ಅಪ್ಪನ ವ್ಯವಹಾರಕ್ಕೆ ಮಗಳ ಸಾಥ್ಚಿತ್ರ ಕ್ರೆಡಿಟ್ ಮೂಲ: Twitter
ತಾಯಿ ತನ್ನ ಮಗುವಿನ ಒಂಬತ್ತು ತಿಂಗಳ ಗರ್ಭದಲ್ಲಿಟ್ಟುಕೊಂಡರೆ, ತಂದೆ ಮಾತ್ರ ತನ್ನ ಹೆಗಲ ಮೇಲೆ ಕೂರಿಸಿಕೊಂಡು ಪ್ರಪಂಚವನ್ನು ತೋರಿಸುತ್ತಾನೆ. ಈ ಹೆಣ್ಣು ಮಕ್ಕಳ ತಂದೆಯೆಂದರೆ (ತಂದೆ) ಅಚ್ಚು ಮೆಚ್ಚು. ಮೊದಲ ಹೀರೋ ಅಪ್ಪನೇ ಆಗುತ್ತಾನೆ. ಅಪ್ಪ ಮಗಳು (ತಂದೆ ಮಗಳ ಬಾಂಧವ್ಯ) ಸುಂದರ ಬಾಂಧವ್ಯಕ್ಕೆ ಸಾಕ್ಷಿಯಾಗುವ ಹೃದಯಸ್ಪರ್ಶಿ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಪದೇ ಪದೇ ಹರಿದಾಡುತ್ತಿರುತ್ತವೆ. ಆದರೆ ಈ ವಿಡಿಯೋ ನೋಡಿದ ಮೇಲೆ ನಿಮ್ಮ ಕಣ್ಣು ಒದ್ದೆಯಾಗುತ್ತದೆ. ಮಾತು ಬಾರದ ತಂದೆಗೆ ಮಗಳೇ ಎಲ್ಲಾ ಆಗಿದ್ದಾಳೆ. ಜೀವನ ನಿರ್ವಹಣೆಗಾಗಿ ಪುಟ್ಟ ಅಂಗಡಿ ಇಟ್ಟು ಕೊಂಡಿರುವ ತಂದೆಗೆ ಮಾತು ಬರಲ್ಲ. ಮಗಳು ಅಪ್ಪನ ಜೊತೆಗೆ ನಿಂತು ವ್ಯವಹಾರದಲ್ಲಿ ಸಾಥ್ ನೀಡುತ್ತಾ ಮಗಳೇ ಅಪ್ಪನಿಗೆ ಮಾತಾಗಿದ್ದಾಳೆ. ಈ ಹೃದಯಸ್ಪರ್ಶಿ ದೃಶ್ಯವೊಂದು ನೆಟ್ಟಿಗರ ಹೃದಯ ಗೆದ್ದಿದೆ.
ಮಾತುಬಾರದ ತಂದೆಗೆ ವ್ಯವಹಾರದಲ್ಲಿ ಸಾಥ್ ನೀಡಿದ ಮಗಳು
ಅಡ್ವಾನ್ಸ್ . ಹೋಮಿ ದೇವಾಂಗ ಕಪೂರ್ (@Homidevang31) ಎಂಬುವವರು ಮಾತು ಬಾರದ ಅಪ್ಪನ ವ್ಯವಹಾರದಲ್ಲಿ ಮಗಳು ಸಾಥ್ ನೀಡುವ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಅಪ್ಪನಿಗೆ ಮಾತು ಬರುವುದಿಲ್ಲ, ಆದರೆ ಅವರ ಮಗಳು ಪ್ರತಿದಿನ ಅಂಗಡಿ ನಡೆಸುತ್ತಾ ಅವರಿಗೆ ಸಹಾಯ ಮಾಡುತ್ತಾಳೆ. ಪಾಣಿಪತ್: ಹಳೆಯ ನಿಲ್ದಾಣ, ಸುಕ್‌ದೇವ್ ನಗರ ಗೇಟ್ 1 ಬಳಿ, ಪರ್ವೀನ್ ಮೆಡಿಕಲ್ ಎದುರು, ನೀವು ಇಲ್ಲೇ ಹತ್ತಿರದಲ್ಲಿದ್ದರೆ, ಯಾವುದಾದರೂ ಖರೀದಿಸಿ, ನಿಮ್ಮ ಸಹಾಯಕ್ಕೆ ಸ್ವಲ್ಪವಾದರೂ ಅರ್ಥಪೂರ್ಣ ಎಂದು ಬರೆಯಲಾಗಿದೆ.
ಇದನ್ನೂ ಓದಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ
ಅಪ್ಪನಿಗೆ ಮಾತನಾಡಲು ಬರುವುದಿಲ್ಲ, ಆದರೆ ಅವನ ಮಗಳು ಪ್ರತಿದಿನ ಅವನಿಗೆ ಸಹಾಯ ಮಾಡುತ್ತಾ ಅಂಗಡಿಯನ್ನು ನಡೆಸುತ್ತಾಳೆ
📍 ಪಾಣಿಪತ್: ಹಳೆಯ ಬಸ್ ನಿಲ್ದಾಣ, ಶುಕ್ದೇವ್ ನಗರ ಗೇಟ್ 1 ಬಳಿ, ಪರ್ವೀನ್ ಮೆಡಿಕಲ್ ಎದುರು
ನೀವು ಹತ್ತಿರದಲ್ಲಿದ್ದರೆ, ಏನನ್ನಾದರೂ ಖರೀದಿಸಿ ಸ್ವಲ್ಪ ಸಹಾಯವು ಬಹಳಷ್ಟು ಅರ್ಥವನ್ನು ನೀಡುತ್ತದೆ 🙏🏻 pic.twitter.com/wfD7f8NgUQ
– ಅಡ್ವ. ಹೋಮಿ ದೇವಾಂಗ್ ಕಪೂರ್ (@Homidevang31) ಅಕ್ಟೋಬರ್ 19, 2025
ಈ ವಿಡಿಯೋದಲ್ಲಿ ಅಪ್ಪನಿಗೆ ಮಾತು ಬಾರದ ಕಾರಣ ಮಗಳು ತನ್ನ ತಂದೆಯೊಂದಿಗೆ ಮೂಕ ಭಾಷೆಯಲ್ಲೇ ವ್ಯವಹರಿಸುವುದನ್ನು ನೋಡಬಹುದು. ರಸ್ತೆ ಬದಿಯಲ್ಲಿ ಇರುವ ಮನೆಯ ಅಲಂಕಾರಿಕ ವಸ್ತುಗಳ ಸಣ್ಣದೊಂದು ಸ್ಟಾಲ್ ಇದೆ. ಇಲ್ಲಿ ತಂದೆ ಮಗಳು ಇಬ್ಬರೂ ಕುಳಿತು ಅಂಗಡಿ ನೋಡಿಕೊಳ್ಳುತ್ತಿದ್ದಾರೆ. ಆದರೆ ಗ್ರಾಹಕರು ಸ್ಟಾಲ್ ಹತ್ರ ಬಂದು ಕೇಳುವುದನ್ನು ತನ್ನ ತಂದೆಗೆ ಮೂಕ ಭಾಷೆಯಲ್ಲಿ ಮಗಳು ವಿವರಿಸಿದ್ದಾಳೆ. ಗ್ರಾಹಕರು ಕಡಿಮೆ ಬೆಲೆಗೆ ಕೆಲವು ವಸ್ತುಗಳನ್ನು ಕೊಡುವಂತೆ ಕೇಳಿದ್ದು ಈ ಬಗ್ಗೆ ತನ್ನ ತಂದೆಯ ಮಗಳು ವಿವರಿಸಿದ್ದು ಅಷ್ಟು ಕಡಿಮೆ ಬೆಲೆಗೆ ಕೊಡಲು ಸಾಧ್ಯವಿಲ್ಲ ಎಂದು ತಂದೆ ಮಗಳಿಗೆ ಮೂಕ ಭಾಷೆಯಲ್ಲಿ ವಿವರಿಸುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ:ವೀಡಿಯೋ: ಡ್ಯಾನ್ಸ್ ಮಾಡಿ ಮುದ್ದಿನ ಅಪ್ಪನನ್ನು ಮನೆಯೊಳಗೆ ಸ್ವಾಗತಿಸಿದ ಹೆಣ್ಣು ಮಕ್ಕಳು
ಅಕ್ಟೋಬರ್ 19 ರಂದು ಹಂಚಿಕೊಂಡಿದ್ದಾರೆ ಈ ವಿಡಿಯೋ ಇದುವರೆಗೆ ಏಳು ಲಕ್ಷ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಲಕ್ಷ್ಮಿ ದೇವಿಯ ಆಶೀರ್ವಾದ ಯಾವಾಗಲೂ ಅವರ ಮೇಲೆ ಇರಲಿ. ಅವರ ಜೀವನವು ಸಮೃದ್ಧಿ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಕಾಮೆಂಟ್ ಮಾಡಿದ್ದಾರೆ. ಇಬ್ಬರು ಅಪ್ಪ ಮಗಳ ಬಾಂಧವ್ಯ ಎಷ್ಟು ಸುಂದರವಾಗಿದೆ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಬಹುಷಃ ಅವರ ವ್ಯವಹಾರವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಈ ವಿಡಿಯೋ ಸಿಹಿಯಾಗಿದೆ. ಅವಳು ನಿಜವಾಗಿಯೂ ಅಪ್ಪನನ್ನು ಹೆಮ್ಮೆ ಪಡುವಂತೆ ಮಾಡುತ್ತಾಳೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 10:35 am, ಮಂಗಳವಾರ, 21 ಅಕ್ಟೋಬರ್ 25