Headlines

ಸೊಂಟದ ಸುತ್ತಲೂ ಜೋತು ಬಿದ್ದಿರೋ ಕೆಟ್ಟ ಬೊಜ್ಜು ಕರಗಿಸುವ ಆರೋಗ್ಯಕರ ಜ್ಯೂಸ್ ರೆಸಿಪಿ

ಸೊಂಟದ ಸುತ್ತಲೂ ಜೋತು ಬಿದ್ದಿರೋ ಕೆಟ್ಟ ಬೊಜ್ಜು ಕರಗಿಸುವ ಆರೋಗ್ಯಕರ ಜ್ಯೂಸ್ ರೆಸಿಪಿ

ಸೊಂಟದ ಸುತ್ತಲೂ ಜೋತು ಬಿದ್ದಿರೋ ಕೆಟ್ಟ ಬೊಜ್ಜು ಕರಗಿಸುವ ಆರೋಗ್ಯಕರ ಜ್ಯೂಸ್ ರೆಸಿಪಿ
ತೂಕ ಇಳಿಸಲು ಅನಾನಸ್ ಮತ್ತು ಸೌತೆಕಾಯಿಯಿಂದ ತಯಾರಿಸಿದ ಆರೋಗ್ಯಕರ ಜ್ಯೂಸ್ ಕುಡಿಯುವುದು ಉತ್ತಮ. ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸೊಂಟದ ಸುತ್ತಲಿನ ಕೊಬ್ಬು ಕರಗುತ್ತದೆ. ಈ ಜ್ಯೂಸ್ ಹೊಟ್ಟೆ ತುಂಬಿದ ಅನುಭವ ನೀಡಿ, ನಿಶ್ಯಕ್ತಿಯನ್ನು ದೂರ ಮಾಡುತ್ತದೆ.
ತೂಕ ಇಳಿಸಲು ಸಿಕ್ಕಾಪಟ್ಟೆ ಪಯತ್ನಿಸುತ್ತಿದ್ರೆ ನಿಮಗೊಂದು ಆರೋಗ್ಯಕರವಾದ ಜ್ಯೂಸ್ ತಂದಿದ್ದೇವೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದರೆ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಬೆಳಗ್ಗೆ ಕಸರತ್ತು ಅಥವಾ ವ್ಯಾಯಾಮ ಅಥವಾ ದೇಹ ದಂಡಿಸಿದ ಬಳಿಕ ಈ ವಿಶೇಷವಾದ ಜ್ಯೂಸ್ ಕುಡಿಯೋದರಿಂದು ಸೊಂಟದ ಸುತ್ತಲೂ ಜೋತು ಬಿದ್ದಿರುವ ಕೊಬ್ಬು ಕಡಿಮೆಯಾಗುತ್ತದೆ.

ಪೈನ್‌ಆಪಲ್ (ಅನಾನಸ್) ಮತ್ತು ಸೌತೆಕಾಯಿ ಕಾಂಬಿನೇಷನ್ ಜ್ಯೂಸ್ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಅನಾನಸ್ ಮತ್ತು ಸೌತೆಕಾಯಿ ಜೊತೆಯಲ್ಲಿ ಒಂದಿಷ್ಟು ಪದಾರ್ಥಗಳನ್ನು ಬಳಸಿಕೊಂಡು ಜ್ಯೂಸ್ ತಯಾರಿಸಬಹುದು. ಈ ಜ್ಯೂಸ್ ಕುಡಿಯೋದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಹಾಗೂ ನಿಶ್ಯಕ್ತಿಯನ್ನು ದೂರ ಮಾಡುತ್ತದೆ.

ಅನಾನಸ್: 4 ರಿಂದ 5 ಪೀಸ್, ಸೌತೆಕಾಯಿ: 4 ರಿಂದ 5 ಪೀಸ್, ಶುಂಠಿ: ಕಾಲು ಇಂಚು, ಚಿಟಿಕೆ ಅರಿಶಿನ, ಎರಡು ಲವಂಗ, ಕರಿಮೆಣಸು: 5 ರಿಂದ 6 ಮತ್ತು ನಿಂಬೆರಸ: 2 ಟೀ ಸ್ಪೂನ್, ಎರಡು ಪುದೀನಾ ಎಲೆ

ಮೊದಲಿಗೆ ಅನಾನಸ್ ಮತ್ತು ಸೌತೆಕಾಯಿ ತುಂಡುಗಳನ್ನು ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ. ನಂತರ ಜಜ್ಜಿಕೊಂಡಿರುವ ಲವಂಗ, ಕರಿಮೆಣಸು, ಶುಂಠಿಯನ್ನು ಸೇರಿಸಿಕೊಂಡು ಮತ್ತೊಮ್ಮೆ ಸಣ್ಣದಾಗಿ ರುಬ್ಬಿಕೊಂಡು ಜರಡಿ ಹಿಡಿದುಕೊಳ್ಳಿ. ಈಗ ಇದಕ್ಕೆ ಅರಿಶಿನ ಮತ್ತು ನಿಂಬೆರಸ ಸೇರಿಸಿದ್ರೆ ಬೊಜ್ಜು ಕರಗಿಸುವ ಜ್ಯೂಸ್ ಕುಡಿಯಲು ರೆಡಿ..

ಇದನ್ನೂ ಓದಿ: ದೋಸೆ ಹಿಟ್ಟಿಗೆ ಅದೊಂದು ಪದಾರ್ಥ ಹಾಕ್ರೀ.. ಹೋಟೆಲ್‌ ಮಸಾಲೆ ದೋಸೆ ಥರ ಕ್ರಿಸ್ಪಿಯಾಗಿ ರುಚಿ ಬರುತ್ತೆ!

ಸೌತೆಕಾಯಿ

ಸೌತೆಕಾಯಿ ಶೇ.95ರಷ್ಟು ನೀರಿನ ಪ್ರಮಾಣ ಹೊಂದಿದ್ದು, ನಿರ್ಜಲೀಕರಣ ಸಮಸ್ಯೆಯನ್ನು ಸುಧಾರಿಸಿ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಕಡಿಮೆ ಕ್ಯಾಲೋರಿ ಹೊಂದಿದ್ದು, ಅತ್ಯಧಿಕ ಪೌಷ್ಟಿಕತೆಯನ್ನು ಒಳಗೊಂಡಿದೆ. ಹಾಗಾಗಿ ತೂಕ ಇಳಿಕೆಗೆ ಸೌತೆಕಾಯಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಅನಾನಸ್

ಇದು ಹೈಲೆವೆಲ್ ವಿಟಮಿನ್ ಸಿ ಒಳಗೊಂಡಿದ್ದು, ರೋಗನಿರೋಧಕ ವ್ಯವಸ್ಥೆಯನ್ನ ದೃಢಪಡಿಸುತ್ತದೆ. ಹಾಗೆಯೇ ಅನಾನಸ್, ಮ್ಯಾಗ್ನಿಷ, ಫೈಬರ್ ಹೊಂದಿದೆ.

ಇದನ್ನೂ ಓದಿ: ನೋ ಶುಗರ್ ಟ್ರೆಂಡ್, ಐದು ವರ್ಷದಿಂದ ಟಾಪ್ ಒನ್ ಸ್ಥಾನ ಕಾಯ್ದುಕೊಂಡ ಶುಗರ್ ಫ್ರೀ ಡ್ರಿಂಕ್

Source link

Leave a Reply

Your email address will not be published. Required fields are marked *