ಚಿನ್ನವನ್ನ ಪಿಂಕ್ ಪೇಪರ್‌ನಲ್ಲೇ ಯಾಕೆ ಸುತ್ತಿಕೊಡ್ತಾರೆ? ಇದರ ಹಿಂದಿನ ಅಸಲಿ ಲಾಜಿಕ್ ಏನು?

ಚಿನ್ನವನ್ನ ಪಿಂಕ್ ಪೇಪರ್‌ನಲ್ಲೇ ಯಾಕೆ ಸುತ್ತಿಕೊಡ್ತಾರೆ? ಇದರ ಹಿಂದಿನ ಅಸಲಿ ಲಾಜಿಕ್ ಏನು?



ಚಿನ್ನವನ್ನ ಪಿಂಕ್ ಪೇಪರ್‌ನಲ್ಲೇ ಯಾಕೆ ಸುತ್ತಿಕೊಡ್ತಾರೆ? ಇದರ ಹಿಂದಿನ ಅಸಲಿ ಲಾಜಿಕ್ ಏನು?
<p>Gold: ಚಿನ್ನ ಅಂದ್ರೆ ಎಷ್ಟೋ ಜನರಿಗೆ ಅದೊಂದು ಭಾವನಾತ್ಮಕ ವಿಚಾರ. ಒಂದು ಗ್ರಾಂ ಚಿನ್ನ ಖರೀದಿಸಿದರೂ ಅದನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಆದರೆ ಚಿನ್ನದ ಅಂಗಡಿಗಳಲ್ಲಿ ಬಂಗಾರವನ್ನು ಗುಲಾಬಿ ಬಣ್ಣದ ಪೇಪರ್‌ನಲ್ಲಿ ಸುತ್ತಿ ಕೊಡುವುದನ್ನು ನೀವು ಗಮನಿಸಿರಬಹುದು. ಹೀಗೆ ಯಾಕೆ ಮಾಡ್ತಾರೆ?.</p><img>ಚಿನ್ನ ಖರೀದಿಸಿದ ತಕ್ಷಣ, ಅದನ್ನು ಗುಲಾಬಿ ಬಣ್ಣದ ಕಾಗದದಲ್ಲಿ ಸುತ್ತಿ ಕೊಡುವುದನ್ನು ನೀವು ನೋಡಿರಬಹುದು. ಇದೇ ಬಣ್ಣವನ್ನು ಯಾಕೆ ಬಳಸುತ್ತಾರೆ ಎಂಬ ಪ್ರಶ್ನೆ ಹಲವರನ್ನು ಕಾಡಿರಬಹುದು. ಇದಕ್ಕೆ ಒಂದೇ ವೈಜ್ಞಾನಿಕ ಕಾರಣವಿಲ್ಲ. ಸಂಪ್ರದಾಯ, ಮಾನಸಿಕ ಪರಿಣಾಮ ಮತ್ತು ವ್ಯಾಪಾರದ ಅಗತ್ಯತೆಗಳು ಸೇರಿ ಈ ಪದ್ಧತಿ ಮುಂದುವರೆಯಲು ಕಾರಣವಾಗಿವೆ.<img>ನಮ್ಮ ದೇಶದಲ್ಲಿ ಜನರು ಚಿನ್ನವನ್ನು ಕೇವಲ ಆಭರಣವಾಗಿ ನೋಡುವುದಿಲ್ಲ. ಅದು ಸಂಪತ್ತಿನ ಸಂಕೇತ, ಶುಭದ ಸಂಕೇತ ಮತ್ತು ಭವಿಷ್ಯದ ಭದ್ರತೆಯ ಪ್ರತೀಕ. ಇಷ್ಟು ಅಮೂಲ್ಯವಾದ ಲೋಹವನ್ನು ಗ್ರಾಹಕರ ಕೈಗೆ ಕೊಡುವಾಗ ವಿಶೇಷತೆ ಇರಬೇಕೆಂದು ವ್ಯಾಪಾರಿಗಳು ಯೋಚಿಸುತ್ತಾರೆ. ಈ ಕಾರಣಕ್ಕಾಗಿಯೇ ಅವರು ವಿಶೇಷ ಬಣ್ಣದ ಕಾಗದ ಬಳಸುತ್ತಾರೆ. ಹೀಗೆ ಗುಲಾಬಿ ಬಣ್ಣದ ಪೇಪರ್ ಬಳಕೆಗೆ ಬಂದಿದೆ.<img>ಗುಲಾಬಿ ಬಣ್ಣ ನೋಡಿದ ತಕ್ಷಣ ಮನಸ್ಸಿಗೆ ಹಿತವಾದ ಅನುಭವ ನೀಡುತ್ತದೆ. ಮೃದುತ್ವ, ಸಕಾರಾತ್ಮಕ ಭಾವನೆ ಮತ್ತು ಶಾಂತಿಯಂತಹ ಗುಣಗಳು ಈ ಬಣ್ಣಕ್ಕಿವೆ. ಹೊಳೆಯುವ ಚಿನ್ನವನ್ನು ಗುಲಾಬಿ ಹಿನ್ನೆಲೆಯಲ್ಲಿ ಇಟ್ಟಾಗ ಅದು ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ. ‘ನಾನು ನಿಜವಾಗಿಯೂ ಬೆಲೆಬಾಳುವ ವಸ್ತುವನ್ನು ಖರೀದಿಸಿದ್ದೇನೆ’ ಎಂಬ ತೃಪ್ತಿ ಗ್ರಾಹಕನಿಗೆ ಸಿಗುತ್ತದೆ.<img>ಹಲವು ದಶಕಗಳಿಂದ ಆಭರಣದ ಅಂಗಡಿಗಳಲ್ಲಿ ಗುಲಾಬಿ ಅಥವಾ ತಿಳಿ ಕೆಂಪು ಬಣ್ಣದ ಕಾಗದಗಳನ್ನೇ ಬಳಸುತ್ತಿದ್ದಾರೆ. ಒಮ್ಮೆ ಶುರುವಾದ ಅಭ್ಯಾಸವೇ ನಂತರ ಸಂಪ್ರದಾಯವಾಗಿ ಬದಲಾಗುತ್ತದೆ. ಕಾಲ ಬದಲಾದರೂ ಈ ಪದ್ಧತಿ ಬದಲಾಗಿಲ್ಲ. ಚಿನ್ನ ಅಂದರೆ ಗುಲಾಬಿ ಪೇಪರ್ ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಅರಿವಿಲ್ಲದಂತೆಯೇ ಬೇರೂರಿದೆ.<img>ಗುಲಾಬಿ ಬಣ್ಣದ ಕಾಗದದ ಮೇಲೆ ಕೊಳೆ ಮತ್ತು ಮಡಿಕೆಗಳು ಬೇಗನೆ ಕಾಣಿಸುವುದಿಲ್ಲ. ಖರ್ಚಿನ ದೃಷ್ಟಿಯಿಂದಲೂ ಇದು ದುಬಾರಿಯಲ್ಲ. ಎಲ್ಲಾ ಕಡೆ ಒಂದೇ ಬಣ್ಣ ಬಳಸುವುದರಿಂದ ಅಂಗಡಿಗಳಿಗೆ ಒಂದು ವಿಶೇಷ ಗುರುತು ಸಿಗುತ್ತದೆ. ಗ್ರಾಹಕರ ಕೈಗೆ ಕೊಡುವಾಗಲೂ ಪ್ರೀಮಿಯಂ ಅನುಭವ ನೀಡುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಚಿನ್ನದ ಮಾರಾಟದಲ್ಲಿ ಗುಲಾಬಿ ಪೇಪರ್ ಬಳಕೆ ಇಂದಿಗೂ ಮುಂದುವರೆದಿದೆ.



Source link

Leave a Reply

Your email address will not be published. Required fields are marked *