Video: ಶಾಲೆ ಬಿಟ್ಟೊಡನೆ ಪುಸ್ತಕವನ್ನು ಚರಂಡಿಗೆ ಎಸೆದು ಹೋದ ಪುಟಾಣಿ

Video: ಶಾಲೆ ಬಿಟ್ಟೊಡನೆ ಪುಸ್ತಕವನ್ನು ಚರಂಡಿಗೆ ಎಸೆದು ಹೋದ ಪುಟಾಣಿ


ಈಗಿನ ಮಕ್ಕಳಿಗೂ (ಮಕ್ಕಳು) ಶಾಲೆಗೆ ಹೋಗೋದು, ಓದೋದು, ಮನೆ ವರ್ಕ್ (ಮನೆ ಕೆಲಸ) ಮಾಡುವುದೆಂದರೆ ದೊಡ್ಡ ತಲೆ ನೋವು. ಅದರಲ್ಲೂ ಈಗಿನ ಕಾಲದ ಮಕ್ಕಳಿಗೆ ಮುದ್ದು ಜಾಸ್ತಿ. ಮಕ್ಕಳು ಹೋಮ್ ವರ್ಕ್ ಮಾಡಲ್ಲ ಎಂದು ಹಠ ಹಿಡಿದರೆ ಅಮ್ಮನೇ ಹೋಮ್ ವರ್ಕ್ ಮಾಡಿಸಿಕೊಡುವಷ್ಟು ಮುದ್ದು ಹೆಚ್ಚಾಯಿತು. ಆದರೆ ಈ ವಿಡಿಯೋ ನೋಡಿದ ಮೇಲೆ ಈ ಪುಟಾಣಿಗೆ ಎಷ್ಟು ಟೆನ್ಶನ್ ಇದೆ ಎಂದು ತಿಳಿಯುತ್ತೆ. ಹೌದು, ಶಾಲೆಯಿಂದ ಮನೆಗೆ ಹೊರಟ ಪುಟಾಣಿಯೂ ಬ್ಯಾಗ್‌ನಲ್ಲಿದ್ದ ಪುಸ್ತಕ ತೆಗೆದು ಚರಂಡಿಗೆ ಎಸೆದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಪುಟಾಣಿ ಮಾಡಿದ ಕೆಲಸ ನೋಡಿ ಶಾಕ್ ಆಗಿದ್ದಾರೆ.

Bineesh kodiyeri ಹೆಸರಿನ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪುಟಾಣಿಯೊಂದು ಶಾಲೆಯಿಂದ ಮನೆಗೆ ಹೋಗುತ್ತಿರುವುದನ್ನು ಕಾಣಬಹುದು. ಬ್ಯಾಗ್ ಹಾಕಿಕೊಂಡ ಈ ಪುಟ್ಟ ಹುಡುಗಿ ಪಕ್ಕ ಬಂದು ನಿಲ್ಲುತ್ತಾಳೆ. ಆ ಬಳಿಕ ತನ್ನ ಬ್ಯಾಗ್‌ನಲ್ಲಿದ್ದ ಪುಸ್ತಕ ತೆಗೆದು ತನ್ನನ್ನು ಯಾರಾದರೂ ನೋಡುತ್ತಾರೆಯೇ ಎಂದು ಖಚಿತ ಪಡಿಸಿಕೊಂಡಿದ್ದು, ಪುಸ್ತಕವನ್ನು ಮೆಲ್ಲನೆ ಚರಂಡಿಯೊಳಗೆ ಹಾಕುತ್ತಾಳೆ. ಕೊನೆಗೆ ಖುಷಿಯಿಂದಲೇ ಕುಣಿಯುತ್ತ ಮನೆಯತ್ತ ಹೋಗುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಲಿಫ್ಟ್‌ನಲ್ಲಿ ಸಿಲುಕಿದ್ದ ಕಂದಮ್ಮಗಳನ್ನು ರಕ್ಷಿಸಿ ದೇವರಾದ ಪುಟ್ಟ ಬಾಲಕಿ

ಈ ವಿಡಿಯೋ ಅಧಿಕವಾಗಿ ವೀಕ್ಷಿಸಿದ್ದು, ಒಬ್ಬ ಬಳಕೆದಾರ, ಪುಟ್ಟ ಹುಡುಗಿಯ ಐಡಿಯಾ ಅದ್ಭುತ. ಮತ್ತೊಬ್ಬರು, ಎನ್ ತಲೆ ಗುರು ಈ ಪುಟಾಣಿಯದ್ದು ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ಸಮಸ್ಯೆ ಕೊನೆಗೂ ಪರಿಹಾರ ಸಿಕ್ತು ಎಂದು ತಮಾಷೆಯಾಗಿ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 1:10 pm, ಮಂಗಳವಾರ, 24 ಫೆಬ್ರವರಿ 26



Source link

Leave a Reply

Your email address will not be published. Required fields are marked *