Headlines

Video: ಕನ್ನಡ ಅಕ್ಷರ ಮಾಲೆಯಲ್ಲಿ ಅಡಗಿದೆ ನಗುವಿನ ಗುಟ್ಟು

Video: ಕನ್ನಡ ಅಕ್ಷರ ಮಾಲೆಯಲ್ಲಿ ಅಡಗಿದೆ ನಗುವಿನ ಗುಟ್ಟು


ನಗುವೆನ್ನೆವುದು (ನಗು) ಅದ್ಭುತ ಶಕ್ತಿ. ಮನುಷ್ಯರು ನಮಗೆ ಮಾತ್ರ ನಗುವುದಕ್ಕೆ ಸಾಧ್ಯ. ಸರ್ವ ರೋಗಕ್ಕೂ ನಗುವೊಂದೇ ಪರಿಹಾರ ಎಂಬ ಮಾತಿದೆ. ಒಬ್ಬ ವ್ಯಕ್ತಿ ಮನಸಾರೆ ನಗುವುದರಿಂದ ಆರೋಗ್ಯ ಸಮಸ್ಯೆ ಎದುರಿಸುವಲ್ಲಿ ಹಾಗೂ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುತ್ತದೆ. ಆದರೆ ಇದೀಗ ಕನ್ನಡ ಅಕ್ಷರಮಾಲೆಯಲ್ಲಿನ (ಕನ್ನಡ ಅಕ್ಷರಮಾಲೆ) ಪದಗಳ ಮೂಲಕ ಸುಂದರವಾಗಿ ನಗಬಹುದೆಂದು ನಿಮಗೆ ತಿಳಿದಿದೆ. ಹೌದು, ಅ ಯಿಂದ ಅಃ ವರೆಗೆ ನಗುವ ರೀತಿಯೂ ಬಹಳ ಸೊಗಸಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಕನ್ನಡ ಅಕ್ಷರ ಮಾಲೆಯ ಪಶು ಎಂದು ಬಳಕೆದಾರರು ಹೇಳಿದ್ದಾರೆ.

ಕನ್ನಡ ಅಕ್ಷರಮಾಲೆಯೊಂದಿಗೆ ನಗಲು ಪ್ರಯತ್ನಿಸಿ

ಎಬಿಸಿ ಚೇತನ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕನ್ನಡ ಕಿರುತೆರೆಯ ಹಿರಿಯ ನಟಿ ಶಾರದಾ ಜಿ.ಎಸ್ ಅವರು, ಅ ಯಿಂದ ಆವರೆಗೆ ನಗುವ ರೀತಿಯನ್ನು ಬಹಳ ಸೊಗಸಾಗಿ ತೋರಿಸಿಕೊಟ್ಟಿದ್ದಾರೆ. ಇಲ್ಲಿ ಅ ಯಿಂದ ಅಕ್ಷರಗಳನ್ನು ಏರಿಳಿತದೊಂದಿಗೆ ನಗುವಿನಲ್ಲಿ ಬಳಸಲಾಗಿದೆ. ಈ ವಿಭಿನ್ನವಾಗಿ ಹಾಗೂ ವಿಧವಿಧವಾಗಿ ನಗುವುದನ್ನು ಇಲ್ಲಿ ತೋರಿಸುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಶಾಲೆಗೆ ಬರಲು ಒಲ್ಲೆ ಎಂದ ಹುಡುಗನನ್ನು ಎತ್ತಿಕೊಂಡು ಹೋದ ಸಹಪಾಠಿಗಳು

ಕನ್ನಡ ಅಕ್ಷರ ಮಾಲೆಯೊಂದಿಗೆ ನಗುವಿನ ವಿಡಿಯೋ ವೈರಲ್ ಆಗುತ್ತಿದ್ದಂತೆ ನಾಲ್ಕು ಲಕ್ಷ ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ನಮ್ಮ ಕನ್ನಡ ಮಾತೃ ಭಾಷೆ. ಅದರಲ್ಲಿ ನಗುವಿನ ಮೂಲಕ ಸ್ವರ ಉಚ್ಚಾರಣೆ ಬಹಳ ಸೊಗಸಾಗಿದೆ. ಇತರರು, ನಮ್ಮ ಕನ್ನಡ ಬರಿ ಭಾಷೆ ಅಲ್ಲ, ಅದು ಒಂದು ಭಾವನೆ. ಜೀವನದ ಮೌಲ್ಯ ಮಾಪನ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಕನ್ನಡ ಕಲಿಯದೇ ಇದ್ದವರು ಹೀಗೆ ಕಲಿಯಬಹುದು. ತುಂಬಾ ಸುಲಭವಾಗಿದೆ. ಎಲ್ಲಾ ಭಾಷೆಗಳನ್ನು ಟ್ರೈ ಮಾಡಿ, ತುಂಬಾ ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ನಗುವುದಕ್ಕೆ ಇಷ್ಟೇ ಸಾಕಲ್ಲವೇ ಎಂದರೆ ಮತ್ತೆ ಕೆಲವರು ಹಾರ್ಟ್ ಸಿಂಬಲ್ ಕಳುಹಿಸುವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *