Headlines

ಮುಗಿಯಿತು ‘ದಿ ಕೇರಳ ಸ್ಟೋರಿ 2’ ಸಿನಿಮಾದ ಆಟ: ಅಂತಿಮವಾಗಿ ಆದ ಕಲೆಕ್ಷನ್ ಎಷ್ಟು?

ಮುಗಿಯಿತು ‘ದಿ ಕೇರಳ ಸ್ಟೋರಿ 2’ ಸಿನಿಮಾದ ಆಟ: ಅಂತಿಮವಾಗಿ ಆದ ಕಲೆಕ್ಷನ್ ಎಷ್ಟು?


ಮುಗಿಯಿತು 'ದಿ ಕೇರಳ ಸ್ಟೋರಿ 2' ಸಿನಿಮಾದ ಆಟ: ಅಂತಿಮವಾಗಿ ಆದ ಕಲೆಕ್ಷನ್ ಎಷ್ಟು?

ಬಾಲಿವುಡ್ನ ವಿವಾದಾತ್ಮಕ ‘ದಿ ಕೇರಳ ಸ್ಟೋರಿ 2’ (ಕೇರಳ ಕಥೆ 2) ಸಿನಿಮಾ ಈಗ ಸೈಲೆಂಟ್ ಆಗಿದೆ. ಬಿಡುಗಡೆಗೂ ಮುನ್ನ ಈ ಸಿನಿಮಾ ಸಖತ್ ಸದ್ದು ಮಾಡಿತ್ತು. ಆದರೆ ‘ಧುರಂಧರ 2’ (ಧುರಂಧರ 2) ಬಿಡುಗಡೆ ಆದ ಬಳಿಕ ‘ದಿ ಕೇರಳ ಸ್ಟೋರಿ 2’ ಸಿನಿಮಾದ ಆಟ ಅಂತ್ಯವಾಗಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾದ ಪ್ರದರ್ಶನ ಕೊನೆಗೊಳ್ಳುತ್ತದೆ. ಉಲ್ಕಾ ಗುಪ್ತಾ, ಐಶ್ವರ್ಯಾ ಓಜಾ ಮತ್ತು ಅದಿತಿ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಯ ಮಟ್ಟ ತಲುಪುವಲ್ಲಿ ವಿಫಲವಾಗಿದೆ.

ಕಾಮಾಕ್ಯ ನಾರಾಯಣ್ ಸಿಂಗ್ ಅವರು ನಿರ್ದೇಶನ ಮಾಡಿದ ‘ದಿ ಕೇರಳ ಸ್ಟೋರಿ 2’ ಚಿತ್ರವು ಭಾರತದ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 42.10 ಕೋಟಿ ರೂಪಾಯಿ ಗಳಿಸಿದೆ. ತನ್ನ ನಾಲ್ಕನೇ ವಾರದಲ್ಲಿ ಸಿನಿಮಾ ಕೇವಲ 60 ಲಕ್ಷ ರೂಪಾಯಿ ಗಳಿಸಿದೆ. ಹಿಂದಿನ ವಾರಗಳಿಗೆ ಇದು ಭಾರಿ ಕುಸಿತ. ಭಾರಿ ಕಲೆಕ್ಷನ್ ಮಾಡುವ ನಿರೀಕ್ಷೆ ಹೊಂದಿದ್ದ ಈ ಸಿನಿಮಾ ಹಾಫ್ ಸೆಂಚುರಿ ಬಾರಿಸಲು ಸಾಧ್ಯವಾಗಿಲ್ಲ.

‘ದಿ ಕೇರಳ ಸ್ಟೋರಿ 2’ ಸಿನಿಮಾದ ಈ ದಿಢೀರ್ ಕುಸಿತಕ್ಕೆ ಪ್ರಮುಖ ಕಾರಣ ರಣವೀರ್ ಸಿಂಗ್ ಅಭಿನಯದ ‘ಧುರಂಧರ 2’ ಚಿತ್ರ. ಹೌದು, ಈ ಸಿನಿಮಾ ಬಿಡುಗಡೆಯಾದ ನಂತರ ಚಿತ್ರಮಂದಿರಗಳಲ್ಲಿ ‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಇದ್ದ ಹೆಚ್ಚಿನ ಪರದೆಗಳನ್ನು ಕಸಿದುಕೊಳ್ಳಲಾಯಿತು. ಒಂದು ವೇಳೆ ‘ಧುರಂಧರ 2’ ಪೈಪೋಟಿ ಇಲ್ಲದಿದ್ದರೆ, ಈ ಸುಲಭವಾಗಿ 50 ಕೋಟಿ ರೂಪಾಯಿ ಸಿನಿಮಾ ದಾಟುತ್ತದೆ.

2023 ರಲ್ಲಿ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಮೊದಲ ಭಾಗವು 6.75 ಕೋಟಿ ರೂಪಾಯಿ ಓಪನಿಂಗ್ ಸೇರಿತ್ತು. ಅಂತಿಮವಾಗಿ 220 ಕೋಟಿ ರೂಪಾಯಿ ಬಾಚಿಕೊಂಡು ಬ್ಲಾಕ್‌ಬಸ್ಟರ್ ಎನಿಸಿಕೊಂಡಿತ್ತು. ಆದರೆ, ಅದರ ಸೀಕ್ವೆಲ್ ಆ ಮಟ್ಟದ ಮ್ಯಾಜಿಕ್ ಮಾಡಲು ಸಾಧ್ಯವಾಗಿಲ್ಲ. ಆದರೂ, ಚಿತ್ರದ ಬಜೆಟ್ ಕಡಿಮೆ ಇರುವ ಕಾರಣ ಇದು ಹಿಟ್ ಸಿನಿಮಾ ಎಂದೆನ್ನಿಸುತ್ತದೆ.

ಇದನ್ನೂ ಓದಿ: ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು

ಬಿಡುಗಡೆಗೂ ಮೊದಲು ‘ದಿ ಕೇರಳ ಸ್ಟೋರಿ 2’ ಸಿನಿಮಾದ ಮೇಲೆ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ಸಿನಿಮಾಗೆ ಕೇರಳದಲ್ಲಿ ಬಹಳ ವಿರೋಧ ವ್ಯಕ್ತವಾಗಿತ್ತು. ಈ ಪ್ರಕರಣವು ಕೋರ್ಟ್ ಮೆಟ್ಟಿಲೇರಿತ್ತು. ಅನೇಕ ಕಡೆಗಳಲ್ಲಿ ಈ ಸಿನಿಮಾದ ಶೋ ರದ್ದಾಯಿತು. ನೆಗೆಟಿವ್ ವಿಮರ್ಶೆ ಕೂಡ ಸಿಕ್ಕಿದರೂ ದೊಡ್ಡ ಮಟ್ಟದ ಕಲೆಕ್ಷನ್ ಆಗಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *