ಸುಖ, ಸಂತೋಷ ಮತ್ತು ನೆಮ್ಮದಿ ನೆಲೆಸಲು ಕುಟುಂಬ ಸದಸ್ಯರ ನಡುವೆ ಕೆಲವು ನೀತಿ-ನಿಬಂಧನೆಗಳನ್ನು ಅನುಸರಿಸುವುದು ಅತಿ ಮುಖ್ಯ. ವಿಶೇಷವಾಗಿ ದಾಂಪತ್ಯ ಜೀವನ ಸೌಖ್ಯಮಯವಾಗಿರಲು ಪತ್ನಿಯರು ಪತಿಯೊಂದಿಗೆ ಕೆಲವು ವಿಷಯಗಳನ್ನು ಗೋಪ್ಯವಾಗಿ ಇಟ್ಟುಕೊಳ್ಳಬೇಕು ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಯನ್ನು ಹೇಳಬೇಕು ಎಂದು ಪ್ರಸಿದ್ಧ ಜ್ಯೋತಿಷಿ ಮತ್ತು ವಾಸ್ತು ಸಂಸ್ಥೆಯ ಡಾ ಬಸವರಾಜ ಗುರೂಜಿ ವಿವರಿಸಿದ್ದಾರೆ. ಮುಖ್ಯವಾಗಿ ಐದು ವಿಷಯಗಳನ್ನು ಪತ್ನಿಯರು ಜಾಗರೂಕತೆಯಿಂದ ನಿರ್ವಹಿಸಿದರೆ ಗಂಡ-ಹೆಂಡತಿಯ ಬಾಂಧವ್ಯ ಸುಂದರ ಎಂದು ಚಾಣಕ್ಯರು ವಿವರಿಸಿದ್ದಾರೆ ಅವರು ಮಾಹಿತಿ ನೀಡಿದ್ದಾರೆ. ಇರುವ, ತವರು ಮನೆಯ ವಿಚಾರಗಳು, ಆರ್ಥಿಕ ಸ್ಥಿತಿ ಅಥವಾ ಪದೇ ಪದೇ ಗಂಡನೊಂದಿಗೆ ಹಂಚಿಕೊಳ್ಳಬಾರದು. ಇದು ಕೆಲವೊಮ್ಮೆ ಕಲಹಗಳಿಗೆ ಕಾರಣವಾಗುತ್ತದೆ.
ಎರಡನೆಯದಾಗಿ, ಕುಟುಂಬದ ಒಳಿತಿಗಾಗಿ ಅಥವಾ ಮಕ್ಕಳಿಗಾಗಿ ಆಗಾಗ್ಗೆ ಸುಳ್ಳು ಹೇಳುವುದು ಅನಿವಾರ್ಯವಾದರೂ, ಪದೇ ಪದೇ ಸುಳ್ಳು ಹೇಳುವುದರಿಂದ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಮೂರನೆಯದಾಗಿ, ಪತ್ನಿ ಯಾವಾಗಲೂ ತನ್ನ ಗಂಡನನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಬಾರದು. ಅವರ ಆದಾಯ, ಜೀವನಶೈಲಿ ಅಥವಾ ಸಾಧನೆಗಳನ್ನು ಉಲ್ಲೇಖಿಸಿ ಗಂಡನನ್ನು ನಿಂದಿಸುವುದು ಸಂಬಂಧಕ್ಕೆ ಹಾನಿಕಾರಕ. ನಾಲ್ಕನೆಯದಾಗಿ, ತನ್ನ ವೈಯಕ್ತಿಕ ಉಳಿತಾಯದ ಬಗ್ಗೆ ಗಂಡನಿಗೆ ವಿವರವಾಗಿ ಹೇಳಬಾರದು. ಇದು ಗಂಡನನ್ನು ನಿರ್ಲಕ್ಷ್ಯವಾಗಿ ಮಾಡಬಹುದು ಅಥವಾ ಹಣಕಾಸಿನ ವಿಚಾರದಲ್ಲಿ ಬೇಜವಾಬ್ದಾರಿಯಾಗಬಹುದು. ಕೊನೆಯದಾಗಿ, ಎಷ್ಟು ಕೋಪ ಅಥವಾ ಬೇಸರ ಇದ್ದರೂ ಗಂಡನ ಜೊತೆ ತಾಳ್ಮೆಯಿಂದ, ನಗುಮುಖದಿಂದ ವ್ಯವಹರಿಸಬೇಕು. ಸಮಸ್ಯೆಗಳಿದ್ದರೆ ಅವರಿಗೆ ನೇರವಾಗಿ ಮತ್ತು ಸಮಾಧಾನದಿಂದ ಹೇಳಬೇಕು. ಈ ಚಾಣಕ್ಯ ನೀತಿಗಳು ದಾಂಪತ್ಯ ಜೀವನದಲ್ಲಿ ಸಾಮರಸ್ಯ ಮತ್ತು ಯಶಸ್ಸಿಗೆ ದಾರಿ ತೋರಿಸುತ್ತವೆ ಎಂದು ಗುರೂಜಿ ಹೇಳಿದ್ದಾರೆ.