Headlines

ಪಾಲಕ್ ಸೊಪ್ಪು ಬೇಯಿಸುವಾಗ ಮರೆತು ಕೂಡ ಈ ತಪ್ಪು ಮಾಡ್ಬೇಡಿ

ಪಾಲಕ್ ಸೊಪ್ಪು ಬೇಯಿಸುವಾಗ ಮರೆತು ಕೂಡ ಈ ತಪ್ಪು ಮಾಡ್ಬೇಡಿ

ಪಾಲಕ್ ಸೊಪ್ಪು ಬೇಯಿಸುವಾಗ ಮರೆತು ಕೂಡ ಈ ತಪ್ಪು ಮಾಡ್ಬೇಡಿ

ಪಾಲಕ್ ಸೊಪ್ಪು ಬೇಯಿಸುವಾಗ ಕೆಲವು ವಿಷಯಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗಾದ್ರೆ ಮಾತ್ರ ಪೋಷಕಾಂಶ ಸಿಗುತ್ತೆ.

ಪಾಲಕ್ ಸೊಪ್ಪಿನಲ್ಲಿ ಕಬ್ಬಿಣ, ನಾರಿನಂಶ ಹೆಚ್ಚಿದೆ. ವಿಟಮಿನ್ ಎ ಸೇರಿದಂತೆ ಅಗತ್ಯ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳಿವೆ. ಕಣ್ಣು, ಚರ್ಮ, ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಪೂರ್ಣ ಪೋಷಕಾಂಶ ಪಡೆಯಲು ಸರಿಯಾಗಿ ಬೇಯಿಸಬೇಕು.

ಪಾಲಕ್ ಸೊಪ್ಪು ಬೇಯಿಸುವಾಗ ಕೆಲವು ವಿಷಯಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಹಾಗಾದ್ರೆ ಮಾತ್ರ ಪೋಷಕಾಂಶ ಸಿಗುತ್ತೆ. ಹೆಚ್ಚು ಹೊತ್ತು ಬೇಯಿಸಿದ್ರೆ ಬಣ್ಣ, ರುಚಿ ಬದಲಾಗಿ ಪೋಷಕಾಂಶ ಕಡಿಮೆಯಾಗುತ್ತೆ. ಸರಿಯಾಗಿ ಬೇಯಿಸುವುದು ಹೇಗೆ ಅಂತ ನೋಡೋಣ.

ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಬೇಯಿಸಬೇಕು. ಆದ್ರೆ ತೊಳೆದ ನೀರನ್ನು ಬಸಿಯದೆ ಬೇಯಿಸಬಾರದು. ನೀರು ಬಸಿದ ಮೇಲೆ ಬೇಯಿಸಬೇಕು. ತೊಳೆದ ನೀರಿನಲ್ಲೇ ಬೇಯಿಸಿದ್ರೆ ಸೊಪ್ಪು ಮೆತ್ತಗಾಗಿ ಅಂಟಿಕೊಳ್ಳುತ್ತದೆ.

ಪಾಲಕ್ ಸೊಪ್ಪಿಗೆ ಉಪ್ಪನ್ನು ಕೊನೆಯಲ್ಲಿ ಹಾಕಬೇಕು. ಮೊದಲೇ ಉಪ್ಪು ಹಾಕಿದ್ರೆ ಸೊಪ್ಪು ಮೆತ್ತಗಾಗುತ್ತೆ. ಕಡಿಮೆ ಎಣ್ಣೆಯಲ್ಲಿ ಬೇಯಿಸಿದ್ರೆ ಪೋಷಕಾಂಶಗಳು ಚೆನ್ನಾಗಿ ಸಿಗುತ್ತೆ.

ಪಾಲಕ್ ಸೊಪ್ಪನ್ನು ಮುಚ್ಚಳ ಮುಚ್ಚದೆ ಬೇಯಿಸಬೇಕು. ತೊಳೆದ ಮೇಲೆ ಹೆಚ್ಚಬೇಕು. ಹೆಚ್ಚಿ ತೊಳೆದರೆ ವಿಟಮಿನ್‌ಗಳು ನಷ್ಟವಾಗುತ್ತವೆ. ತೊಳೆದು ಹೆಚ್ಚಿದರೆ ಪೋಷಕಾಂಶಗಳು ಸಿಗುತ್ತವೆ.

ಪಾಲಕ್ ಸೊಪ್ಪು ತಾಜಾ ಇದ್ದರೆ ಕಾಂಡಗಳನ್ನು ಬಿಸಾಡಬೇಡಿ. ಅದನ್ನು ಸೇರಿಸಿದರೆ ಪಲ್ಯಕ್ಕೆ ರುಚಿ ಹೆಚ್ಚುತ್ತದೆ. ಸೊಪ್ಪು ಮುದುರಿದ್ದರೆ ಕಾಂಡಗಳಿಂದ ಸಾರು/ಹುಳಿ ಮಾಡಬಹುದು.

Source link

Leave a Reply

Your email address will not be published. Required fields are marked *