ರೆಡ್ ವೈನ್ (ಕೆಂಪು ವೈನ್) ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಇದು ಹಣ್ಣುಗಳಿಂದ ತಯಾರಾಗುವುದರಿಂದ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ ಎಂದು ನಂಬಲಾಗಿದೆ. ಆರೋಗ್ಯಕ್ಕೂ ಒಳ್ಳೆಯದು ಎಂದು ಆದರೆ ಇದರ ಬಗ್ಗೆ ನಾವು ಎಂದಾದರೂ ಯೋಚಿಸಿದ್ದೇವೆಯೇ? ನಿಜವಾಗಿಯೂ ಇದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿ ಇರಬಹುದೇ? ಹೌದು. ನಾವು ಯಾರೂ ಕೂಡ ಇಂತಹ ವಿಷಯಗಳ ಬಗ್ಗೆ ಹೆಚ್ಚಿನ ತರ್ಕಕ್ಕೆ ಮುಂದಾಗುವುದಿಲ್ಲ. ಯಾರಾದರೂ ಏನನ್ನಾದರೂ ಹೇಳಿದರೆ ಅದೇ ಸತ್ಯ ಎಂದು ನಂಬುತ್ತೇವೆ. ಹಾಗಾದರೆ ರೆಡ್ ವೈನ್ ಆರೋಗ್ಯಕ್ಕೆ ಒಳ್ಳೆಯದಲ್ಲವೇ? ನಿಜವಾಗಿಯೂ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯೇ ಎಂಬಿತ್ಯಾದಿ ವಿಷಯಗಳ ಕುರಿತ ಮಾಹಿತಿ ಈ ಸ್ಟೋರಿಯಲ್ಲಿದೆ.
ಮಿತ ಸೇವನೆ ಮಾಡಿ
ಕೆಂಪು ವೈನ್ ಅಥವಾ ರೆಡ್ ವೈನ್ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳದಿದ್ದರೆ. ಆದರೆ ಇದನ್ನು ಮಿತವಾಗಿ ಸೇವಿಸಿದರೆ ಮಾತ್ರ ಒಳ್ಳೆಯದು. ಅತಿಯಾಗಿ ಸೇವನೆ ಮಾಡಿದರೆ ಅಮೃತವೂ ವಿಷವಾಗುವಂತೆ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಜೊತೆಗೆ ಇದರಲ್ಲಿ ಉತ್ಕರ್ಷಣ ನಿರೋಧಕಗಳಿದ್ದು ಇದರ ಸೇವನೆಯಿಂದ ಹೃದಯ ಮತ್ತು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ಆಲ್ಕೋಹಾಲ್ ಸೇವನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು, ಆದ್ದರಿಂದ ಮಿತವಾಗಿ ಕುಡಿಯುವುದು ಒಳ್ಳೆಯದು.
ಇದನ್ನೂ ಓದಿ: ರೆಡ್ ವೈನ್ ಕುಡಿಯಬೇಕಾಗಿಲ್ಲ, ಮುಖಕ್ಕೆ ಹಚ್ಚಿದರೆ ಸಾಕು ಈ ಸಮಸ್ಯೆ ಬರಲ್ಲ
ಹಣ್ಣುಗಳ ಸೇವನೆ ಮಾಡಿ ರೆಸ್ವೆರಾಟ್ರೊಲ್ ಪಡೆಯಿರಿ
ಆಲ್ಕೋಹಾಲ್ ಆರೋಗ್ಯಕರ ಪಾನೀಯ ಎಂದು ಯಾವಾಗಲೂ ಶಿಫಾರಸು ಆಗಿಲ್ಲ. ಆರೋಗ್ಯ ತಜ್ಞೆ ಸೋನಲ್ ಹಾಲೆಂಡ್ ಹೇಳುವಂತೆ ವೈನ್ ಹೃದಯಕ್ಕೆ ಒಳ್ಳೆಯದು ಎಂದು ಹೇಳಿದರು. ಆದರೆ ಅತಿಯಾಗಿ ಕೆಂಪು ವೈನ್ ಕುಡಿಯುವುದು ಅಷ್ಟೊಂದು ಪ್ರಯೋಜನಕಾರಿಯಲ್ಲ. ಆಹಾರದಲ್ಲಿ ಹಣ್ಣುಗಳು, ದ್ರಾಕ್ಷಿ ಮತ್ತು ಬೀಜಗಳನ್ನು ಸೇರಿಸುವ ಮೂಲಕ ರೆಸ್ವೆರಾಟ್ರೊಲ್ ಪಡೆಯಬಹುದು. ಯಾವುದೇ ರೆಡ್ ವೈನ್ ಅನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು. ಅದೇ ರೀತಿ, ಮದ್ಯಪಾನ ಮಾಡುವವರಲ್ಲಿ ಸಿಹಿ ವೈನ್ ಅಗ್ಗ ಎಂಬ ತಪ್ಪು ಕಲ್ಪನೆ ಇದೆ ಆದರೆ ಇದು ನಿಜವಲ್ಲ. ಅನೇಕ ರೀತಿಯ ಸಿಹಿ ವೈನ್ಗಳಿದ್ದು ಅದರಲ್ಲಿ ಕೆಲವು ತುಂಬಾ ದುಬಾರಿಯಾಗಿದೆ. ಅದರಲ್ಲಿಯೂ ಫ್ರಾನ್ಸ್ ಮತ್ತು ಹಂಗೇರಿಯ ವೈನ್ಗಳು ಅವುಗಳ ಗುಣಮಟ್ಟದ ದುಬಾರಿಯಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ