ಮತ್ತೆ ಬರಲಿದೆ ‘ದಿ ಕೇರಳ ಸ್ಟೋರಿ’; ಹೊಸ ವರ್ಷಕ್ಕೆ ಸೀಕ್ವೆಲ್ ರೆಡಿ

ಮತ್ತೆ ಬರಲಿದೆ ‘ದಿ ಕೇರಳ ಸ್ಟೋರಿ’; ಹೊಸ ವರ್ಷಕ್ಕೆ ಸೀಕ್ವೆಲ್ ರೆಡಿ


ಬಾಲಿವುಡ್‌ನಲ್ಲಿ ಹಲವು ಸಿನಿಮಾಗಳು ವಿವಾದ ಸೃಷ್ಟಿಸಿವೆ. ಹಲವು ಸ್ಥಳಗಳಲ್ಲಿ ಸಿನಿಮಾಗಳನ್ನು ನಿಷೇಧಿಸಲಾಗಿದೆ. ಅಂತಹ ಒಂದು ಸಿನಿಮಾ ‘ದಿ ಕೇರಳ ಸ್ಟೋರಿ’. ಈ ಸಿನಿಮಾದಿಂದ ಒಂದು ಭಯಾನಕ ವಾಸ್ತವ ಬೆಳಕಿಗೆ ಬಂದಿತ್ತು. 2023ರಲ್ಲಿ ಬಿಡುಗಡೆಯಾದ ಸಿನಿಮಾ ‘ಲವ್ ಜಿಹಾದ್’ ವಿಷಯವನ್ನು ಆಧರಿಸಿದೆ. ಇದು ಹಲವು ಕಡೆಗಳಲ್ಲಿ ಬ್ಯಾನ್ ಆಯಿತು. ಸಿನಿಮಾ ವಿವಾದದಲ್ಲಿ ಸಿಲುಕಿದ್ದರೂ, ಸಿನಿಮಾ ಸಾಕಷ್ಟು ಹಣ ಗಳಿಸಿತು. ಸುದೀಪ್ತೋ ಸೇನ್ ನಿರ್ದೇಶನದ ಈ ಸಿನಿಮಾದಲ್ಲಿ ಅದಾ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ ಸೀಕ್ವೆಲ್ ಬಿಡುಗಡೆಯಾಗಲಿದೆ.

‘ದಿ ಕೇರಳ ಸ್ಟೋರಿ’ ಮುಂದುವರಿದ ಭಾಗದ ಚಿತ್ರ ಪೂರ್ಣಗೊಂಡಿದೆ. ಈಗ ಅಭಿಮಾನಿಗಳು ‘ದಿ ಕೇರಳ ಸ್ಟೋರಿ 2’ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ಈ ಚಿತ್ರ 2026ರಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

‘ದಿ ಕೇರಳ ಸ್ಟೋರಿ’ ಮುಂದುವರಿದ ಭಾಗವನ್ನು ಕೇರಳದಲ್ಲಿ ಚಿತ್ರೀಕರಿಸಲಾಗಿದೆ, ವರದಿಗಳ ಪ್ರಕಾರ, ಈ ಭಾಗವು ಗಂಭೀರ ಮತ್ತು ಕರಾಳ ಕಥೆಯನ್ನು ಹೊಂದಿದೆ. ದಿ ಕೇರಳ ಸ್ಟೋರಿ 2′ ಪಾತ್ರವರ್ಗ ಮತ್ತು ಇತರ ವಿವರಗಳನ್ನು ಗೌಪ್ಯವಾಗಿಡಲಾಗಿದೆ. ‘ದಿ ಕೇರಳ ಸ್ಟೋರಿ 2’ ಚಿತ್ರಗಳನ್ನು ಬಹಳ ಸುರಕ್ಷಿತ ರೀತಿಯಲ್ಲಿ ಮಾಡಲಾಗಿದೆ. ನಿರ್ಮಾಪಕ ವಿಪುಲ್ ಅಮೃತ್ ಲಾಲ್ ಶಾ ಚಿತ್ರೀಕರಣದ ಸಮಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡರು.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ಇನ್ನಷ್ಟು ರಾಷ್ಟ್ರ ಪ್ರಶಸ್ತಿ ಸಿಗಬೇಕು: ವಿವಾದದ ನಡುವೆ ನಿರ್ದೇಶಕರ ಹೇಳಿಕೆ

ಶೂಟಿಂಗ್ ಸೆಟ್‌ನಲ್ಲಿ ಕಟ್ಟುನಿಟ್ಟಿನ ಭದ್ರತೆಯನ್ನು ಇರಿಸಲಾಗಿದೆ ಚಿತ್ರದ. ಸೆಟ್‌ಗೆ ಫೋನ್ ತರುವಂತೆ ಇಲ್ಲ. ಚಿತ್ರೀಕರಣದ ಸಮಯದಲ್ಲಿ, ನಟರು ಮತ್ತು ಇತರರಿಗೆ ಫೋನ್‌ನಲ್ಲಿ ಮಾತನಾಡಲು ಸಹ ಅವಕಾಶವಿರಲಿಲ್ಲ. ಸೆಟ್ ನಿಂದ ಯಾವುದೇ ಸೋರಿಕೆಯಾಗದಂತೆ ವಿಶೇಷ ಕಾಳಜಿ ವಹಿಸಲಾಯಿತು. ಸಿನಿಮಾ ಫೆಬ್ರವರಿ 27 ರಂದು ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *