ದಾರಿ ತಪ್ಪಿದ ಮುಸ್ಲಿಮರು; ದೆಹಲಿ ಸ್ಫೋಟದ ಆರೋಪಿ ವಿಡಿಯೋಗೆ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಪ್ರತಿಕ್ರಿಯೆ

ದಾರಿ ತಪ್ಪಿದ ಮುಸ್ಲಿಮರು; ದೆಹಲಿ ಸ್ಫೋಟದ ಆರೋಪಿ ವಿಡಿಯೋಗೆ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಪ್ರತಿಕ್ರಿಯೆ


ನವದೆಹಲಿ, ನವೆಂಬರ್ 18: ದೆಹಲಿಯಲ್ಲಿ ನಡೆದ ಬಾಂಬ್ ದಾಳಿಗೆ (ದೆಹಲಿ ಕಾರ್ ಸ್ಫೋಟ ಪ್ರಕರಣ) ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ದಾಳಿಕೋರರನ್ನು ದಾರಿ ತಪ್ಪಿದ ಯುವಕರು ಹೇಳಿದ್ದಾರೆ. “ನೀವು ಮುಗ್ಧ ಜನರನ್ನು ಕೊಲ್ಲುತ್ತಿದ್ದೀರಿ, ಇಸ್ಲಾಂ ಈ ರೀತಿಯ ಹಿಂಸೆಯನ್ನು ಎಂದೂ ಕಲಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ. ಅವರ ಹೇಳಿಕೆ ರಾಜಕೀಯ ಸಂಚಲನವನ್ನು ಹುಟ್ಟುಹಾಕಿದೆ.

ದಾಳಿಯ ಮುನ್ನ ಆತ್ಮಹತ್ಯಾ ಬಾಂಬರ್ ಉಮರ್ ಮೊಹಮ್ಮದ್ ನಬಿ ಅವರ ವೀಡಿಯೋಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ದೆಹಲಿ ಇಮ್ರಾನ್, “ಆ ವೀಡಿಯೊವನ್ನು ನಾನು ಒಪ್ಪುವುದಿಲ್ಲ. ಅದು ಆತ್ಮಹತ್ಯಾ ದಾಳಿಯನ್ನು ಸಮರ್ಥಿಸುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಯಾವುದೇ ಸಂದರ್ಭದಲ್ಲೂ ಇಸ್ಲಾಂನಲ್ಲಿ ಆತ್ಮಹತ್ಯೆ ಸ್ವೀಕಾರಾರ್ಹವಲ್ಲ. ಹೇಳಿದ್ದಾರೆ.

“ನಮ್ಮ ಧರ್ಮವು ನಮ್ಮ ದೇಶವನ್ನು ಪ್ರೀತಿಸಲು ನಮಗೆ ಕಲಿಸುತ್ತದೆ. ಆದ್ದರಿಂದ, ಈ ರೀತಿ ದಾಳಿ ಮಾಡುವ ಮೂಲಕ ನೀವು ದೇಶಕ್ಕೆ ವಿರುದ್ಧವಾಗಿದ್ದೀರಿ. ಇದಕ್ಕೂ ಇಸ್ಲಾಂಗೂ ಯಾವುದೇ ಸಂಬಂಧವಿಲ್ಲ. ಅವರು ದಾರಿ ತಪ್ಪಿದ ಜನರು. ಈ ದಾರಿ ತಪ್ಪಿದ ಜನರ ಮಾತುಗಳು ಇಸ್ಲಾಂನ ಚಿತ್ರಣವನ್ನು ಪ್ರಸ್ತುತಪಡಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *