
ಬೆಂಗಳೂರು, ಮಾ.11: ನಿತ್ಯ ಭಕ್ತಿ ಕಾರ್ಯಕ್ರಮಕ್ಕೆ ಸುಸ್ವಾಗತ. ಯಾವುದೇ ಶುಭ ಸಮಾರಂಭಗಳು, ಉದ್ಘಾಟನೆ ಅಥವಾ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ದೀಪ ಬೆಳಗುವುದು ನಮ್ಮ ಸನಾತನ ಸಂಪ್ರದಾಯದಲ್ಲಿ ಹಾಸುಹೊಕ್ಕಾಗಿದೆ. ಈ ಪದ್ಧತಿಯ ಹಿಂದಿನ ಮಹತ್ವವನ್ನು ನಾವು ತಿಳಿಯಬೇಕು. ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಜ್ಯೋತಿ ಜನಾರ್ದನಃ ದೀಪೋ ಹರತು ಮೇ ಪಾಪನಿ ಸಂಧ್ಯಾ ದೀಪ ನಮೋಸ್ತುತೇ ಎಂಬ ಶ್ಲೋಕ ದೀಪದ ಆಧ್ಯಾತ್ಮಿಕ ಶಕ್ತಿಯನ್ನು ಸಾರುತ್ತದೆ. ದೀಪವನ್ನು ಭಗವಂತನ ಸ್ವರೂಪವೆಂದು ಸೂಚಿಸಲಾಗಿದೆ. ದೀಪದ ಜ್ವಾಲೆಯು ಯಾವಾಗಲೂ ಇರುತ್ತದೆ. ಇದು ಅಭಿವೃದ್ಧಿ ಮತ್ತು ಸಮೃದ್ಧಿಯ ಸಂಕೇತವಾಗಿದೆ. ದೀಪವು ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಧನಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ. ಅಜ್ಞಾನವನ್ನು ತೊಲಗಿಸಿ ಪ್ರಕಾಶದ ಬೆಳಕು ಕಾಣಿಸುತ್ತದೆ. ನಮ್ಮ ಮನೆಗಳಲ್ಲಿ ಪ್ರತಿದಿನ ಬೆಳಿಗ್ಗೆ ಪೂಜೆ ಪ್ರಾರಂಭಿಸುವ ಮೊದಲು ದೀಪ ಬೆಳಗುವ ಸಂಪ್ರದಾಯವಿದೆ. ದೀಪಾವಳಿಯಂತಹ ಹಬ್ಬಗಳಲ್ಲಿ ಮನೆ ತುಂಬ ದೀಪಗಳನ್ನು ಹಚ್ಚಿದ ಸಂಭ್ರಮ. ಈ ಮೂಲಕ ದೀಪವು ನಮ್ಮ ಜೀವನದಲ್ಲಿ ಶಕ್ತಿ ಮತ್ತು ಸಕಾರಾತ್ಮಕತೆಯನ್ನು ತುಂಬುತ್ತದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ