕ ಸತತ ಕಾರ್ಯಕ್ರಮಗಳಿಂದ ಸುಸ್ತಾಗಿರುವ ಗಿಲ್ಲಿ ನಟನಿಗೆ ಖ್ಯಾತ ನಿರ್ದೇಶಕ ತರುಣ್​ ಸುಧೀರ್​ ಭವಿಷ್ಯದ ಬಗ್ಗೆ ಸಲಹೆ ನೀಡಿದ್ದಾರೆ. ನಟನೆ, ನಿರ್ದೇಶನ ಅಥವಾ ಬರವಣಿಗೆಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಯೋಚಿಸಲು ಹೇಳಿದ್ದು, ತಮ್ಮ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ.
ಬಿಗ್​ಬಾಸ್​ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿರೋ ಗಿಲ್ಲಿ ನಟ (Bigg Boss Gilli Nata)ಇದೀಗ ಸಿನಿಮಾ ನಾಯಕನಾಗಿಯೂ ಮಿಂಚಿದ್ದಾರೆ. ಬಿಗ್​ಬಾಸ್​​ ಗೆಲುವಿನ ಬಳಿಕ ಇನ್ನಿಲ್ಲದಂತೆ ಕಾರ್ಯಕ್ರಮಗಳು ಇದ್ದು, ಸಕತ್​ ಬಿಜಿ ಇದ್ದಾರೆ. ಯಾರಿಗೂ ಇಲ್ಲ ಎನ್ನುವಂತಿಲ್ಲ, ಇಲ್ಲ ಎಂದುಬಿಟ್ಟರೆ ಮತ್ತಷ್ಟು ಕಾಂಟ್ರವರ್ಸಿಗಳು. ಹೀಗಾಗಿ ಬಿಟ್ಟಿದೆ ಗಿಲ್ಲಿ ನಟನ ಸದ್ಯದ ಬದುಕು.

ಆದರೆ, ಇಂಥ ಪ್ರೀತಿ ಎಲ್ಲರಿಗೂ ಸಿಗುವಂಥದ್ದಲ್ಲ. 12 ಸೀಸನ್​ಗಳ ಬಿಗ್​ಬಾಸ್​ನಲ್ಲಿ, ಈ ಪರಿಯ ಪ್ರೀತಿ ಸಿಕ್ಕಿದ್ದು ಬಹುಶಃ ಗಿಲ್ಲಿ ನಟನಿಗೆ ಮಾತ್ರವೇ ಇರಬೇಕು ಎನ್ನುವಷ್ಟರ ಮಟ್ಟಿಗೆ ಸ್ಥಿತಿ ಇದೆ. ಇದೇ ಕಾರಣಕ್ಕೆ ಅದನ್ನು ಅವರು ಮೆಂಟೈನ್​ ಮಾಡಲೇಬೇಕು. ಯಾರನ್ನೂ ನೋಯಿಸುವಂತಿಲ್ಲ.

ಇದೀಗ ಅವರ ಭವಿಷ್ಯದ ಬಗ್ಗೆ ಖ್ಯಾತ ನಿರ್ದೇಶಕ ತರುಣ್​ ಸುಧೀರ್​ ಮಾತನಾಡಿದ್ದಾರೆ. ಗಿಲ್ಲಿ ನಟ ನನಗೆ ಬಿಗ್​ಬಾಸ್​ಗಿಂತ ಮುಂಚೆಯೇ ಗೊತ್ತಿರುವ ವಿಷಯ. ತುಂಬಾ ಟ್ಯಾಲೆಂಟ್​ ಇದೆ. ಆತನಲ್ಲಿ ನನಗೆ ತುಂಬಾ ಖುಷಿಯಾಗಿದ್ದು ಏನೆಂದರೆ, ಅವರಿಗೆ ನಿರ್ದೇಶಕ ಆಗುವ ಬಯಕೆ ಇದೆ. ನಮಗೂ ನಿರ್ದೇಶಕರ ಕೊರತೆ ಇದೆ, ಇದೇ ಕಾರಣಕ್ಕೆ ನಿರ್ದೇಶಕ ಆದರೆ ನಮಗೂ ಖುಷಿ. ಆದರೆ ಇದಕ್ಕೂ ಮುನ್ನ ಸ್ಕ್ರಿಪ್ಟ್​ ರೈಟಿಂಗೂ ಕಲಿಯುವಂತೆ ಅವರಿಗೆ ಹೇಳಿದ್ದೆ. ಹೂಂ ಅಂದಿದ್ದರು ಎಂದಿದ್ದಾರೆ ತರುಣ್​.

ಬಿಗ್​ಬಾಸ್​ ಮುಗಿದ ಮೇಲೆ ಒಮ್ಮೆ ಸಿಕ್ಕಿದ್ದರು. ತುಂಬಾ ಸುಸ್ತಾಗಿ ಬಿಟ್ಟಿದ್ದೇನೆ. ಎಲ್ಲಿಗೆ ಹೋಗಬೇಕು, ಎಲ್ಲಿಗೆ ಬಿಡಬೇಕು ಎಂದು ತಿಳಿಯುತ್ತಿಲ್ಲ. ಸ್ವಲ್ಪ ಸಮಯವೂ ಸಿಗುತ್ತಿಲ್ಲ. ತುಂಬಾ ಟೈಯರ್ಡ್​ ಎನ್ನಿಸುತ್ತಿದೆ ಎಂದರು. ಅದಕ್ಕೆ ನಾನು, ಇನ್ನೊಂದೆರಡು ತಿಂಗಳು ಹೀಗೆ ಇರತ್ತೆ. ಈ ಪ್ರೀತಿ ಯಾರಿಗೂ ಸಿಗಲ್ಲ. ನಿಮಗೆ ಸಿಕ್ಕಿದೆ. ಎಂಜಾಯ್​ ಮಾಡು ಎಂದು ಬುದ್ಧಿ ಹೇಳಿದೆ ಎಂದಿದ್ದಾರೆ.

ಅವರಿಗೆ ನಿರ್ದೇಶಕ, ನಟ, ರೈಟರ್​ ಇವೆಲ್ಲವುಗಳಲ್ಲಿಯೂ ಟ್ಯಾಲೆಂಟ್​ ಇದೆ. ಅದೇ ಕಾರಣಕ್ಕೆ ಓಡಾಟ ಎಲ್ಲಾ ಮುಗಿದ ಮೇಲೆ ಸ್ವಲ್ಪ ದಿನ ಬ್ರೇಕ್​ ತಗೊಂಡು ಚೆನ್ನಾಗಿ ಯೋಚನೆ ಮಾಡಿ, ಫ್ರೆಂಡ್ಸ್​ ಜೊತೆ ಡಿಸ್​ಕಸ್​ ಮಾಡಲು ಹೇಳಿದ್ದೇನೆ. ಯಾವ ಫೀಲ್ಡ್​ ಆಯ್ದುಕೊಳ್ಳಬೇಕು ಎನ್ನುವ ಬಗ್ಗೆ ಯೋಚನೆ ಮಾಡಿ, ಮುಂದಿನ ಹೆಜ್ಜೆ ಇಡುವಂತೆ ಹೇಳಿದ್ದೇನೆ ಎಂದು ತರುಣ್​ ಸುಧೀರ್​ ಹೇಳಿದ್ದಾರೆ.

ಅವರು ನಟನೆಗೆ ಬರುವುದಾದರೆ, ನಾನು ನಿರ್ದೇಶನ ಮಾಡುವ ಚಿತ್ರಕ್ಕೆ ಕ್ಯಾರೆಕ್ಟರ್​ ಸೂಟ್​ ಎನ್ನಿಸಿದರೆ, ಖಂಡಿತ ತೆಗೆದುಕೊಳ್ಳುತ್ತೇನೆ. ಗಿಲ್ಲಿ ನಟ ಮುಂದೆ ಏನು ಹೆಜ್ಜೆ ಇಟ್ಟರೂ ಪರವಾಗಿಲ್ಲ. ಅವರು ಒಂದೇ ಒಂದು ಫೋನ್​ ಕಾಲ್​ ಮಾಡಿದರೂ ಅವರ ಭವಿಷ್ಯ ಬಗ್ಗೆ ನಾನು ಹೇಳುತ್ತೇನೆ. ಅವರಿಗೆ ಒಳ್ಳೆಯ ಭವಿಷ್ಯವಿದೆ ಎನ್ನುವ ಮೂಲಕ ತರುಣ್​ ಸುಧೀರ್​ ಗಿಲ್ಲಿ ನಟ ಮತ್ತು ಅವರ ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

Source link

Leave a Reply

Your email address will not be published. Required fields are marked *