
ಈ ಕಾರ್ಯಕ್ರಮದ ರೂವಾರಿ ಪೂಜ್ಯ ಸ್ವಾಮೀಜಿ ಜಪಾನಂದಜಿ ಮಹಾರಾಜರಿಂದ ಕಳೆದ ಮೂರು ವರುಷಗಳಿಂದ ಪ್ರತೀತಿಂಗಳಿಗೊಮ್ಮೆ ನಡುಸುತ್ತಾಬಂದಿರುತ್ತದೆ. ಇಂದಿನ ಕಾರ್ಯಕ್ರಮವು ಪ್ರಖ್ಯಾತ ಮನೋವಿಜ್ಞಾನಿಗಳಾದ, ಹಾಗೂ ಪದ್ಮಶ್ರೀ ವಿಜೇತ ಡಾ. ಸಿ. ಆರ್. ಚಂದ್ರಶೇಖರ ರವರು ನಡೆಸಿಕೊಟ್ಟರು. ಕಾರ್ಯಕ್ರಮವು ತುಮಕೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನೆರವೇರಿತು. ದಿವ್ಯಸಾ ನಿಧ್ಯವನ್ನು ಪೂಜ್ಯ ಸ್ವಾಮೀಜಿ ಜಪಾನಂದಜಿ ವಹಿಸಿದ್ದರು. ಈ ವಿಶೇಷಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮೀಜಿರವರು “ಸ್ವಾಮೀ ವಿವೇಕಾನಂದರ ದೃಷ್ಟಿಯಲ್ಲಿ ಮನೋವಿಜ್ಞಾನ ” swami Vivekaananda’s view on Psycology ” ಎಂಬ ವಿಷಯದ ಮೇಲೆ ಅದ್ಭುತವಾಗಿ ಉಪನ್ಯಾಸ ನೀಡಿದ್ದು ಎಲ್ಲರ ಮೆಚ್ಚಿಗೆಗೆ ಪಾತ್ರವಾಯಿತು. ನಂತರ ಉಪನ್ಯಾಸ ನೀಡಿದ ಪ್ರಖ್ಯಾತ ಮನೋವಿ ಜ್ಞಾನಿಗಳಾದ ಡಾ. ಚಂದ್ರಶೇಖರ್ ರವರು ” ಯುವಜನತೆ – ಮನೋವಿಜ್ಞಾನ “ಎಂಬ ವಿಷಯದಮೇಲೆ ಅತ್ಯಾ ಕರ್ಷವಾಗಿ ಮನಮುಟ್ಟು ವಂತೆ ಮಾತನಾಡಿದರು. ಕುಲಪತಿ ಪ್ರೊ. ವೆಂಕಟೇಶ್ವರುಲುರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕಳೆದ ಮೂರುವರುಷಗಳಿಂದ ಪೂಜ್ಯ ಜಪಾನಂದಜಿ ಮ ಹಾರಾಜರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರೇರಣಾ ಉಪನ್ಯಾಸಮಾಲೆ ರಾಜ್ಯದಲ್ಲಿಯೇ ಏಕೈಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರೊಂದಿಗೆ ಪ್ರತಿದಿನ ಸುಮಾರು 4000 ವಿಧ್ಯಾರ್ಥಿ/ವಿಧ್ಯಾರ್ಥಿ ನಿಯರಿಗೆ ಮಧ್ಯಾನ್ಹ ಭೋಜನವನ್ನು ವಿತರಿಸುವ ಯೋಜನೇಯ ನೇತೃತ್ವ ವನ್ನು ರಾಷ್ಟ್ರದಲ್ಲಿಯೇ ಪ್ರಪ್ರ ಥಮವಾಗಿ ವಹಿಸಿಕೊಂಡು ಯಶಸ್ವಿಯಾಗಿ ನಡೆಸಿತ್ತಿರುವುದನ್ನು ಸ್ಮರಿಸಿದರು. ಒಟ್ಟಿನಲ್ಲಿ ನೂತನ ಶೈಕ್ಷಣಿಕ ವರುಷ ಅರ್ಥಘರ್ಭಿತವಾಗಿ ಆರಂಭವಾಯಿತು ಎನ್ನಬಹುದು.
ನಂತರ ಅತಿಥಿಗಳೊಂದಿಗೆ ಮಧ್ಯಾಹ್ನ ದ ಭೋಜನಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಜನೆಯ ವಿವರವನ್ನು ನೀಡಲಾಯಿತು.