ತಿರುವನಂತಪುರಂ, ಜನವರಿ 01: ಕೇರಳದ ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಭೇರಿ ಸಾಧಿಸಿ ಮೇಯರ್ ಹುದ್ದೆಗೇರಿದ ಬಿಜೆಪಿ ಮುಖಂಡರಿಗೆ ಪ್ರಧಾನಿ ನರೇಂದ್ರ ಮೋದಿನರೇಂದ್ರ ಮೋದಿ) ಹೃದಯ ಪೂರ್ವಕ ಭಾವನಾತ್ಮಕ ಪತ್ರ ಬರೆದಿದ್ದಾರೆ. 2026ರ ಹೊಸ ವರ್ಷದ ಸುಸಂದರ್ಭದಲ್ಲಿ ಮೇಯರ್ ಆಗಿ ನೇಮಕವಾಗಿರುವ ವಿವಿ ರಾಜೇಶ್ ಹಾಗೂ ಉಪ ಮೇಯರ್ ಆಶಾ ಮಾತ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಅಭೂತಪೂರ್ವ ಜಯಕ್ಕೆ ಕಾರಣವಾದ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೇರಳದ ಜತೆಗಿನ ನಂಟನ್ನು ಸ್ಮರಿಸಿಕೊಂಡಿರುವ ನರೇಂದ್ರ ಮೋದಿ, ತಿರುವನಂತಪುರನ್ನರೊಂದಿಗೆ ತಮ್ಮ ನೆನಪನ್ನು ಹಂಚಿಕೊಂಡಿದ್ದಾರೆ. ಪದ್ಮನಾಭ ಸ್ವಾಮಿಯ ಅನುಗ್ರಹ ಪಡೆದಿರುವ ನನಗೆ ಕೇರಳದ ಈ ನೆಲಸ ಮೇಲೆ ವಿಶೇಷ ಅಭಿಮಾನವಿದೆ.
ಹಾಗೆಯೇ ತಿರುವನಂತಪುರ ನಗರವು ಹಲವಾರು ನಾಯಕರು, ಸಮಾಜ ಸುಧಾರಕರು, ಕಲಾವಿದರು, ಕವಿಗಳು, ಸಂಗೀತಗಾರರು, ಸಾಂಸ್ಕೃತಿಕ ಧಿಗ್ಗಜರು, ಸಂತರನ್ನು ಹೊಂದಿರುವ ನಾಡಾಗಿದೆ. ಇಂಥಾ ನಗರವು ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಿರುವುದು ಹೆಮ್ಮೆಯ ವಿಚಾರ.
ಮತ್ತಷ್ಟು ಓದಿ: ಹೊಸ ವರ್ಷ 2026: ವಿಧಾನಸಭಾ ಚುನಾವಣಾ ಕದನ, ಒಂದು ರಾಷ್ಟ್ರ, ಒಂದು ಚುನಾವಣೆ, ಜನಗಣತಿ ಈ ವರ್ಷ ಏನೆಲ್ಲಾ ನಡೀ?
ಈ ನಗರದ ಅಭಿವೃದ್ಧಿಗೆ ನಮ್ಮ ನಾಯಕತ್ವವು ಶ್ರಮಿಸಲಿದೆ. ನಮ್ಮ ಪಕ್ಷವು ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ರಾಜ್ಯಗಳಲ್ಲಿ ಮಾಡಿರುವ ಅಭಿವೃದ್ಧಿ ಪಥವನ್ನು ಬಯಸಿ ಇಲ್ಲಿಯ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಮೋದಿ ಬರೆದ ಪತ್ರ
ಈ ಮನ್ನಣೆಯು ಗೌರವಾನ್ವಿತ ಪ್ರಧಾನ ಮಂತ್ರಿಗಳು ಕೇರಳಕ್ಕೆ ನೀಡಿದ ಹೊಸ ವರ್ಷದ ಉಡುಗೊರೆಯಾಗಿದೆ. ತಿರುವನಂತಪುರಂನ ರಾಜಕೀಯ ಬದಲಾವಣೆಯು ಕೇರಳದ ಬಿಜೆಪಿ ಕಾರ್ಯಕರ್ತರ ದಶಕಗಳ ಪರಿಶ್ರಮದ ಫಲವಾಗಿದೆ. ಈ ಮನ್ನಣೆ ಕೇರಳಕ್ಕೆ ಮೋದಿಜಿ ನೀಡಿದ ಹೊಸ ವರ್ಷದ ಉಡುಗೊರೆ pic.twitter.com/IetOr9WPbH
– ವಿವಿ ರಾಜೇಶ್ (@VVRAJESH_BJP) ಜನವರಿ 1, 2026
ಕೇರಳ ಹಾಗೂ ದೇಶದ ಅಗಣಿತ ಬಿಜೆಪಿ ಕಾರ್ಯಕರ್ತರ ಪರವಾಗಿ ಈ ಹೆಮ್ಮೆಯ ವಿಚಾರವನ್ನು ಹೇಳಲು ಖುಷಿಯಾಗುತ್ತದೆ. ತಿರುವನಂತಪುರಂ ಜನತೆಯ ಈ ತೀರ್ಪು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವ ವಿಚಾರವಾಗಿದೆ ಎಂದು ಮೋದಿ ಹೇಳಿದ್ದಾರೆ.
ಕಾಲ ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರು ಕಠಿಣ ಹಾದಿಯನ್ನು ಸವೆಸಿ ಬಂದಿದ್ದಾರೆ. ಕೇರಳದ ಎಲ್‌ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟದ ದುರಾಡಳಿತವನ್ನು ವರ್ಷಗಳ ಕಾಲ ಅಲ್ಲಿನ ಜನರು ನೋಡುತ್ತಿದ್ದಾರೆ.ಇನ್ನೆಡೆ ಕೇರಳದ ಸಂಸ್ಕೃತಿಯನ್ನು ನಾಶಪಡಿಸುವ ಪ್ರಯತ್ನವನ್ನು ಈ ಕೂಡಿಸುವುದರ ಜೊತೆಗೆ ದುರಾಡಳಿತ ಮತ್ತು ಭ್ರಷ್ಟಾಚಾರದ ಮೂಲಕ ರಾಜ್ಯದ ಜನತೆಗೆ ಮೋಸ ಮಾಡಿದರು.
ಬಿಜೆಪಿ ಸಂಘಟನೆಯ ಮೇಲಿನ ನಿರಂತರ ಹಿಂಸಾಚಾರದ ಬಳಿಕವೂ ಕಾರ್ಯಕತರ್ರು ಪಕ್ಷಕ್ಕಾಗಿ ಧೈರ್ಯದಿಂದ ಎದೆ ತಟ್ಟಿದ್ದಾರೆ, ಜನರ ಧ್ವನಿಯಾಗಿ ಪಕ್ಷವ ಬಾವುಟವನ್ನು ಹಿಡಿದು ಧೈರ್ಯದಿಂದ ನಿಂತಿದ್ದಾರೆ ಎಂದು ಮೋದಿ ಕೊಂಡಾಡಿದ್ದಾರೆ. ಇಂದು ಭಾರತ ಮೊದಲು ಎಂಬ ಸಿದ್ಧಾಂತದೊಂದಿಗೆ ಹೋರಾಡಿದ ಹಲವು ಕಾರ್ಯಕರ್ತರು ಇಂದು ನಮ್ಮೊಂದಿಗೆ ಇಲ್ಲವಾದರೂ ಈ ಗೆಲುವು ಅವರಿಗೆ ಖುಷಿ ತರಲಿದೆ ಎಂದು ಮೋದಿ ಭಾವುಕ ನುಡಿಗಳನ್ನು ಬರೆದಿದ್ದಾರೆ.
ತಿರುವನಂತಪುರಂನ ಈ ಗೆಲುವು ಕೇರಳ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಲು ಮುನ್ನುಡಿಯಾಗಲಿದೆ , ಈ ಆಧುನಿಕ ನಮ್ಮ ಕಾರ್ಯಕರ್ತರು ಹಾಗೂ ಪಕ್ಷ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 1:12 pm, ಗುರುವಾರ, 1 ಜನವರಿ 26