ಅತ್ಯಂತ ಯಶಸ್ವಿ ಸೀರಿಸ್‌ಗಳಲ್ಲಿ ಮನೋಜ್ ಬಾಜ್ಪಾಯಿ ನಟನೆಯ ‘ದಿ ಫ್ಯಾಮಿಲಿ ಮ್ಯಾನ್’ ಕೂಡ ಒಂದು. ಎರಡು ಸರಣಿಗಳು ಬಂದಿವೆ. ಈಗ ಮೂರನೇ ಸರಣಿ ಬರೋಕೆ ರೆಡಿ ಆಗಿದೆ. ನವೆಂಬರ್ 21 ರಂದು ‘ಫ್ಯಾಮಿಲಿ ಮ್ಯಾನ್ 3’ ಬರಲಿದೆ. ಅದಕ್ಕೂ ಮೊದಲು ವೆಬ್ ಸೀರಿಸ್ ನ ಟ್ರೇಲರ್ ರಿಲೀಸ್ ಆಗಿದ್ದು, ಗಮನ ಸೆಳೆಯುವ ರೀತಿಯಲ್ಲಿ ಇದೆ. ಜೈದೀಪ್ ವಿಲನ್ ಪಾತ್ರ ಮಾಡುತ್ತಿದ್ದಾರೆ.
ಶ್ರೀಕಾಂತ್ ತಿವಾರಿ (ಮನೋಜ್) ಅವರು ಏನು ಕೆಲಸ ಮಾಡುತ್ತಿದ್ದಾರೆ ಎಂದು ಮನೆಯವರಿಂದ ಮುಚ್ಚಿಟ್ಟಿದ್ದರು. ಈಗ ಅನಿವಾರ್ಯವಾಗಿ ಅದನ್ನು ಹೇಳಲೇಬೇಕಾಗಿದೆ. ‘ನಾನೋರ್ವ ಏಜೆಂಟ್’ ಎಂದು ಹೇಳಿದಾಗ ‘ಟ್ರಾವೆಲ್ ಏಜೆಂಟ್ ಅಲ್ವ’ ಎಂಬ ಪ್ರಶ್ನೆ ಮಗನಿಂದ ಬರುತ್ತದೆ. ಇದನ್ನು ಕೇಳಿ ನಗಬೇಕೋ ಅಥವಾ ಅಳಬೇಕೋ ಎಂಬುದು ಶ್ರೀಕಾಂತ್ ಗೆ ಗೊತ್ತಾಗೋದಿಲ್ಲ.
ಟ್ರೇಲರ್‌ನಲ್ಲಿ ಹಲವು ಟ್ವಿಸ್ಟ್‌ಗಳನ್ನು ನೀಡಲಾಗಿದೆ. ಶ್ರೀಕಾಂತ್ ತಿವಾರಿ ಈಗ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಕೂಡ ಹೌದು. ಈ ರೀತಿಯ ಪರಿಸ್ಥಿತಿ ಬರಲು ಕಾರಣ ಏನು ಎಂಬುದಕ್ಕೆ ವೆಬ್ ಸೀರಿಸ್‌ನಲ್ಲೇ ಉತ್ತರ ಸಿಕ್ಕಿದೆ. ಇಡೀ ಸರಣಿಯ ಕಥೆ ಈಶಾನ್ಯ ಭಾರತದಲ್ಲಿ ಸಾಗುತ್ತಿದೆ. ಸಾಕಷ್ಟು ಆಯಕ್ಷನ್ಗಳು ಕೂಡ ಇವೆ.
ಏಜೆಂಟ್ ಶ್ರೀಕಾಂತ್ ತಿವಾರಿ 𝚛̶𝚎̶𝚙̶𝚘̶𝚛̶𝚝̶𝚒̶𝚗̶𝚐̶ ̶𝚘̶𝚗̶ ̶𝚍̶🚝̶̝🚝 ರನ್ ಆಗಿದ್ದಾರೆ#ದಿ ಫ್ಯಾಮಿಲಿ ಮ್ಯಾನ್ ಆನ್ ಪ್ರೈಮ್ಹೊಸ ಸೀಸನ್, ನವೆಂಬರ್ 21@rajndk @ಸುಮಾಂಕ್ @ತುಶಾರ್ ಸೇಯ್ತ್ @ಸುಮಿತಾರೋರಾ @Bajpayee Manoj @ಜೈದೀಪ್ ಅಹ್ಲಾವತ್ @ನಿಮ್ರತ್ ಅಧಿಕೃತ #ಪ್ರಿಯಾಮಣಿ @sharibhashmi @ಆಶ್ಲೇಶಾತ್… pic.twitter.com/BQQuPQWqC6
— ಪ್ರಧಾನ ವೀಡಿಯೊ IN (@PrimeVideoIN) ನವೆಂಬರ್ 7, 2025
‘ಪಾತಾಳ್ ಲೋಕ’ ರೀತಿಯ ವೆಬ್ ಸೀರಿಸ್‌ಗಳಲ್ಲಿ ನಟಿಸಿದ್ದ ಜೈದೀಪ್ ಅಹ್ಲಾವತ್ ಅವರು ‘ದಿ ಫ್ಯಾಮಿಲಿ ಮ್ಯಾನ್ 3’ ಸರಣಿಯಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ಉದ್ದನೆಯ ಕೂದಲು ಬಿಟ್ಟು ಅವರ ಲುಕ್ ಗಮನ ಸೆಳೆಯುವ ರೀತಿಯಲ್ಲಿ ಇದೆ. ಪ್ರಿಯಾಮಣಿ, ಶರೀಬ್ ಹಶ್ಮಿ ಸೇರಿದಂತೆ ಅನೇಕ ಕಲಾವಿದರು ಈ ಸರಣಿಯಲ್ಲೂ ಮುಂದುವರಿದಿದ್ದಾರೆ. ಈ ಸರಣಿಗೆ ರಾಜ್ ಹಾಗೂ ಡಿಕೆ ನಿರ್ದೇಶನವಿದೆ.
ಇದನ್ನೂ ಓದಿ: ಮತ್ತೆ ಬರ್ತಿದ್ದಾನೆ ಶ್ರೀಕಾಂತ್ ತಿವಾರಿ; ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಡೇಟ್ ರಿವೀಲ್
‘ಫ್ಯಾಮಿಲಿ ಮ್ಯಾನ್’ ಸರಣಿಯಲ್ಲಿ ಶ್ರೀಕಾಂತ್ ತಿವಾರಿ ಪಡೋ ಕಷ್ಟಗಳು ಒಂದೆರಡಲ್ಲ. ಅದು ಈ ಸರಣಿಯಲ್ಲೂ ಮುಂದುವರಿದಿದೆ. ಶ್ರೀಕಾಂತ್ ಹಾಗೂ ಜೆಕೆ ನಡುವಿನ ಕೆಮಿಸ್ಟ್ರಿ ಕೂಡ ಗಮನ ಸೆಳೆಯುವ ರೀತಿಯಲ್ಲಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.
ರಂದು ಪ್ರಕಟಿಸಲಾಗಿದೆ – 2:45 pm, ಶುಕ್ರ, 7 ನವೆಂಬರ್ 25