ಬೆಂಗಳೂರು, ಫೆ.5: ನವರತ್ನಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಹವಳವು (ಕೆಂಪು ಹವಳ) ಅದೃಷ್ಟ, ಶಕ್ತಿ ಹಾಗೂ ಶುಭಕಾರ್ಯಗಳನ್ನು ತರುತ್ತದೆ. ಇದನ್ನು ಕೋರಲ್, ಬ್ಲಡ್ ಸ್ಟೋನ್ ಎಂದೂ ಕರೆಯುತ್ತಾರೆ. ಹವಳಕ್ಕೆ ಕುಜ ಗ್ರಹವು ಅಧಿಪತಿ, ಇದು ಮೇಷ ಮತ್ತು ವೃಶ್ಚಿಕ ರಾಶಿಗಳಿಗೆ ಒಡೆಯನಾಗಿರುತ್ತಾನೆ. ಆದರೆ ಹವಳವನ್ನು ಕೇವಲ ಈ ರಾಶಿಯವರು, ಅನೇಕರು ಧರಿಸುವುದಿಲ್ಲ. ಕುಜನು ನಮ್ಮಲ್ಲಿ ಶಕ್ತಿ, ಸಂಕಲ್ಪ, ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುವ ಗ್ರಹ. ವಿವಾಹ, ಸಂತಾನ, ಭೂಮಿ ಸಂಬಂಧಿತ ವಿಷಯಗಳಿಗೆ ಕುಜನೇ ಕಾರಕ.
ಕುಜ ಗ್ರಹವು ದುರ್ಬಲವಾದಾಗ, ಕೆಟ್ಟ ಸ್ಥಾನದಲ್ಲಿದ್ದಾಗ ಅಥವಾ ಕುಜ ಮಹಾದಶೆ ಬಂದಾಗ ಹವಳವನ್ನು ಧರಿಸುವುದರಿಂದ ಶುಭ ಫಲಗಳು ದೊರೆಯುತ್ತವೆ. ಇದನ್ನು ತಾಮ್ರ, ಬೆಳ್ಳಿ ಅಥವಾ ಬಂಗಾರದಲ್ಲಿ ಧರಿಸಬಹುದು. ಹವಳ ಧರಿಸುವುದರಿಂದ ಸಂಕುಚಿತ ಭಾವನೆಗಳು ದೂರವಾಗಿ ಧೈರ್ಯವನ್ನು ವೃದ್ಧಿಸುತ್ತದೆ. ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ಮತ್ತು ಶತ್ರು ಭಯ ನಿವಾರಣೆಯಲ್ಲಿ ಸಹಕಾರಿ. ಕನಿಷ್ಠ ಎರಡು ಕ್ಯಾರೆಟ್‌ನ ಶುದ್ಧ ಹವಳವನ್ನು ಉಂಗುರದ ಬೆರಳಿನಲ್ಲಿ ಧಾರಣೆ ಮಾಡುವುದು ಉತ್ತಮ. ಮಂಗಳವಾರದಂದು ಹಿರಿಯರ ಮುಖಾಂತರ ಅಭಿಷೇಕ ಮಾಡಿ ಧರಿಸಿದರೆ ಹೆಚ್ಚು ಶುಭ. ಆದಾಗ್ಯೂ, ವೃಷಭ, ಕುಂಭ, ಮತ್ತು ತುಲಾ ರಾಶಿಯವರು ಹವಳ ಧರಿಸುವುದು ಸೂಕ್ತವಲ್ಲ ಏಕೆಂದರೆ ಇದು ಮಾನಸಿಕ ಚಂಚಲತೆ ಮತ್ತು ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಡಾ. ಬಸವರಾಜ ಗುರೂಜಿ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ