
ಭಕ್ತಿಪೂರ್ವಕವಾಗಿ ಭಗವಂತನನ್ನು ಆರಾಧಿಸುವ ಅನೇಕ ವಿಧಾನಗಳಲ್ಲಿ, ದುರ್ಗಾದೇವಿಗೆ ವೀಳ್ಯದೆಲೆ ಹಾರವನ್ನು ಅರ್ಪಿಸುವುದು ಒಂದು ವಿಶೇಷ ಮಹತ್ವವನ್ನು ಹೊಂದಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ನಿರ್ಮಿಸಿದ ಡಾ. ಬಸವರಾಜ್ ಗುರೂಜಿಅವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿ ಹೇಳುವಂತೆ, ದುರ್ಗಾ ಅಂದರೆ ದುರ್ಗತಿನಾಶಿನಿ, ಅಂದರೆ ಎಲ್ಲಾ ದುರ್ಗತಿಗಳನ್ನು ನಾಶಪಡಿಸುವ ಶಕ್ತಿ ಸ್ವರೂಪಿಣಿ ತಾಯಿ. ಮಹಾಲಕ್ಷ್ಮಿ, ಮಹಾಕಾಳಿ, ಮಹಾಸರಸ್ವತಿ ಈ ತ್ರಿಶಕ್ತಿಗಳೂ ಕೂಡ ದುರ್ಗಾದೇವಿಯ ಅಂಶಗಳೇ ಆಗಿವೆ. ಈ ಕಾರಣಕ್ಕಾಗಿ ದುರ್ಗಾದೇವಿಗೆ ವೀಳ್ಯದೆಲೆ ಹಾರವನ್ನು ಅರ್ಪಿಸುವುದು ಅತ್ಯಂತ ಶುಭಕರವೆಂದು. ಹನುಮಂತ, ಮಹಾಲಕ್ಷ್ಮಿ ಮುಂತಾದ ದೇವತೆಗಳಿಗೆ ವೀಳ್ಯದೆಲೆ ಹಾರ ಅರ್ಪಿಸುವ ಪದ್ಧತಿಯಂತೆ, ದುರ್ಗಾದೇವಿಗೆ ಈ ಅರ್ಪಣೆಯು ನಮ್ಮ ಸಂಕಲ್ಪಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.
ದುರ್ಗಾದೇವಿಗೆ ವೀಳ್ಯದೆಲೆ ಹಾರವನ್ನು ಯಾವಾಗ ಮತ್ತು ಯಾವ ಉದ್ದೇಶಕ್ಕಾಗಿ ಅರ್ಪಿಸಬೇಕು ಎಂದು ಈ ಆಚರಣೆಯಲ್ಲಿ ವಿವರಿಸಲಾಗಿದೆ. ಜೀವನದಲ್ಲಿ ಭಯದ ವಾತಾವರಣ, ಕುಟುಂಬ ಅಥವಾ ಕಾನೂನು ವಿಷಯದ ಆತಂಕ, ಆರೋಗ್ಯದ ಭಯ, ವಾಹನ, ವ್ಯಾಪಾರ, ಸಾಲದ ಭಯ, ಮನಸ್ಸಿನ ಜಿಗುಪ್ಸೆ, ಒಂಟಿಯಾಗಿ ಮಾತನಾಡುವುದು ಅಥವಾ ನಗುವುದು, ಮಾತಿನಲ್ಲಿ ತೊಡುವುದು, ಕಣ್ಣಿನಲ್ಲಿ ನೀರು ಬರುವುದು, ಒಂಟಿಯಾಗಿ ಕುಳಿತು ಯೋಚಿಸುವುದು, ಮನಸ್ಸಿನಲ್ಲಿ ತುಂಬಿಕೊಳ್ಳುವುದು, ಜೀವನವೇ ಸಾಕಪ್ಪಾ ಎನ್ನುವಷ್ಟು ನಿರಾಸೆ ಕಾಡಿದಾಗ ಈ ಪೂಜೆಯು ಪರಿಹಾರವಾಗುತ್ತದೆ. ಜೊತೆಗೆ, ರಾಜಕೀಯವಾಗಿ ಅಪವಾದಗಳು ಎದುರಾದಾಗ, ಉನ್ನತ ಹುದ್ದೆಯಲ್ಲಿರುವವರು ಅಪಮಾನಗಳಿಗೆ ಅಥವಾ ಅಪಹಾಸ್ಯಕ್ಕೆ ಒಳಗಾದಾಗ, ಬುದ್ಧಿ ಮಂಕಾದಾಗ, ಜ್ಞಾಪಕಶಕ್ತಿ ಕೊರತೆಯಾದಾಗ, ಬಾಣಂತಿಯರಿಗೆ ಆರೋಗ್ಯ ಸಮಸ್ಯೆಗಳು ಕಾಡಿದಾಗ, ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗಿ ನಾಲಿಗೆ ಒಣಗಿದಾಗ ಈ ವಿಶೇಷ ಪೂಜೆಯನ್ನು ಆಚರಿಸಬಹುದು.
ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಬೇಕು ಯಾಕೆ ಗೊತ್ತಾ?
ಈ ಎಲ್ಲಾ ಸಮಸ್ಯೆಗಳಿಗೆ ಏಕೈಕ ವಿಧಾನವೆಂದರೆ, ಒಂಬತ್ತು ಮಂಗಳವಾರ ಸಂಧ್ಯಾಕಾಲದಲ್ಲಿ ಶ್ರೀ ದುರ್ಗಾದೇವಿಗೆ ಅಥವಾ ಯಾವುದೇ ಅಮ್ಮನ ದೇವಾಲಯದಲ್ಲಿ ವೀಳ್ಯದೆಲೆ ಹಾರವನ್ನು ಅರ್ಪಿಸುವುದು. ಈ ಹಾರವು 45 ಎಲೆಗಳಿಂದ ಕೂಡಿದ್ದು (4+5=9), ಈ ಹಾರವನ್ನು ಹೊಲಿದು ದೇವಿಗೆ ಸಮರ್ಪಿಸಬೇಕು. ನೈವೇದ್ಯವಾಗಿ ಬೆಲ್ಲದಿಂದ ಮಾಡಿದ ಸಿಹಿ ಪಾಯಸವನ್ನು ಅರ್ಪಿಸಬೇಕು. ನಂತರ ಅಲ್ಲಿ ಸ್ವಲ್ಪ ಹೊತ್ತು ಕುಳಿತು “ಓಂ ದುಂ ದುರ್ಗಾಯೈ” ಎಂಬ ಮಂತ್ರವನ್ನು ಜಪಿಸಬೇಕು. ಒಂಬತ್ತನೆಯ ಹಾಗೂ ಕೊನೆಯ ಮಂಗಳವಾರದಂದು, ನಿಮ್ಮ ಮನೆಯಲ್ಲಿ ಮೂರು ಜನ ಮುತ್ತೈದೆಯರಿಗೆ ಕದಳಿ ಫಲ (ಬಾಳೆಹಣ್ಣು) ಸಮೇತ ತಾಂಬೂಲವನ್ನು ನೀಡಿದರೆ, ನಿಮ್ಮ ಎಲ್ಲಾ ಸಂಕಟಗಳು ದೂರ ಎಂಬ ನಂಬಿಕೆ ಇದೆ ಎಂದು ಗುರೂಜಿ ಸಲಹೆ ನೀಡಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ