Sara Tendulkar wedding look: ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಂದೋಕ್ ಅವರ ವಿವಾಹ ಸಂಭ್ರಮವು ಇಡೀ ದೇಶದ ಗಮನ ಸೆಳೆದಿದೆ. ಮಾರ್ಚ್ 5 ರಂದು ಮುಂಬೈನಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ವಧು-ವರರಿಗಿಂತಲೂ ಹೆಚ್ಚು ಸುದ್ದಿಯಾಗುತ್ತಿರುವುದು ಸಾರಾ ಲುಕ್.

ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಂದೋಕ್ ಅವರ ವಿವಾಹ ಸಮಾರಂಭದಲ್ಲಿ ಸಾರಾ ತೆಂಡೂಲ್ಕರ್ ಧರಿಸಿದ್ದ ಪಾರಂಪರಿಕ ನೆಕ್ಲೇಸ್ ಈಗ ಎಲ್ಲರ ಗಮನ ಸೆಳೆದಿದೆ.

ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಂದೋಕ್ ಮಾರ್ಚ್ 5, 2026 ರಂದು ಸರಳವಾಗಿ ವಿವಾಹವಾದರು. ಸಚಿನ್ ಮತ್ತು ಅಂಜಲಿ ತೆಂಡೂಲ್ಕರ್ ದಂಪತಿಯು ಮುಂಬೈನ ‘ದಿ ಸೇಂಟ್ ರೆಜಿಸ್’ ಹೋಟೆಲ್‌ನಲ್ಲಿ ಅದ್ಧೂರಿ ಔತಣಕೂಟವನ್ನು ಏರ್ಪಡಿಸಿದ್ದರು. ಈ ಸಮಾರಂಭದಲ್ಲಿ ಸಿನಿಮಾ, ಕ್ರೀಡೆ ಮತ್ತು ಉದ್ಯಮ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು.

ಮದುವೆಯಲ್ಲಿ ವಧು-ವರರು ಕೆಂಪು ಬಣ್ಣದ ಉಡುಪಿನಲ್ಲಿ ಕಂಗೊಳಿಸಿದರೆ, ಸಾರಾ ತೆಂಡೂಲ್ಕರ್ ಅವರು ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿದ ಸೀರೆ ಮತ್ತು ಸುನಿತಾ ಶೇಖಾವತ್ ಅವರ ಸಂಗ್ರಹದ ‘ಮೀನಾಕರಿ’ ನೆಕ್ಲೇಸ್ ಧರಿಸಿ ಎಲ್ಲರ ದೃಷ್ಟಿ ತಮ್ಮತ್ತ ಸೆಳೆಯುವಂತೆ ಮಾಡಿದರು.

ಸೆಲೆಬ್ರಿಟಿ ಜ್ಯುವೆಲ್ಲರಿ ತಜ್ಞ ಪ್ರಿಯಾಂಶು ಗೋಯೆಲ್ ಅವರ ಪ್ರಕಾರ, ಸಾರಾ ಅವರು ಜೈಪುರದ ಸುನಿತಾ ಶೇಖಾವತ್ ವಿನ್ಯಾಸಗೊಳಿಸಿದ ‘ಕಾರ್ನೇಶನ್ ರಿವರ್ಸಿಬಲ್’ (ಎರಡೂ ಬದಿ ಧರಿಸಬಹುದಾದ) ನೆಕ್ಲೇಸ್ ಧರಿಸಿದ್ದರು. ಈ ನೆಕ್ಲೇಸ್ ಅಂದಾಜು ಬೆಲೆ 40 ರಿಂದ 60 ಲಕ್ಷ ರೂಪಾಯಿ. ನೆಕ್ಲೇಸ್ ಮುಂಭಾಗದಲ್ಲಿ ಸಾಂಪ್ರದಾಯಿಕ ಕುಂದನ್ ಸೆಟ್ ಪೋಲ್ಕಿಗಳು ಮತ್ತು ಹೂವಿನ ವಿನ್ಯಾಸಗಳಿದ್ದರೆ, ಹಿಂಭಾಗದಲ್ಲಿ ಅದ್ಭುತವಾದ ಮೀನಾಕರಿ ವರ್ಕ್ ಇದೆ.

ಇಂತಹ ಒಂದು ನೆಕ್ಲೇಸ್ ಡಿಸೈನ್ ಕಂಪ್ಲೀಟ್ ಮಾಡಲು ಸುಮಾರು 360 ಗಂಟೆ ಹಾರ್ಡ್ ವರ್ಕ್ ಮಾಡಬೇಕಾಗುತ್ತದೆ.ಇದರಲ್ಲಿ ಕೊಲಂಬಿಯನ್ ಪಚ್ಚೆಗಳು (Emeralds) ಮತ್ತು ಸೌತ್ ಸೀ ಮುತ್ತುಗಳನ್ನು ಬಳಸಲಾಗಿದೆ. ಇದು ಪರಂಪರೆ ಮತ್ತು ಆಧುನಿಕತೆಯ ಸೊಗಸಾದ ಮಿಶ್ರಣವಾಗಿದೆ.

ಸಾರಾ ತೆಂಡೂಲ್ಕರ್ ಅವರು ಧರಿಸಿದ್ದ ಗುಲಾಬಿ ಬಣ್ಣದ ಸೀರೆಯು ಅರ್ಜುನ್ ಮದುವೆಯಲ್ಲಿ ರಿಚ್ ಲುಕ್ ನೀಡಿತು. ಈ ಆರು ಗಜದ ಸೀರೆಯ ಜೊತೆಗೆ ಅಂಚಿನಲ್ಲಿ ಮುತ್ತುಗಳ ಹನಿಗಳಂತಹ ವಿನ್ಯಾಸವಿದ್ದ ರೋಸ್ ಪಿಂಕ್ ಬಣ್ಣದ ಬ್ಲೌಸ್ ಧರಿಸಿದ್ದರು. ತಮ್ಮ ಉಡುಪು ಮತ್ತು ಆಭರಣಗಳಿಗೆ ಒಪ್ಪುವಂತೆ ‘ಡ್ಯೂಯಿ ಮತ್ತು ಗ್ಲಿಟ್ಟರಿ’ ಮೇಕಪ್ ಮಾಡಿಕೊಂಡಿದ್ದರು. ಅಲ್ಲದೆ, ಕೈಯಲ್ಲಿನ ಮೆಹಂದಿ ವಿನ್ಯಾಸ, ಸಾಲಾಗಿ ಧರಿಸಿದ್ದ ಬಳೆಗಳು ಮತ್ತು ಮಧ್ಯಭಾಗದಲ್ಲಿ ಸೀಳಿದ ಕೇಶವಿನ್ಯಾಸವು (centre-parted hairdo) ಅವರ ಸಾಂಪ್ರದಾಯಿಕ ಸೌಂದರ್ಯವನ್ನು ಮತ್ತೊಂದು ಲೆವೆಲ್‌ಗೆ ಕೊಂಡೊಯ್ದಿತ್ತು.
View this post on Instagram
A post shared by Varinder Chawla (@varindertchawla)

Source link