Headlines

ಕಲೆಕ್ಷನ್ ವಿಷಯದಲ್ಲಿ ಎಡವಿದ ‘ರಾಜಾಸಾಬ್’; ಪ್ರಭಾಸ್ ಫ್ಯಾನ್ಸ್​ಗೆ ಶಾಕ್

ಕಲೆಕ್ಷನ್ ವಿಷಯದಲ್ಲಿ ಎಡವಿದ ‘ರಾಜಾಸಾಬ್’; ಪ್ರಭಾಸ್ ಫ್ಯಾನ್ಸ್​ಗೆ ಶಾಕ್


ಭಾನುವಾರದ ಕಲೆಕ್ಷನ್ ವಿಷಯದಲ್ಲಿ ‘ರಾಜಾಸಾಬ್’ ಸಿನಿಮಾ (ರಾಜಾ ಸಾಬ್) ಎಡವಿದೆ. ಮೊದಲ ದಿನ ಅದ್ದೂರಿ ಕಲೆಕ್ಷನ್ ಮಾಡಿದ್ದ ಈ ಚಿತ್ರ ನಂತರದ ದಿನಗಳಲ್ಲಿ ಕುಸಿತದ ಹಾಡು ಹಿಡಿಯಿತು. ಮೊದಲ ದಿನದ ದುಬಾರಿ ಟಿಕೆಟ್ ದರ ಚಿತ್ರಕ್ಕೆ ಸಹಕಾರಿ ಆಗಿದೆ. ಆದರೆ, ಸಿನಿಮಾ ನೋಡಿದ ಪ್ರೇಕ್ಷಕ ಖುಷಿಯಾಗಿಲ್ಲ. ಈ ಕಾರಣದಿಂದಲೇ ಸಿನಿಮಾದ ಗಳಿಕೆ ಕುಸಿತದ ಹಾದಿ ಹಿಡಿದಿದೆ. ಈ ಚಿತ್ರದ ಒಟ್ಟಾರೆ ಗಳಿಕೆ ಎಷ್ಟು ಎಂಬ ಬಗ್ಗೆ ಇಲ್ಲಿದೆ ವಿವರ.

‘ರಾಜಾಸಾಬ್’ ಸಿನಿಮಾ ಜನವರಿ 9ರಂದು ರಿಲೀಸ್ ಆಯಿತು. ಈ ಸಿನಿಮಾ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿತ್ತು. ಇದೇ ಮೊದಲ ಬಾರಿಗೆ ಅವರು ಈ ಶೈಲಿಯನ್ನು ಪ್ರಯತ್ನಿಸಿದರು. ಈ ಸಿನಿಮಾ ಜನರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈಗ ಸಿನಿಮಾ ಭಾನುವಾರ ಕೇವಲ 20 ಕೋಟಿ ರೂಪಾಯಿಗಳಿಗೆ ಬಂದಿದೆ.

‘ರಾಜಾಸಾಬ್’ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 53 ಕೋಟಿ ರೂಪಾಯಿ. ಇದಕ್ಕೆ ಕಾರಣ ದುಬಾರಿ ಟಿಕೆಟ್ ದರ. ತೆಲುಗಿನಿಂದ 47 ಕೋಟಿ ರೂಪಾಯಿ ಆದರೆ, ಹಿಂದಿಯಿಂದ 6 ಕೋಟಿ ರೂಪಾಯಿ ಹರಿದು ಬಂದಿತ್ತು. ಇದಕ್ಕೆ ಕಾರಣವೂ ಇದೆ. ಹಿಂದಿಯಲ್ಲಿ ಪ್ರಭಾಸ್ ಗೆ ದೊಡ್ಡ ಅಭಿಮಾನಿ ಬಳಗವಿದೆ. ಅವರು ಸಿನಿಮಾ ನೋಡಿದ್ದಾರೆ.

ಭಾನುವಾರ ಮಾತ್ರ ಥಿಯೇಟರ್‌ಗೆ ಹೋಗುವ ಸಂಖ್ಯೆ ಕಡಿಮೆಯಾಗಿದೆ. ಮೊದಲ ದಿನದ ಸಿನಿಮಾ ಟಿಕೆಟ್ ದರಕ್ಕೆ ಹೋಲಿಕೆ ಮಾಡಿದರೆ ಟಿಕೆಟ್ ದರ ಕೂಡ ಕಡಿಮೆಯಾಗಿದೆ.ಹೀಗಾಗಿ ಗಳಿಕೆಯಲ್ಲಿ ಇಳಿಕೆ ಕಂಡಿದೆ. ಭಾನುವಾರದ ಚಿತ್ರದ ಕಲೆಕ್ಷನ್ ಕೇವಲ 20 ಕೋಟಿ ರೂಪಾಯಿ ಮಾತ್ರ. ಒಟ್ಟಾರೆ 108 ಕೋಟಿ ರೂಪಾಯಿ ಆಗಿದೆ ಚಿತ್ರದ.

ಇದನ್ನೂ ಓದಿ: ಪ್ರಭಾಸ್ ನಟನೆಯ ‘ರಾಜಾಸಾಬ್’ ಚಿತ್ರದ ನಾಲ್ಕು ದಿನದ ಚಿತ್ರೀಕರಣಕ್ಕೆ ಖರ್ಚಾಯ್ತು ನಾಲ್ಕು ಕೋಟಿ ರೂಪಾಯಿ

‘ಕಲ್ಕಿ 2898 ಎಡಿ’ ಸೂಪರ್ ಹಿಟ್ ಆದ ಬಳಿಕ ಪ್ರಭಾಸ್ ಒಪ್ಪಿಕೊಂಡ ಸಿನಿಮಾ ‘ರಾಜಾಸಾಬ್. ಈ ಚಿತ್ರವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ರಿಲೀಸ್ ಗೂ ಮೊದಲು ಅವರು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಸಿನಿಮಾ ಅಂದುಕೊಂಡಷ್ಟು ಯಶಸ್ಸು ಕಾಣಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 7:05 am, ಸೋಮ, 12 ಜನವರಿ 26



Source link

Leave a Reply

Your email address will not be published. Required fields are marked *